ಗಾಂಧಿ ಜಯಂತಿ ಅಂಗವಾಗಿ ‘ಮದ್ಯಪಾನ ನಿಷೇಧ ಆಂದೋಲನ- ಕರ್ನಾಟಕ’ವು ರಾಯಚೂರು ನಗರದ ರಾಜೇಂದ್ರ ಗಂಜ್(ಎಪಿಎಂಸಿ)ಪ್ರದೇಶದಲ್ಲಿ ರವಿವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಸಭೆಯಲ್ಲಿ ರಾಜ್ಯದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸರಕಾರವನ್ನು ಆಗ್ರಹಿಸಲಾಯಿತು.