ಚಲೋ ಉಡುಪಿ: ಉಡುಪಿ ಸ್ವಾಗತ ಸಮಿತಿಯಿಂದ ಎಸ್ಪಿ ಭೇಟಿ

ಉಡುಪಿ, ಅ.2: ಉಡುಪಿ ಚಲೋ ಸ್ವಾಗತ ಸಮಿತಿಯ ತಂಡವು ಉಡುಪಿ ಎಸ್ಪಿ ಬಾಲಕೃಷ್ಣ ಅವರನ್ನು ಭೇಟಿ ಮಾಡಿತು. ಈ ಸಂದರ್ಭ ಎಸ್ಪಿಯವರ ಬಳಿ ದಲಿತ ದಮನಿತರ ಸ್ವಾಭಿಮಾನಿ ಸಂಘರ್ಷ ಜಾಥಾ ಮತ್ತು ಸಮಾವೇಶದ ಬಗ್ಗೆ ಬೇಕಾದ ಅನುಮತಿ ರಕ್ಷಣಾ ವ್ಯವಸ್ಥೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಕೋರಲಾಯಿತು.
ತಂಡದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಸುಂದರ ಮಾಸ್ತರ್, ದಲಿತ ಮುಂದಾಳು ಜಯನ್ ಮಲ್ಪೆ, ಸಂಚಾಲಕ ಶ್ಯಾಮರಾಜ್ ಬಿರ್ತಿ, ಖಜಾಂಚಿ ಕೆ.ಪಣಿರಾಜ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್, ದಲಿತ ನಾಯಕರಾದ ಸುಂದರ್ ಕಪ್ಪೆಟ್ಟು, ವಾಸು ಬೇಜಾರು, ಕದಸಂಸ ಅಂಬೇಡ್ಕರ್ ವಾದದ ತಾಲೂಕು ಸಂಚಾಲಕ ಪರಮೇಶ್ವರ್ ಉಪ್ಪೂರು,ಅಣ್ಣಪ್ಪ ಕೊಳಲಗಿರಿ ಮೊದಲಾದವರಿದ್ದರು.
ವರದಿ : ಬಿ.ಆರ್.ಭಾಸ್ಕರ ಪ್ರಸಾದ್.
Next Story





