Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಗಿನ್ನೆಸ್ ಸೇರಲು ಸಜ್ಜಾಗಿದೆ ಉಜಿರೆ...

ಗಿನ್ನೆಸ್ ಸೇರಲು ಸಜ್ಜಾಗಿದೆ ಉಜಿರೆ ಎಸ್‌ಡಿಎಂ ವಿದ್ಯಾರ್ಥಿಗಳ ‘ವಿನೂತನ ಪ್ರಯತ್ನ’

ವಾರ್ತಾಭಾರತಿವಾರ್ತಾಭಾರತಿ2 Oct 2016 7:44 PM IST
share
ಗಿನ್ನೆಸ್ ಸೇರಲು ಸಜ್ಜಾಗಿದೆ ಉಜಿರೆ ಎಸ್‌ಡಿಎಂ ವಿದ್ಯಾರ್ಥಿಗಳ ‘ವಿನೂತನ ಪ್ರಯತ್ನ’

ಬೆಳ್ತಂಗಡಿ, ಅ.2: 13.41 ಚದರ ಮೀ. ಅಳತೆಯ ಬೃಹತ್ ಜಾಲರಿ ಪರದೆಯ ಮೇಲೆ 4,500 ರೂಬಿಕ್ ಫಜಲ್ ಕ್ಯೂಬ್‌ಗಳನ್ನು ಮೊಸಾಯಿಕ್ ಶೈಲಿಯಲ್ಲಿ ಜೋಡಿಸಿ, ಒಂದು ಬದಿಯಲ್ಲಿ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಹಾಗು ಇನ್ನೊಂದು ಮಗ್ಗುಲಲ್ಲಿ ಇನ್ನೋರ್ವ ಹಾಸ್ಯ ನಟ ಮಿಸ್ಟರ್ ಬೀನ್ ಚಿತ್ರಗಳು ಮೂಡುವಂತೆ ಮಾಡಿದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ 20 ವಿದ್ಯಾರ್ಥಿಗಳ ಪ್ರಯತ್ನ ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಳ್ಳಲು ಸಿದ್ಧವಾಗಿದೆ.

ರವಿವಾರ ಬೆಳಗ್ಗೆ 7:30 ರಿಂದ ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾಲೇಜಿನ 4ನೆ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಉಡುಪಿ ಜಿಲ್ಲೆಯ ಚೆರ್ಕಾಡಿ ಪೆತ್ರಿಯ ಪ್ರಥ್ವೀಶ್ ನೇತೃತ್ವದಲ್ಲಿ ವಿದ್ಯಾರ್ಥಿಗಳು 15ಕ್ಯೂಬ್‌ಗಳನ್ನು 300 ಸೆಟ್‌ಗಳಾಗಿ ಬೇಕಾದಂತೆ ಜೋಡಿಸಿಟ್ಟುಕೊಂಡು ಬಳಿಕ ಅದನ್ನು ಒಂದೊಂದಾಗಿ ಪರದೆಯೊಳಗೆ ಜೋಡಿಸುತ್ತಾ ಬಂದರು. 75 ಸಾಲುಗಳಲ್ಲಿ ಎಲ್ಲಾ ಕ್ಯೂಬ್‌ಗಳು ಭರ್ತಿಯಾದಾಗ ಒಂದು ಮಗ್ಗುಲಲ್ಲಿ ಹಸಿರು ರೇಖೆಗಳಲ್ಲಿ ಚಾಪ್ಲಿನ್ ಮತ್ತು ಇನ್ನೊಂದು ಬದಿಯಲ್ಲಿ ಕೆಂಪು ರೇಖೆಯಲ್ಲಿ ಮಿಸ್ಟರ್ ಬೀನ್ ಮೂಡಿಬಂದರು. ಈ ಬೃಹತ್ ಪ್ರಯತ್ನ ಮುುಗಿದಾಗ ಮಧ್ಯಾಹ್ನ 2 ಗಂಟೆ ದಾಟಿತ್ತು.

ಕ್ಯೂಬ್‌ಗಳನ್ನು ಎರಡೂ ಬದಿಗೆ ಜೋಡಿಸಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೇರೆ ಬೇರೆ ಚಿತ್ರಗಳನ್ನು ಮೂಡುವಂತೆ ಮಾಡಿರುವುದು ಪ್ರಪ್ರಥಮ ಪ್ರಯತ್ನವಾಗಿದೆ. 20 ವಿದ್ಯಾರ್ಥಿಗಳು ಎಸ್‌ಡಿಎಂಐಟಿ ಕ್ಯೂಬ್ಸ್ ಎಂಬ ಹೆಸರಿನ ಗುಂಪನ್ನು ರಚಿಸಿಕೊಂಡು ಲಕ್ಷಾಂತರ ರೂ.ಗಳನ್ನು ವ್ಯಯಿಸಿ ಹಲವಾರು ತಿಂಗಳುಗಳ ಪರಿಶ್ರಮದಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅಪಾರ ತಾಳ್ಮೆಯನ್ನು ಮತ್ತು ತಾಂತ್ರಿಕ, ಗ್ರಾಫಿಕ್ ಕೌಶಲ್ಯವನ್ನು ಬೇಡುವ ಈ ಕಾರ್ಯವನ್ನು ನಾಲ್ಕು ಕ್ಯಾಮರಾಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದನ್ನು ಗಿನ್ನೆಸ್ ಅಧಿಕಾರಿಗಳು ವೀಕ್ಷಿಸಿ ನಿರ್ಧಾರಕ್ಕೆ ಬರಲಿದ್ದಾರೆ.

ವಿದೇಶಗಳಲ್ಲಿ ಏಕಮುಖ ಕಲಾಕೃತಿಗಳು ಕ್ಯೂಬ್‌ನಿಂದ ತಯಾರಾಗಿದ್ದರೂ ಎರಡೂ ಬದಿಗಳಲ್ಲಿ ಬೇರೆ ಬೇರೆ ರಚನೆಗಳಿರುವ ಕಲಾಕೃತಿಯನ್ನು ರಚಿಸುವ ಪ್ರಯತ್ನ ಇದು ಮೊದಲನೆಯದಾಗಿದೆ. ಸ್ಥಳದಲ್ಲಿಯೇ ಕ್ಯೂಬ್‌ನ ಸಮಸ್ಯೆಯನ್ನು ಪರಿಹರಿಸಿ ಬೇಕಾದಂತೆ ರಚಿಸಿಕೊಂಡು ಅದನ್ನು ಜೋಡಿಸುತ್ತಾ ಕಲಾಕೃತಿಯನ್ನು ರಚಿಸಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಕ್ಯೂಬ್‌ಗಳ ಬಣ್ಣವನ್ನು ವೇಗವಾಗಿ ಜೋಡಿಸುವುದಲ್ಲಿ ಪರಿಣತರಾದ ವಿವೇಕ್ ಪ್ರಸಾದ್ ಮಾಡ, ಇಂಜಿನಿಯರ್ ಶಿವಪ್ರಸಾದ್ ಅಜಿಲ, ಉಪನ್ಯಾಸಕ ಗಣಪತಿ ಭಟ್ ಕುಳವರ್ಮ ಉಪಸ್ಥಿತರಿದ್ದರು. ಉಜಿರೆ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಸುರೇಶ್ ಮಾರ್ಗದರ್ಶನ ಮಾಡಿದರು.

ಪ್ರಥ್ವೀಶ್ ಅವರೊಂದಿಗೆ ವಿದ್ಯಾರ್ಥಿಗಳಾದ ಮುದ್ದೇಬಿಹಾಳದ ಪ್ರಜ್ವಲ್ ಪಾಟೀಲ, ಮೂಡಿಗೆರೆಯ ಶರತ್ ಕೃಷ್ಣ, ವಿಜಯಪುರದ ವಿರೇಶ್ ಎಸ್.ಬಿ., ಅಥಣಿಯ ಶಾಂತಿನಾಥ, ಮೀಯಪದವಿನ ಶಿವಕುಮಾರ್, ಬಳ್ಳಾರಿಯ ವಿನಯ್, ಸಾಂಗ್ಲಿಯ ಸ್ವಪ್ನಿಲ್, ಮಾವಿನಕರೆಯ ಪ್ರಹ್ಲಾದ್, ವೇತಡ್ಕದ ಹರಿಕೃಷ್ಣ, ಮುಂಡಾಜೆಯ ಸಾತ್ವಿಕ್, ಬಲಮುರಿಯ ಸ್ಟೀಫನ್, ಗುಂಡ್ಮಿಯ ಮಧುರ್, ಬನಶಂಕರಿಯ ಕಾರ್ತಿಕ್, ವಿಜಯಪುರದ ಮಲ್ಲನಗೌಡ ಮೇಟಿ, ಶಿವಮೊಗ್ಗದ ಸುಜಯ್, ಉಜಿರೆಯ ಸಂಜಯ್ ಹೊಳ್ಳ, ನಿಪ್ಪಾಣಿಯ ರೋಹನ್, ಕಾರವಾರದ ಶಾಯಿಲ್ ನ್ಯಾಕ್, ಸಾಬರಕಟ್ಟೆಯ ಶಿವ ಕೈಜೋಡಿಸಿದ್ದರು. ಪ್ರಾಂಗಣದಲ್ಲಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ವಿದ್ಯಾರ್ಥಿಗಳ ಸಾಧನೆಯನ್ನು ವೀಕ್ಷಿಸಿದರು.

ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಕ್ಯೂಬರ್ಸ್‌ಗಳ ಸಾಧನೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ಕೆ ಅಪಾರ ಬುದ್ದಿಮತ್ತೆ, ತಜ್ಞತೆ ಬೇಕು. ಇದರಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಿದ್ದಾರೆ. ಇಲ್ಲಿ ಎರಡೂ ಬದಿಗೆ ಬೇರೆ ಬೇರೆ ಚಿತ್ರಗಳು ಮೂಡುವಂತೆ ಮಾಡಿದ್ದಾರೆ. ಇದಕ್ಕೆ ಬಹಳಷ್ಟು ಪೂರ್ವ ತಯಾರಿ, ಜಾಣ್ಮೆ ಬೇಕು. ಇವರಿಗೆ ವಿಶೇಷ ಅಭಿನಂದನೆ ಹಾಗೂ ಇದು ಗಿನ್ನೆಸ್ ದಾಖಲೆಯಾಗಿ ಬರಲಿ ಎಂದು ಹಾರೈಸಿದರು.

ಇದಕ್ಕೆ ಉಪಯೋಗಿಸಿದ ಕ್ಯೂಬ್‌ಗಳನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಹಂಚಿ ಅವರಲ್ಲೂ ಕಾಲೇಜಿನ ವಿದ್ಯಾರ್ಥಿಗಳಲ್ಲೂ ಬಣ್ಣಗಳನ್ನು ಜೋಡಿಸುವ ಕೌಶಲ್ಯ ಬರಲಿ ಎಂಬ ಉದ್ದೇಶದಿಂದ ಇಲ್ಲಿ ಬಳಕೆಯಾಗಿರುವ ಕ್ಯೂಬ್‌ಗಳನ್ನು ಹಂಚಲಾಗುತ್ತದೆ ಎಂದು ಹೆಗ್ಗಡೆ ತಿಳಿಸಿದರು.

ಉಡುಪಿ ಜಿಲ್ಲೆ ಪೇತ್ರಿ ನಿವಾಸಿ ಕೃಷಿಕರಾಗಿರುವ ಶ್ಯಾಮ ಪ್ರಸಾದ ಹಾಗೂ ಪ್ರಸನ್ನಾ ದಂಪತಿಗಳ ಇಬ್ಬರು ಮಕ್ಕಳಲ್ಲಿ ಹಿರಿಯ ಮಗನಾಗಿರುವ ಪೃಥ್ವೀಶ ಇದೀಗ ಉಜಿರೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇ ಆ್ಯಂಡ್ ಸಿಯ 4ನೆ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಉಜಿರೆ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಬಳಿಕ ಕಳೆದ ಮೂರು ವರ್ಷಗಳಿಂದ ಕ್ಯೂಬ್ ಸಮಸ್ಯೆ ಪರಿಹರಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇವರು ಕೇವಲ ಕುತೂಹಲಕ್ಕಾಗಿ ಆರಂಭಿಸಿದ ಈ ಆಟ ಮತ್ತೆ ಮತ್ತೆ ಅಧ್ಯಯನವಾಗಿ ಮಾರ್ಪಟ್ಟಿತ್ತು. ಇವರು ಕಳೆದ 2 ವರ್ಷದಲ್ಲಿ ಸುಮಾರು 750 ಮಂದಿಗೆ ಕ್ಯೂಬ್‌ನ ಬಗ್ಗೆ ತರಬೇತಿ ನೀಡಿದ್ದಾರೆ.

ಕಳೆದ ಒಂದು ವರ್ಷದಲ್ಲಿ 500 ಮಂದಿಗೆ ಇದನ್ನು ಕಲಿಸುವ ಕಾರ್ಯವನ್ನು ಮಾಡುವ ಮೂಲಕವಾಗಿ ಇವರು ಯುನಿಕ್ ವಿಶ್ವದಾಖಲೆಯನ್ನು ಹಾಗೂ ಅಸಿಸ್ಟ್ ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ. ಇದರ ಬಗ್ಗೆ ತಿಳಿಸುವ ರುಬಿಕ್ ಮ್ಯಾಜಿಕ್ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈಗಾಗಲೇ ಒಂದು ಸಾವಿರ ಪ್ರತಿ ಮಾರಾಟವಾಗಿದೆ. ಇದು ಕ್ಯೂಬ್‌ನ ಬಗ್ಗೆ ಉಪಯುಕ್ತ ಪುಸ್ತಕವಾಗಿದೆ. ಪಠ್ಯದ ಅಭ್ಯಾಸದೊಂದಿಗೆ ರಾತ್ರಿ ವೇಳೆ ಕಳೆದ 15 ದಿನಗಳಿಂದ 2 ಗಂಟೆ ಇದರ ಅಭ್ಯಾಸ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X