ನಾಡು ಸ್ವಚ್ಛವಾಗಿರಬೇಕಾದರೆ ಮನಸ್ಸು ಸ್ವಚ್ಛವಾಗಿರಬೇಕು: ಡಾ. ಇಸ್ಮಾಯೀಲ್
ಮಂಗಳೂರು, ಅ.2: ನಾಡು ಸ್ವಚ್ಛವಾಗಿರಬೇಕಾದರೆ ಮನಸ್ಸು ಸ್ವಚ್ಚವಾಗಿರಬೇಕು ಎಂಬುದು ಮಹಾತ್ಮ ಗಾಂಧಿಯವರ ಆಶಯವಾಗಿತ್ತು. ಅವರ ಆಶಯವನ್ನು ಈಡೇರಿಸಲು ಮನಸ್ಸು ಸ್ವಚ್ಛವಾಗಿಡಬೇಕು ಎಂದು ಬದ್ರಿಯ ಕಾಲೇಜಿನ ಪ್ರಾಂಶುಪಾಲ ಡಾ. ಇಸ್ಮಾಯೀಲ್ ಹೇಳಿದರು.
ಅವರು ಭಾರತ್ ಸೇವಾದಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಂದೇಶ ನೀಡಿ ಮಾತನಾಡಿದರು. ಗಾಂಧೀಜಿಯವರ ಬದುಕಿನಲ್ಲಿ ಹಲವು ಮಹಾನ್ ವ್ಯಕ್ತಿಗಳನ್ನು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೆಎಸ್ಸಾರ್ಟಿಸಿ ನಿರ್ದೇಶಕ ಸುಧೀರ್ ಟಿ.ಕೆ, ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಕೇಂದ್ರೀಯ ಸಮಿತಿ ಸದಸ್ಯ ಆಲ್ಪೋನ್ಸೋ ಫ್ರಾಂಕೋ , ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು.
Next Story





