ಅನನ್ಯ ಕಾಸರವಳ್ಳಿ ನಿರ್ದೇಶನದ 'ಹರಿಕಥಾ ಪ್ರಸಂಗ' ಬೂಸಾನ್ ಚಿತ್ರೋತ್ಸವಕ್ಕೆ ಆಯ್ಕೆ

ಅನನ್ಯ ಕಾಸರವಳ್ಳಿ ನಿರ್ದೇಶನದ ಮೊಟ್ಟಮೊದಲ ಚಿತ್ರ 'ಹರಿಕಥಾ ಪ್ರಸಂಗ', ಬೂಸಾನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊಟ್ಟಮೊದಲ ಚಿತ್ರ ಎಂಬ ಹೆಗ್ಗಳಿಕೆಯೂ ಈ ಚಿತ್ರದ್ದು.
ಗಿರೀಶ್ ಕಾಸರವಳ್ಳಿ ಹಾಗೂ ಗೋಪಾಲಕೃಷ್ಣ ಪೈ ಚಿತ್ರಕಥೆ ನಿರ್ಮಿಸಿದ್ದು, ಗೋಪಾಲಕೃಷ್ಣ ಪೈ ಅವರ ಸಣ್ಣ ಕಥೆಯನ್ನಾಧರಿಸಿ ಈ ಚಿತ್ರ ನಿರ್ಮಾಣವಾಗಿದೆ. ಹರಿ ಎಂಬ ಯಕ್ಷಗಾನ ಕಲಾವಿದ, ಸ್ತ್ರೀಪಾತ್ರ ನಿರ್ವಹಿಸಿ, ಅತ್ಯಂತ ಜನಪ್ರಿಯತೆ ಗಳಿಸುವುದು ಇಲ್ಲಿನ ಕಥಾವಸ್ತು. ಆದರೆ ಕ್ರಮೇಣ, ವೇದಿಕೆಯಲ್ಲಿ ನಾನು ಸ್ತ್ರೀಪಾತ್ರ ನಿರ್ವಹಿಸಿ, ವೇದಿಕೆ ಹೊರಗೆ ಪುರುಷ ಪಾತ್ರ ನಿರ್ವಹಿಸುತ್ತಿದ್ದೇನೆಯೇ ಎಂಬ ಸಂದೇಹ ಅವರಲ್ಲಿ ಮೂಡುತ್ತದೆ. ಇದು ಅವರಲ್ಲಿ ಲಿಂಗಸಂಬಂಧಿ ಐಡೆಂಟಿಟಿ ಸಂದಿಗ್ಧತೆಗೆ ಕಾರಣವಾಗುತ್ತದೆ. ಇದು ಅವರ ಆತ್ಮಾವಲೋಕನ ಹಾಗೂ ವಿಶ್ವದ ಸಂಶೋಧನೆಗೆ ಕಾರಣವಾಗುತ್ತದೆ.
"ಈ ಸಾಧನೆ ನಮಗೆ ಹಾಗೂ ಈ ಚಿತ್ರವನ್ನು ಗಂಭೀರವಾಗಿ ಪರಿಗಣಿಸಿದ ಅಸಂಖ್ಯಾತ ಅಭಿಮಾನಿಗಳಿಗೆ ಅತೀವ ಸಂತಸ ತಂದಿದೆ. ಬೂಸಾನ್ ಚಿತ್ರೋತ್ಸವವನ್ನು ಪೌರಾತ್ಯ ದೇಶಗಳ ಕೇನ್ಸ್ ಚಿತ್ರೋತ್ಸವ ಎಂದು ಪರಿಗಣಿಸಲಾಗುತ್ತಿದ್ದು, ಇದು ಅತ್ಯಂತ ಪ್ರಮುಖ ಚಿತ್ರೋತ್ಸವ. ಇನ್ನೂ ಹಲವು ಚಿತ್ರೋತ್ಸವಗಳು ಮುಂದಿನ ತಿಂಗಳುಗಳಲ್ಲಿ ಇದ್ದು, ಹಲವು ಕಡೆಗಳಿಗೆ ನಾವು ಪ್ರವಾಸ ಕೈಗೊಳ್ಳುತ್ತೇವೆ ಎಂಬ ವಿಶ್ವಾಸವಿದೆ" ಎಂದು ಅನನ್ಯ ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.







