ಮೂಡುಬಿದಿರೆ: ಕಾರು ರ್ಯಾಲಿಯಲ್ಲಿ ದಂಪತಿಗೆ ಪ್ರಥಮ ಸ್ಥಾನ

ಮೂಡುಬಿದಿರೆ, ಅ.2: ತ್ರಿಭುವನ್ ಅಟೊಮೋಟಿವ್ ಸ್ಪೋರ್ಟ್ಸ್ ಕ್ಲಬ್ ಮತ್ತು ಬೆದ್ರ ಅಡ್ವೆಂಚರ್ ಕ್ಲಬ್ ವತಿಯಿಂದ ರವಿವಾರ ನಡೆದ ‘ಬೆದ್ರ ಟಿಎಸ್‌ಡಿ ಕಾರು ರ್ಯಾಲಿ-2016’ರ ಸಾಮಾನ್ಯ ವಿಭಾಗದಲ್ಲಿ ಅಬುಲ್ ಆಲಾ ಪುತ್ತಿಗೆ ಮತ್ತು ಮುಹಮ್ಮದ್ ಫೈಸಲ್ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ಅಬುಲ್ ಆಲಾ ಅವರ ಪತ್ನಿ ಸಾಹಿರಾ ಬಾನು ಪುತ್ತಿಗೆ ಹಾಗೂ ಪುತ್ರಿ ಸುಮಯ್ಯ ಆಲಿಯಾ ತಂಡ ಪ್ರಥಮ ಸ್ಥಾನ ಗಳಿಸಿದೆ.
ಇಂಡಿಯನ್ ಮೋಟೊ ಸ್ಪೋರ್ಟ್ಸ್ ಸಹಯೋಗದಲ್ಲಿ ನಡೆದ ಈ ರ್ಯಾಲಿಯಲ್ಲಿ ಸುಮಾರು 45 ಸ್ಪರ್ಧಿಗಳು ಪಾಲ್ಗೊಂಡಿದ್ದರು.
Next Story





