ಭಾರತದ ಭೂಸ್ವಾಧೀನ ಅಲೆಯನ್ನು ಬದಲಾಯಿಸಿದ ಸಿಂಗೂರು

ಸಿಂಗೂರ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು, ಖಾಸಗಿ ಮಾಲಕತ್ವದ ಜಮೀನನ್ನು ಸರಕಾರವು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಳ್ಳಬಹುದಾದ ನ್ಯಾಯಯುತ ‘ಸಾರ್ವಜನಿಕ ಉದ್ದೇಶ’ಗಳಿಗೆ ಮಾನದಂಡ ಯಾವುದು ಎಂಬ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಪಶ್ಚಿಮ ಬಂಗಾಳ ಕೈಗಾರಿಕಾಭಿವೃದ್ಧಿ ಪ್ರಾಧಿಕಾರ ಟಾಟಾ ಮೋಟಾರ್ಸ್‌ಗಾಗಿ ಭೂಸ್ವಾಧೀನಪಡಿಸಿಕೊಂಡಿರುವುದು ‘ಸಾರ್ವಜನಿಕ ಉದ್ದೇಶ’ದ ಮಿತಿಯಲ್ಲಿ ಬರುವುದಿಲ್ಲ ಎಂದು ಹೇಳುವ ಮೂಲಕ ನ್ಯಾಯಾಧೀಶರಾದ ಗೋಪಾಲ ಗೌಡ ಅವರು, ಕೈಗಾರಿಕೆಗಳು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಳ್ಳುವ ಜಮೀನು ನ್ಯಾಯಯುತವಾಗಿ ‘ಸಾರ್ವಜನಿಕ ಉದ್ದೇಶ’ದ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬುದರ ಬಗ್ಗೆ ಸೂಕ್ತ ನ್ಯಾಯಾಂಗ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಹೀಗೆ ಮಾಡುವಾಗ ನ್ಯಾಯಾಧೀಶರಾದ ಗೋಪಾಲ ಗೌಡ ಅವರು, ‘ಸಾರ್ವಜನಿಕ ಉದ್ದೇಶ’ವನ್ನು ನಾವು ಅರ್ಥ ಮಾಡಿಕೊಂಡಿರುವ ಬಗ್ಗೆ ಮತ್ತು ಕಂಪೆನಿಗಳ ಪರವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಸರಕಾರ ಘೋಷಿಸುವ ‘ಸಾರ್ವಜನಿಕ ಉದ್ದೇಶ’ದ ಬಗ್ಗೆ ನಡೆಸುವ ನ್ಯಾಯಾಂಗ ಪರಿಶೀಲನೆ ಯಾವ ಮಟ್ಟದಲ್ಲಿ ನ್ಯಾಯಯುತವಾಗಿರುತ್ತದೆ ಎಂಬುದನ್ನು ಪುನರ್ ಚಿಂತಿಸುವ ಅವಕಾಶವನ್ನು ಸೃಷ್ಟಿಸಿದ್ದಾರೆ. 1894ರ ಭೂಸ್ವಾಧೀನ ಕಾಯ್ದೆ ಒಂದು ಬ್ರಿಟಿಷರ ಕಾಲದ ಕಾನೂನಾಗಿದ್ದು ಸರಕಾರವು ಒತ್ತಾಯಪೂರ್ವಕವಾಗಿ ‘ಸಾರ್ವಜನಿಕ ಉದ್ದೇಶ’ಕ್ಕೆ ಕಾಯ್ದೆಯಲ್ಲಿ ತಿಳಿಸಿರುವ ಪ್ರಕ್ರಿಯೆಗಳನ್ನು ಅನುಸರಿಸಿ ಪರಿಹಾರವನ್ನು ನೀಡುವ ಮೂಲಕ ಭೂಸ್ವಾಧೀನ ಮಾಡಿಕೊಳ್ಳಬಹುದು ಎಂದು ಸೂಚಿಸುತ್ತದೆ. ಸಾರ್ವಜನಿಕ ಉದ್ದೇಶ ಮತ್ತು ಪರಿಹಾರ, ಈ ಎರಡರ ಅಗತ್ಯ ಏನೆಂದರೆ ಸಾರ್ವಜನಿಕರಿಗೆ ಒಳ್ಳೆದು ಮಾಡುವ ಪ್ರಕ್ರಿಯೆಯಲ್ಲಿ ವೈಯಕ್ತಿಕವಾಗಿ ಯಾರಿಗೂ ಹೊರೆಯಾಗಬಾರದು ಎಂಬ ಯೋಚನೆಯಾಗಿದೆ, ಯಾಕೆಂದರೆ ಜನರ ಪ್ರತಿನಿಧಿಯಾಗಿರುವ ಸರಕಾರ ಈಗಾಗಲೇ ಆ ಕೆಲಸವನ್ನು ನ್ಯಾಯಯುತವಾಗಿ ಮಾಡುತ್ತಿದೆ. ಈ ಕಾಯ್ದೆಯಲ್ಲಿ ವಿಧಿಸಲಾಗಿರುವ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕೊಳ್ಳುವವರು ತಮ್ಮ ಭೂಮಿಯನ್ನು ಯಾಕೆ ಸ್ವಾಧೀನಪಡಿಸಿಕೊಳ್ಳಬಾರದು ಎಂಬ ಬಗ್ಗೆ ತಿಳಿಸುವ ಅವಕಾಶ ನೀಡಲಾಗಿದೆ ಮತ್ತು ಅವರ ಜಮೀನಿಗೆ ನೀಡಲಾಗುತ್ತಿರುವ ಪರಿಹಾರ ಧನ ಸರಿಯಾಗಿದೆಯೇ ಎಂಬುದನ್ನು ತಿಳಿಸಲು ಅವಕಾಶ ನೀಡುತ್ತದೆ. 1984ರ ಕಾಯ್ದೆಯು ಸಾರ್ವಜನಿಕ ಉದ್ದೇಶ ಮತ್ತು ಕೈಗಾರಿಕೋದ್ದೇಶಗಳಿಗೆ ಎರಡು ಪ್ರತ್ಯೇಕ ಭೂಸ್ವಾಧೀನ ಪ್ರಕ್ರಿಯೆಗಳನ್ನು ಸೂಚಿಸುತ್ತದೆ. ಕಾಯ್ದೆಯ 8ನೇ ಭಾಗದಲ್ಲಿ ವಿವರಿಸಿರುವಂತೆ ಕಂಪೆನಿಗಳಿಗೆ ಭೂಸ್ವಾಧೀನ ಪಡೆಯುವ ಸಮಯದಲ್ಲಿ ಸರಕಾರವು ‘ಸಾರ್ವಜನಿಕರಿಗೆ ಉಪಯೋಗವಾಗಬಹುದಾದ’ ಕಾರ್ಯಕ್ಕೆ ಜಮೀನು ಅಗತ್ಯವಿರುವ ಕಾರಣಕ್ಕಾಗಿ ಭೂಸ್ವಾಧೀನ ನಡೆಸಲಾಗುತ್ತದೆ ಎಂಬ ಘೋಷಣೆಯನ್ನು ಮಾಡಬೇಕು. ವಾಸ್ತವದಲ್ಲಿ 1984ರ ವಿಧೇಯಕದ ಇತಿಹಾಸವು ‘ಎಲ್ಲಾ ಕಂಪೆನಿಗಳಿಗಾಗಿ ಭೂಸ್ವಾಧೀನಪಡಿಸಿಕೊಳ್ಳುವ’ ಉದ್ದೇಶವನ್ನು ಹೊಂದಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಸಾರ್ವಜನಿಕರು ಸಂಸ್ಥೆಯು ನಡೆಸುವ ಕಾರ್ಯಗಳನ್ನು ನೇರವಾಗಿ ಉಪಯೋಗಪಡಿಸಿಕೊಳ್ಳುವಂತಿದ್ದರೆ ಮಾತ್ರ ಭೂಸ್ವಾಧೀನ ನ್ಯಾಯಯುತವಾಗಿರುತ್ತದೆ. ಸರಕಾರವು ಈ ಕಾಯ್ದೆಯನ್ನು ಖಾಸಗಿ ಉಪಯೋಗದ ಉದ್ದೇಶಕ್ಕೂ ವಿಸ್ತರಿಸಬಾರದು ಎಂಬ ಕಾರಣದಿಂದಲೇ ಹೀಗೆ ನಿಖರವಾಗಿ ಸೂಚಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ 1984ರ ಕಾಯ್ದೆಯ ಭಾಗ 2ರಲ್ಲಿನ ‘ಸಾರ್ವಜನಿಕ ಉದ್ದೇಶ’ಕ್ಕಾಗಿ ಸರಕಾರದಿಂದ ಸ್ವಾಧೀನ ಪ್ರಕ್ರಿಯೆಯನ್ನು ಸವಿವರವಾಗಿ ತಿಳಿಸುತ್ತಾ, ಈ ಶಬ್ದವು ಹಿಗ್ಗಿಸಬಹುದಂತಾಗಿದೆ ಮತ್ತು ಕಾಲದ ಬದಲಾವಣೆ, ಸಮಾಜದ ಸ್ಥಿತಿ ಮತ್ತು ಅದರ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ನ್ಯಾಯಾಂಗ ಸೇರಿಸುವಿಕೆ ಮತ್ತು ಪ್ರತ್ಯೇಕತೆಯ ಪ್ರಕ್ರಿಯೆಯ ಮೂಲಕ ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ತಿಳಿಸಿತ್ತು. ಸಾರ್ವಜನಿಕ ಉದ್ದೇಶ ಎಂದರೆ ಸಾರ್ವಜನಿಕ ಉಪಯೋಗ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ತಳ್ಳಿಹಾಕಿತ್ತು. ಅದರ ಬದಲು ಸರಕಾರವು ಭೂಸ್ವಾಧೀನದಿಂದ ‘‘ಸಾರ್ವಜನಿಕರಿಗೆ ಅಥವಾ ಸಾರ್ವಜನಿಕರ ಒಂದು ಭಾಗಕ್ಕೆ ಯಾವುದೇ ಒಂದು ರೀತಿಯಲ್ಲಿ ಉಪಯೋಗವಾಗುತ್ತದೆ’’ ಎಂದೆ ಎಂಬುದನ್ನಷ್ಟೇ ತೋರಿಸಬೇಕಿತ್ತು. ಆದರೆ ಸಂಸ್ಥೆಗಳಿಗೆ ಭೂಸ್ವಾಧೀನಪಡಿಸಿಕೊಳ್ಳಲು 1959ರ ಆರ್‌ಎಲ್ ಅರೋರಾ ಮತ್ತು ಉತ್ತರ ಪ್ರದೇಶ ಸರಕಾರದ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಸವೋಚ್ಛ ನ್ಯಾಯಾಲಯ ಬೇರೆಯದೇ ವ್ಯಾಖ್ಯಾನ ನೀಡಿದ್ದು ಸಂಸ್ಥೆಗಳು ನಡೆಸುವ ಕಾರ್ಯ ನೇರವಾಗಿ ಸಾರ್ವಜನಿಕರಿಗೆ ಉಪಯೋಗವಾಗುತ್ತಿರುವಂತಿರಬೇಕು (ಉದಾ: ಶಾಲೆ ಅಥವಾ ಆಸ್ಪತ್ರೆ) ಎಂದು ತಿಳಿಸಿದೆ. ಕೇವಲ ‘ಕೆಲಸದಿಂದ ಉಂಟಾಗುವ ಉತ್ಪಾದನೆ’ ನೇರವಾಗಿ ಸಾರ್ವಜನಿಕರಿಗೆ ಉಪಯೋಗಾವಾಗುವಂತಿದ್ದರೆ ಸಾಕಾಗುವುದಿಲ್ಲ. ಸರಕಾರವು ‘ಸಾರ್ವಜನಿಕ ಉದ್ದೇಶ’ಕ್ಕಾಗಿ ಎಂದು ಘೋಷಿಸಿ ಸಂಸ್ಥೆಗಳ ಪರವಾಗಿ ಭೂಸ್ವಾಧೀನ ನಡೆಸುವಾಗ ಅದು ಈ ಅಂಶಗಳಿಗೆ ಪೂರಕವಾಗಿದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಲಿದೆ. ಇದೊಂದು ಕಠಿಣ ಪರಿಶೀಲನಾ ಪರೀಕ್ಷೆಯಾದ್ದರಿಂದ ಕಾರ್ಯಾಂಗದ ಕಾರ್ಯಗಳ ಮೇಲೆ ನ್ಯಾಯಾಂಗದ ದುರಾಕ್ರಮಣ’ ಎಂಬ ನೆಲೆಯಲ್ಲಿ ಸರಕಾರ ಅಸಂತುಷ್ಟಗೊಂಡಿತ್ತು. ಆದರೆ 1962ರಲ್ಲಿ ಸರ್ವೋಚ್ಚ ನ್ಯಾಯಾಲಯ ಯೂ ಟರ್ನ್ ತೆಗೆದುಕೊಂಡಿತು. ಸೋಮವಂತಿ ಮತ್ತು ಪಂಜಾಬ್ ಸರಕಾರದ ಪ್ರಕರಣದಲ್ಲಿ ನ್ಯಾಯಾಲಯವು ಸಂಸ್ಥೆಗಳ ಪರವಾಗಿ ಸರಕಾರವು ಭೂಸ್ವಾಧೀನಪಡಿಸಿಕೊಳ್ಳುವಾಗ ಮಾಡುವ ‘ಸಾರ್ವಜನಿಕ ಉದ್ದೇಶ’ಎಂಬ ಘೋಷಣೆಯೇ ಅಂಥಾ ಉದ್ದೇಶಕ್ಕೆ ‘ನಿರ್ಣಾಯಕ ಪುರಾವೆ’ಯಾಗುತ್ತದೆ ಎಂದು ಹೇಳಿಕೆ ನೀಡುತ್ತಾ ಯಾವುದೇ ರೀತಿಯ ಮೋಸ ಅಥವಾ ಸರಕಾರದಿಂದ ಅಧಿಕಾರದ ದುರುಪಯೋಗ ನಡೆಯದ ಹೊರತು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿತು. ಸಂಸ್ಥೆಯ ಪರವಾಗಿ ಸರಕಾರದಿಂದ ಸ್ವಾಧೀನದ ವೆಚ್ಚಕ್ಕೆ ಅತ್ಯಲ್ಪ ಕಾಣಿಕೆ ಕೂಡಾ ಅದನ್ನು ‘ಸಾರ್ವಜನಿಕ ಉದ್ದೇಶ’ದ ಸ್ವಾಧೀನವಾಗಿ ಮಾಡುತ್ತದೆ ಎಂದು ನ್ಯಾಯಾಲಯ ತಿಳಿಸಿತು. ಈ ವಿವರಣೆಯು ಸರಕಾರ ಭೂಸ್ವಾಧೀನವನ್ನು ‘ಸಾರ್ವಜನಿಕ ಉದ್ದೇಶ’ಕ್ಕೆ ಎಂದು ಘೋಷಿಸುವ ಮತ್ತು ಸ್ವಾಧೀನತೆಯ ವೆಚ್ಚಕ್ಕಾಗಿ ಸ್ವಲ್ಪ ಕಾಣಿಕೆ ನೀಡುವ ಮೂಲಕ ಮಸೂದೆಯ 8ನೇ ಭಾಗದಲ್ಲಿ ಉಲ್ಲೇಖಿಸಿರುವ ಸಂಸ್ಥೆಗಳ ಪರವಾದ ಭೂಸ್ವಾಧೀನ ಪ್ರಕ್ರಿಯೆಯನ್ನು ಉಲ್ಲಂಘಿಸಲು ಅವಕಾಶ ನೀಡುವ ಮೂಲಕ ಮಸೂದೆಯ 2ನೇ ಭಾಗದಲ್ಲಿ ಸೂಚಿಸಿದಂತೆ ಸರಳ ಪ್ರಕ್ರಿಯೆಯನ್ನು ನಡೆಸಲು ಸಾಧ್ಯವಾಯಿತು. ಪಶ್ಚಿಮ ಬಂಗಾಳ ಕೈಗಾರಿಕಾಭಿವೃದ್ಧಿ ಪ್ರಾಧಿಕಾರ ಟಾಟಾ ಮೋಟರ್ಸ್‌ಗಾಗಿ ಒತ್ತಾಯಪೂರ್ವಕವಾಗಿ ನಡೆಸಿದ ಭೂಸ್ವಾಧೀನದಲ್ಲಿ ನೀಡಲಾದ ಪರಿಹಾರದ ಸಂಪೂರ್ಣ ವೆಚ್ಚವನ್ನು ಟಾಟಾ ಮೋಟಾರ್ಸ್ ನೀಡಿದ್ದು ಇದು ಯಾವುದೇ ರೀತಿಯಲ್ಲೂ ಮೇಲೆ ತಿಳಿಸಿದ ಮಾದರಿಯಲ್ಲಿಲ್ಲ. ಕೇಂದ್ರವು ಯೋಜನಾ ಸಂಶೋಧನೆಗಾಗಿ ನಡೆಸಿದ 1950ರಿಂದ 2015ರ ವರೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಿರ್ಧಾರಿಸಲ್ಪಟ್ಟ ಭೂಸ್ವಾಧೀನ ಪ್ರಕರಣಗಳ ವಿವರಣಾತ್ಮಕ ಅಧ್ಯಯನದಲ್ಲಿ ನಮಗೆ ಕಂಡು ಬಂದಿದ್ದೇನೆಂದರೆ ಶೇ.40ರಷ್ಟು ಭೂಸ್ವಾಧೀನಗಳನ್ನು ನಡೆಸಿದ ಪ್ರಕ್ರಿಯೆಗಳ ಸಿಂಧುತ್ವವೇ ಪ್ರಶ್ನಾರ್ಥಕವಾಗಿತ್ತು. ಪ್ರತೀ ಹತ್ತರಲ್ಲಿ ನಾಲ್ಕು ಪ್ರಕರಣಗಳಲ್ಲಿ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ ಎರಡು ಕೂಡಾ ಅಸ್ತಿತ್ವದಲ್ಲಿರುವ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂಬ ಕಾರಣದಿಂದ ಅಸಿಂಧು ಎಂದು ತೀರ್ಪು ನೀಡಿದ್ದವು. ಆದರೆ ಸೋಮವಂತಿ ಪ್ರಕರಣದ ನಂತರ ನ್ಯಾಯಾಲಯದ ಬದಲಾದ ದೃಷ್ಟಿಕೋನದ ಪರಿಣಾಮವಾಗಿ ಸರ್ವೋಚ್ಚ ನ್ಯಾಯಾಲಯವು ಸರಕಾರ ಸಾರ್ವಜನಿಕ ಉದ್ದೇಶಕ್ಕೆ ಎಂದು ಘೋಷಿಸಿದ ಶೇ.1ಕ್ಕಿಂತಲೂ ಕಡಿಮೆ ಪ್ರಕರಣಗಳನ್ನು ಅಸಿಂಧು ಎಂದು ತೀರ್ಪು ನೀಡಿರುವುದು ಕಂಡುಬರುತ್ತದೆ. ಸಿಂಗೂರ್‌ನಲ್ಲಿ ಭೂಮಿ ಕಳೆದುಕೊಂಡವರು ತಮ್ಮ ಜಮೀನನ್ನು ಕೃಷಿ ಮತ್ತು ಕೃಷಿಯಾಧಾರಿತ ಕೈಗಾರಿಕೆ ನಡೆಸಲು ಬಳಸುತ್ತಿದ್ದರು. 1894ರ ಕಾಯ್ದೆಯಂತೆ ಭೂಸ್ವಾಧೀನಪಡಿಸಿಕೊಳ್ಳುವುದನ್ನು ಇವರು ವಿರೋಧಿಸಿದ್ದರೂ ಸರಕಾರ ಮಾತ್ರ ಅವರ ವಿರೋಧವನ್ನು ಲೆಕ್ಕಿಸಲಿಲ್ಲ. ಹಾಗಾಗಿ ಜಮೀನು ಕಳೆದುಕೊಂಡವರು ಭೂಸ್ವಾಧೀನ ಪ್ರಶ್ನಿಸಿ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿದರು. ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಂತೆಯೇ ಪಶ್ಚಿಮ ಬಂಗಾಳ ಕೈಗಾರಿಕಾಭಿವೃದ್ಧಿ ಪ್ರಾಧಿಕಾರ ಜಮೀನನ್ನು ತನ್ನ ವಶಕ್ಕೆ ಪಡೆದು ಪರಿಹಾರ ಪಡೆಯಲು ಒಪ್ಪಿದವರಿಗೆ ಪರಿಹಾರ ನೀಡಿ ಒಪ್ಪದಿದ್ದವರನ್ನು ಜಮೀನಿನಿಂದ ಹೊರಗೆ ಕಳುಹಿಸಿತು. ಇದರಿಂದ ತೀವ್ರವಾದ ಪ್ರತಿಭಟನೆಗಳು, ಬಂದ್‌ಗಳು ನಡೆದು ಅಂತಿಮವಾಗಿ ಟಾಟಾ ಮೋಟಾರ್ಸ್ 2008ರಲ್ಲಿ ತಮ್ಮ ಯೋಜನೆಯನ್ನೇ ಕೈಬಿಟ್ಟಿತು. ಟಾಟಾ ಮೋಟಾರ್ಸ್‌ಗಾಗಿ ಸರಕಾರ ನಡೆಸಿದ ಭೂಸ್ವಾಧೀನ ಪ್ರಕ್ರಿಯೆ ಕಾಯ್ದೆಯ ಭಾಗ 2ರಂತೆ ‘ಸಾರ್ವಜನಿಕ ಉದ್ದೇಶ’ಕ್ಕಾಗಿಯಾಗಿತ್ತೇ ಅಥವಾ ಕಾಯ್ದೆಯ 8ನೇ ಭಾಗದಂತೆ ‘ಸಂಸ್ಥೆಗಾಗಿ’ಯಾಗಿತ್ತೇ ಎಂಬುದರ ಬಗ್ಗೆ ನ್ಯಾಯಾಧೀಶರಾದ ಗೌಡ ಮತ್ತು ಅರುಣ್ ಮಿಶ್ರಾ ಮಧ್ಯೆ ಭಿನ್ನಾಭಿಪ್ರಾಯವಿದೆ. ಆದರೆ ಈ ಎರಡರಲ್ಲಿ ಯಾವುದೇ ಪ್ರಕ್ರಿಯೆಯಾಗಿದ್ದರೂ ಸರಕಾರ ಮಾತ್ರ ಅದನ್ನು ಪಾಲಿಸಿರಲಿಲ್ಲ ಎಂಬುದನ್ನು ಮಾತ್ರ ಅವರಿಬ್ಬರೂ ಒಪ್ಪಿಕೊಳ್ಳುತ್ತಾರೆ. ಈ ಪ್ರಕರಣದಲ್ಲಿ ಸರಕಾರದ ಕ್ರಮದ ಬಗ್ಗೆ ಕಟು ದೋಷಾರೋಪಣೆ ಮಾಡಿದ ನ್ಯಾಯಾಧೀಶರುಗಳು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ‘ತಲೆಯನ್ನು ಉಪಯೋಗಿಸದಿರುವ,’ ಜಮೀನು ಕಳೆದುಕೊಂಡವರ ವಿರೋಧವನ್ನು ಲೆಕ್ಕಿಗರು ನಡೆಸುವ ತನಿಖೆಯನ್ನು ಒಂದು ಪ್ರಹಸನ ಮತ್ತು ಕಣ್ಣೀರೊರೆಸುವ ತಂತ್ರ ಎಂದು ತಿಳಿಸಿದ್ದರು. ಪರಿಣಾಮವಾಗಿ ಹತ್ತು ವಾರಗಳ ಒಳಗೆ ಜಮೀನು ಕಳೆದುಕೊಂಡ ಎಲ್ಲರಿಗೂ ಅವರ ಭೂಮಿಯನ್ನು ವಾಪಸ್ ನೀಡುವಂತೆ ಪಶ್ಚಿಮ ಬಂಗಾಳ ಸರಕಾರಕ್ಕೆ ನ್ಯಾಯಾಲಯ ಆದೇಶಿಸಿತು. 44 ವರ್ಷಗಳ ಪೂರ್ವನಿದರ್ಶನಗಳನ್ನು ನೀಡುತ್ತಾ ಸಾಮಾನ್ಯ ಜನರ ಅಗತ್ಯವನ್ನು ಈಡೇರಿಸುವ ಯಾವುದೇ ಕೈಗಾರಿಕಾಭಿವೃದ್ಧಿ ಯೋಜನೆಯಾಗಲೀ ಅಥವಾ ಭೂಸ್ವಾಧೀನದ ವೆಚ್ಚವನ್ನು ಸಾರ್ವಜನಿಕ ಆದಾಯದಿಂದ ಭರಿಸುವುದಾಗಲೀ ಇಲ್ಲ, ಸಂಸ್ಥೆಯ ಪರವಾಗಿ ಸರಕಾರ ಭೂಸ್ವಾಧೀನಪಡಿಸಿಕೊಳ್ಳುವುದು 1894ರ ಕಾಯ್ದೆಯ ಪ್ರಕಾರ ‘ಸಾರ್ವಜನಿಕ ಉದ್ದೇಶ’ ಅಗತ್ಯತೆಗಳನ್ನು ಪೂರೈಸುವುದಿಲ್ಲ. ಪರಿಣಾಮವಾಗಿ, ನ್ಯಾಯಾಧೀಶ ಗೌಡರ ಅಭಿಪ್ರಾಯ ಆರ್‌ಎಲ್ ಅರೋರಾ ಪ್ರಕರಣಲ್ಲಿ ನ್ಯಾಯಾಲಯದಲ್ಲಿ ಮತ್ತೆ ಉದಾಹರಿಸಲ್ಪಟ್ಟಿತು. ಕಾನೂನು ಮತ್ತು ವಾಸ್ತವಕ್ಕೆ ಸಂಬಂಧಪಟ್ಟಂತೆ ನ್ಯಾಯಾಧೀಶರಾದ ಮಿಶ್ರಾಅವರಿಗೆ ನ್ಯಾಯಾಧೀಶ ಗೌಡರ ಜೊತೆ ಭಿನ್ನಾಭಿಪ್ರಾಯಗಳಿದ್ದವು. ಸೋಮವಂತಿ ಮತ್ತು ಇತರ ಪ್ರಕರಣಗಳಲ್ಲಿ ಟಾಟಾ ಮೋಟಾರ್ಸ್‌ಪರಿಹಾರದ ಮೊತ್ತವನ್ನು ಭರಿಸಿದ್ದರೂ ಅದನ್ನು ಜಮೀನು ಕಳೆದುಕೊಂಡವರಿಗೆ ನೀಡಿದ್ದು ಸರಕಾರಿ ಸಂಸ್ಥೆ ಪಶ್ಚಿಮ ಬಂಗಾಳ ಕೈಗಾರಿಕಾಭಿವೃದ್ಧಿ ಪ್ರಾಧಿಕಾರ ಆದ ಕಾರಣ ಭೂಸ್ವಾಧೀನವು ಸಂಸ್ಥೆಯ ಪರವಾಗಿ ನಡೆದಿದ್ದರೂ ಸಾರ್ವಜನಿಕ ಉದ್ದೇಶ ಎಂಬ ಸರಕಾರದ ಘೋಷಣೆಯನ್ನು ಪ್ರಶ್ನಿಸಿರುವುದು ಅದನ್ನು ಅವಮಾನ ಮಾಡಿದಂತೆ ಎಂದು ಮಿಶ್ರಾ ಹೇಳಿದ್ದರು. ಸಿಂಗೂರ್‌ನ ಪರಿಣಾಮವಾಗಿ 1894ರ ಕಾಯ್ದೆಯನ್ನು ರದ್ದುಗೊಳಿಸಿ ಅದರ ಬದಲಿಗೆ ಭೂಸ್ವಾಧೀನ ಕಾಯ್ದೆ 2013ನ್ನು ಪರಿಚಯಿಸಲಾಯಿತು. 2013ರ ಕಾಯ್ದೆ ಪ್ರಕಾರ ಯಾವುದೇ ಕಂಪೆನಿ ಭಾಗಿಯಾಗಿರುವ ಭೂಸ್ವಾಧೀನ ಪ್ರಕ್ರಿಯೆಗೆ ಅದರಿಂದ ಬಾಧಿಸಲ್ಪಡುವ ಶೇ.80 ಕುಟುಂಬಗಳ ಒಪ್ಪಿಗೆಯ ಅಗತ್ಯವಿದೆ. ಈ ನಿಬಂಧನೆಯನ್ನು ಸುಗ್ರಿವಾಜ್ಞೆಯ ಮೂಲಕ ಬದಲಾಯಿಸಲು ಸರಕಾರ ಕಳೆದ ವರ್ಷ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಆದರೆ ಅನೇಕ ರಾಜ್ಯ ಸರಕಾರಗಳು ಇದನ್ನು ಈಗಾಗಲೇ ಬದಲಾಯಿಸಿವೆ ಅಥವಾ 2013ರ ಕಾಯ್ದೆಯ ಈ ನಿಬಂಧನೆೆಯನ್ನು ತಪ್ಪಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿದೆ. ಈ ದೃಷ್ಟಿಯಿಂದ ಮತ್ತು ಮುಖ್ಯವಾಗಿ 1894ರ ಕಾಯ್ದೆಯಡಿ ಬಾಕಿಯುಳಿದಿರುವ ಪ್ರಕರಣಗಳಿಗೆ ನ್ಯಾಯಾಧೀಶ ಗೌಡ ಕನಿಷ್ಠ ಪಕ್ಷ ಸರ್ವೋಚ್ಚ ನ್ಯಾಯಾಲಯ ಇನ್ನು ಮುಂದಕ್ಕೆ ಹಾಕದಿದ್ದರೂ, ಸರಕಾರ ಸಂಸ್ಥೆಗಳಿಗಾಗಿ ನಡೆಸುವ ಭೂಸ್ವಾಧೀನ ನಿಜವಾಗಿಯೂ ಸಾರ್ವಜನಿಕ ಉದ್ದೇಶಕ್ಕಾಗಿಯೇ ಎಂಬುದನ್ನು ಪರಿಶೀಲಿಸಲಿದೆ ಎಂಬುದನ್ನು ಸೂಚಿಸಿದ್ದಾರೆ. ಎರಡು ನ್ಯಾಯಾಧೀಶರ ಮಧ್ಯೆ ‘ಸಾರ್ವಜನಿಕ ಉದ್ದೇಶ’ ಅಂಶದ ಬಗ್ಗೆ ಒಮ್ಮತ ಮೂಡದಿರುವುದರಿಂದ ಪ್ರಕರಣಗಳನ್ನು ಈ ನೆಲೆಯಲ್ಲಿ ನ್ಯಾಯಾಲಯ ನಿರ್ಧರಿಸದಿರುವುದು, ಸಾರ್ವಜನಿಕ ಉದ್ದೇಶ ಎಂಬ ಪದಕ್ಕೆ ಸರಿಯಾದ ಮತ್ತು ನಿಖರವಾದ ಅರ್ಥವನ್ನು ಸರ್ವೋಚ್ಚ ನ್ಯಾಯಾಲಯ ನೀಡುವವರೆಗೆ ಸಾರ್ವಜನಿಕ ಉದ್ದೇಶದ ಬಗ್ಗೆ ಇರುವ ಕಾನೂನು ಅಸ್ಪಷ್ಟವಾಗಿಯೇ ಉಳಿಯಲಿದೆ.
ಟಾಟಾ ಮೋಟಾರ್ಸ್‌ಗಾಗಿ ಸರಕಾರ ನಡೆಸಿದ ಭೂಸ್ವಾಧೀನ ಪ್ರಕ್ರಿಯೆ ಕಾಯ್ದೆಯ ಭಾಗ 2ರಂತೆ ಸಾರ್ವಜನಿಕ ಉದ್ದೇಶಕ್ಕಾಗಿಯಾಗಿತ್ತೇ ಅಥವಾ ಕಾಯ್ದೆಯ 8ನೇ ಭಾಗದಂತೆ ಸಂಸ್ಥೆಗಾಗಿಯಾಗಿತ್ತೇ ಎಂಬುದರ ಬಗ್ಗೆ ನ್ಯಾಯಾಧೀಶರಾದ ಗೌಡ ಮತ್ತು ಅರುಣ್ ಮಿಶ್ರಾ ಮಧ್ಯೆ ಭಿನ್ನಾಭಿಪ್ರಾಯವಿದೆ. ಆದರೆ ಈ ಎರಡರಲ್ಲಿ ಯಾವುದೇ ಪ್ರಕ್ರಿಯೆಯಾಗಿದ್ದರೂ ಸರಕಾರ ಮಾತ್ರ ಅದನ್ನು ಪಾಲಿಸಿರಲಿಲ್ಲ ಎಂಬುದನ್ನು ಮಾತ್ರ ಅವರಿಬ್ಬರೂ ಒಪ್ಪಿಕೊಳ್ಳುತ್ತಾರೆ.







