ತ್ರಿಶಂಕು ಸ್ಥಿತಿಯಲ್ಲಿ ಸೈನಿಕ ಚಂದೂ

ಹೊಸದಿಲ್ಲಿ, ಅಕ್ಟೋಬರ್ 2: ಪಾಕಿಸ್ತಾನ ಸೆರೆಹಿಡಿದಿರುವ ಸೈನಿಕ ಚಂದೂ ಬಾಬುಲಾಲ್‌ರ ಭವಿಷ್ಯ ಈಗಲೂ ತ್ರಿಶಂಕು ಸ್ಥಿತಿಯಲ್ಲಿಯೇ ಉಳಿದಿದೆ ಎಂದು ವರದಿಯಾಗಿದೆ. ಅವರು ಪಾಕಿಸ್ತಾನದ ವಶವಾಗಿ ಕೆಲವು ದಿವಸಗಳಾದರೂ ಸೈನಿಕ ಎಲ್ಲಿದ್ದಾರೆಂದು ಪಾಕಿಸ್ತಾನ ಬಹಿರಂಗಪಡಿಸಿಲ್ಲ. ಅವರನ್ನು ಬಿಡುಗಡೆಗೊಳಿಸಬೇಕು ಎಂಬ ಭಾರತದ ಆಗ್ರಹಕ್ಕೂ ಪ್ರತಿಕ್ರಿಯಿಸಿಲ್ಲ. 37ರೈಫಲ್‌ನ ಜವಾನರಾದ ಚಂದೂ ಬಾಬುಲಾಲ್ ಮಹಾರಾಷ್ಟ್ರದ ಧುಲೆಯವರಾಗಿದ್ದಾರೆ. ಮೂರುವರ್ಷಗಳ ಹಿಂದೆ ಅವರು ಸೇನೆಗೆ ಸೇರಿದ್ದರು. ಬುಧವಾರ ಮಧ್ಯರಾತ್ರಿ ವೇಳೆ ಮಿಂಚಿನ ಆಕ್ರಮಣ ನಡೆಸಿದ ಭಾರತದ ಸೈನಿಕರಲ್ಲಿ ಒಬ್ಬರನ್ನು ಜೀವಂತಸೆರೆಹಿಡಿದಿದ್ದೇವೆ ಹಾಗೂ ಎಂಟು ಮಂದಿಯನ್ನು ಹತ್ಯೆಮಾಡಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಭಾರತದ ಸೈನಿಕ ಪಾಕಿಸ್ತಾನದ ಕಸ್ಟಡಿಯಲ್ಲಿರುವ ವಿಷಯವನ್ನು ಪಾಕಿಸ್ತಾನ ದೃಢೀಕರಿಸಿದ್ದರೂ ಸೈನಿಕನನ್ನು ಸರೆಹಿಡಿದ ಪರಿಸ್ಥಿತಿ ಬೇರೆಯೇ ಆಗಿದೆ ಎಂದು ಕೇಂದ್ರಸರಕಾರ ಹೇಳಿದೆ. ಗಡಿನಿಯಂತ್ರಣ ರೇಖೆಯಲ್ಲಿ ಕಾವಲಿಗೆ ನಿಯೋಜಿಸಲಾಗಿದ್ದ ಚಂದೂ ದಾರಿ ತಪ್ಪಿ ಗಡಿ ದಾಟಿದ್ದರು. ಆಗ ಅವರನ್ನು ಬಂಧಿಸಲಾಗಿದೆ ಎಂದು ಕೇಂದ್ರಸರಕಾರ ವಾದಿಸಿದೆ.
ಆದರೆ ಮಿಂಚಿನದಾಳಿ ನಡೆಸಿದ ಆರಾತ್ರಿಯೇ ಚಂದು ದಾರಿತಪ್ಪಿ ಪಾಕ್ ಗಡಿದಾಟಿದ್ದಾರೆ ಎಂಬ ವಾದವನ್ನು ಕೆಲವರು ಒಪ್ಪಿಕೊಂಡಿಲ್ಲ. ಮಿಂಚಿನದಾಳಿಯ ಯಶಸ್ಸನ್ನು ಆಚರಿಸುವಾಗಲೇ ಒಬ್ಬ ಸೈನಿಕ ಜೀವಂತವಾಗಿ ಪಾಕಿಸ್ತಾನದ ಸೆರೆಯಲ್ಲಿದ್ದಾರೆ. ಮಿಂಚಿನ ದಾಳಿ ನಡೆಸಿದ ಸೇನೆಯ ಸದಸ್ಯನಾಗಿದ್ದರೂ, ದಾರಿ ತಪ್ಪಿ ಗಡಿದಾಟಿದ್ದರೂ ಚಂದೂರ ಬಿಡುಗಡೆ ಸುಲಭಪ್ರಕ್ರಿಯೆಯಾಗಿಲ್ಲ. ಪಾಕ್‌ಕೈಗೆ ಸಿಕ್ಕಿಕೊಂಡ ಸೈನಿಕನ ಪರೀಕ್ಷೆಗೊಳಗಾಗುವ ಸಾಧ್ಯತೆಯೇ ಹೆಚ್ಚು. ಸಾಮಾನ್ಯ ಸ್ಥಿತಿಯಿರುತ್ತಿದ್ದರೆ ಸೈನಿಕನನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಬೇಕಾಗುತ್ತಿತ್ತು..ಅದರೆ ಈಗಿನ ಪರಿಸ್ಥಿತಿ ಬೇರೆಯೇ ಆಗಿದೆ.
ಮಿಂಚಿನ ದಾಳಿಯಲ್ಲಿ ನಮ್ಮ ಇಬ್ಬರು ಸೈನಿಕರು ಹತರಾಗಿದ್ದಾರೆಂದು ಪಾಕಿಸ್ತಾನಹೇಳಿದೆ. ಅಂತೂ ಸೆರೆಯಾದ ಸೈನಿಕ ಚಂದೂ ಇಂತಹ ವಿಷಯಗಳ ಬಲಿಪಶುವಾಗಿ ಬದಲಾಗಿದ್ದಾರೆ. ಸೈನಿಕನ ಬಿಡುಗಡೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಗೃಹಸಚಿವ ರಾಜ್‌ನಾಥ್ ಸಿಂಗ್ ನಿನ್ನೆ ಭರವಸೆ ನೀಡಿದ್ದಾರೆಂದು ವರದಿ ತಿಳಿಸಿದೆ.







