Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ... ಮೆಣಸೆ...

ಓ... ಮೆಣಸೆ...

ವಾರ್ತಾಭಾರತಿವಾರ್ತಾಭಾರತಿ3 Oct 2016 12:05 AM IST
share
ಓ... ಮೆಣಸೆ...

 ಭಜನೆಯಲ್ಲಿ ಜಾತೀಯತೆ ವಿಷಯ ಬಾರದೆ, ಸಮಾಜ ಒಗ್ಗೂಡುವಿಕೆ ಸಾಧ್ಯವಾಗಬೇಕು
- ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
  ಪಾಡ್ದನಗಳ ಗತಿ ಏನಾಗಬೇಕು?

---------------------
  ದೇಹದ ಯಾವುದೇ ಅಂಗಕ್ಕೆ ಗಾಯವಾದರೆ ಇಡೀ ದೇಹಕ್ಕೆ ನೋವಾಗುತ್ತದೆ
-ನರೇಂದ್ರ ಮೋದಿ, ಪ್ರಧಾನಿ
  ಗುಜರಾತ್‌ನ ನಾಯಿಮರಿಯ ಗಾಯ ವಾಸಿಯಾಗಿದೆಯೇ?

---------------------
  ಕಾವೇರಿ ನದಿನೀರು ಬಿಕ್ಕಟ್ಟು ಕುರಿತು ಪ್ರಧಾನಿ ಮೋದಿ ಯಾಕೆ ಮಧ್ಯೆ ಪ್ರವೇಶಿಸುತ್ತಿಲ್ಲ ಎಂಬುದರ ಮರ್ಮವನ್ನು ಸಮಯ ಬಂದಾಗ ಬಿಚ್ಚಿಡುತ್ತೇನೆ
-ಎಚ್.ಡಿ ದೇವೇಗೌಡ, ಮಾಜಿ ಪ್ರಧಾನಿ
  ಅಷ್ಟರಲ್ಲಿ ಕಾವೇರಿ ಕೊಳ್ಳ ಬರಿದಾಗಿರುತ್ತದೆ.

---------------------
  ವೈದ್ಯರು ಚಿಕಿತ್ಸೆ ನೀಡಿ ಪ್ರಾಪ್ತಿಸಿಕೊಳ್ಳುವ ಪ್ರಯತ್ನಕ್ಕೆ ವೌಲ್ಯ ಕಟ್ಟಬಾರದು
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ದೇವಸ್ಥಾನದ ಅರ್ಚಕರಿಗೂ ಇದನ್ನೇ ಬೋಧಿಸಬಾರದೇ?

---------------------
  ವಿದ್ಯಾವಂತರು ಜ್ಯೋತಿಷಿಗಳನ್ನು ಆದರ್ಶವಾಗಿ ಪರಿಗಣಿಸಬಾರದು
-ವೀರಪ್ಪ ಮೊಯ್ಲಿ, ಸಂಸದ
  ರಾಜಕಾರಣಿಗಳಿಗಷ್ಟೇ ಅವರು ಆದರ್ಶವೆ?

---------------------
  ನನಗೆ ರಾಜಕೀಯ ಸೇರುವ ಆಸೆ ಇಲ್ಲ
-ಶಿವರಾಜ್‌ಕುಮಾರ್, ನಟ
  
ಇದ್ದ ಬಿದ್ದ ಆಸೆಗಳೆಲ್ಲ ಕಳೆದ ಚುನಾವಣೆಯಲ್ಲಿ ಕೊಚ್ಚಿ ಹೋಗಿರಬೇಕು. 

---------------------
  ಪಾಕ್ ಕಾಶ್ಮೀರವನ್ನು ಪಡೆಯುವ ಕನಸು ಕಾಣುವುದನ್ನು ಬಿಡಬೇಕು
-ಸುಶ್ಮಾ ಸ್ವರಾಜ್, ಕೇಂದ್ರ ಸಚಿವ
  
ಕಾಶ್ಮೀರಿಗಳ ಕನಸುಗಳ ಬಗ್ಗೆ ಒಂದಿಷ್ಟು ಮಾತನಾಡಿ. 

---------------------
  ಯಾವತ್ತೂ ನ್ಯಾಯಕ್ಕೆ ಗೆಲುವಾಗುತ್ತದೆ
-ಕೆ.ಜೆ. ಜಾರ್ಜ್, ಸಚಿವ
  ಮತ್ತೆ ಕಾವೇರಿಯಲ್ಲಿ ಯಾಕೆ ನ್ಯಾಯ ನಮಗೆ ಉಲ್ಟಾ ಹೊಡೆಯಿತು?

---------------------
  ಉರಿ ದಾಳಿ ಬಗ್ಗೆ ಜಾಗತಿಕ ತನಿಖೆಯಾಗಲಿ
-ಸರ್ತಾಜ್ ಅಝೀಝ್, ಪಾಕ್ ಪ್ರಧಾನಿ ಸಲಹೆಗಾರ
  
ಮೈಯುರಿಯ ಹೇಳಿಕೆ. 

---------------------

  ದಿಲ್ಲಿ ಸರಕಾರದ ಆಡಳಿತದಿಂದ ಜನರನ್ನು ದೇವರೇ ಕಾಪಾಡಬೇಕು
-ವಿಜಯ್ ಗೋಯಲ್, ಕೇಂದ್ರ ಸಚಿವ
  
ಕೇಂದ್ರದಲ್ಲಿರುವ ದೆವ್ವದ ಕಾಟವಿರಬೇಕು. 

---------------------
  ಅಧಿಕಾರ ಇಲ್ಲದೆಯೂ ಜನಸೇವೆ ಮಾಡಲು ಸಾಧ್ಯ
-ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ
  
ಅಧಿಕಾರವಿಲ್ಲದೇ ಇದ್ದಾಗಷ್ಟೇ ಅದು ಸಾಧ್ಯ. 

---------------------
  ವಿಧಾನಸಭೆ ಚುನಾವಣೆಗೆ ಆರು ತಿಂಗಳ ಮೊದಲೇ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ
-ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ
  ಕಾವೇರಿ ಹೋರಾಟದ ಧೈರ್ಯದಿಂದಲೇ?

---------------------
  ಹಿಂದಿ ಚಿತ್ರೋದ್ಯಮದಲ್ಲಿ ಐಟಂ ಸಾಂಗ್‌ಗಳಿಂದಾಗಿ ಸುಂದರ ಮಹಿಳೆಯರ ವ್ಯಾಪಾರ ನಡೆಯುತ್ತದೆ
-ಜೂಹಿ ಚಾವ್ಲಾ, ನಟಿ
  ಒಂದು ಕಾಲದಲ್ಲಿ ವ್ಯಾಪಾರಕ್ಕೆ ಬಳಸಲ್ಪಟ್ಟ ಹಳೆ ಸರಕು.

---------------------
  ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ
-ನರೇಂದ್ರ ಮೋದಿ, ಪ್ರಧಾನಿ
  
ರಕ್ತವನ್ನು ಹೇಗೆ ಹರಿಸಬೇಕು ಎನ್ನುವುದರಲ್ಲಿ ನೀವು ಪ್ರವೀಣರು ಬಿಡಿ. 

---------------------
  ರೋಗ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಉತ್ತಮ
-ವಿನಯ ಕುಮಾರ್ ಸೊರಕೆ, ಶಾಸಕ
  ಆ ಮುನ್ನೆಚ್ಚರಿಕೆಯ ಭಾಗವಾಗಿ ನಿಮ್ಮನ್ನು ಸಚಿವ ಸ್ಥಾನದಿಂದ ಕಿತ್ತೆಸೆಯಲಾಯಿತೇ?

---------------------
  ಶಾಲೆಯಲ್ಲಿ ನಾನು ಯಾವಾಗಲೂ ಲೆಕ್ಕದಲ್ಲಿ ಫೈಲ್ . ಪಾಸಾಗ್ತಿದ್ರೆ ಎಂ.ಪಿ. ಆಗ್ತಿರಲಿಲ್ಲ
-ನಳಿನ್‌ಕುಮಾರ್ ಕಟೀಲು, ಸಂಸದ
  
ಮತದಾರರ ಲೆಕ್ಕವೂ ತಪ್ಪಿದೆ ಬಿಡಿ. 

---------------------
  ಮಠವನ್ನು ಸರ್ವನಾಶ ಮಾಡಲು ಸರಕಾರ ಯತ್ನಿಸುತ್ತಿದೆ
-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಅದನ್ನು ಸರ್ವನಾಶ ಮಾಡಲು ಸರಕಾರ ಯಾಕೆ? ನೀವೇಸಾಕು.

---------------------
  ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ಕುರುಬರು ಹೋಗಬಾರದು
-ವರ್ತೂರು ಪ್ರಕಾಶ್, ಶಾಸಕ
  
ಜನರು ನಿಮ್ಮ ಮಾತನ್ನು ಕೇಳಲು, ತಾವೇನು ಆಧುನಿಕ ಸಂಗೊಳ್ಳಿ ರಾಯಣ್ಣನೇ? 

---------------------
  ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆ ಯಾಚಿಸುತ್ತೇನೆ
-ಅಂಬರೀಷ್, ಮಾಜಿ ಸಚಿವ
  
ತಮ್ಮನ್ನು ಆಯ್ಕೆ ಮಾಡಿದ ತಪ್ಪಿಗೆ ಜನರು ನಿಮ್ಮನ್ನು ಕ್ಷಮಿಸಿದ್ದಾರೆ. 

---------------------
  ಹಗರಣ ಮಾಡಿ ಜೈಲಿಗೆ ಹೋಗಿದ್ದವರು ಅಭಿವೃದ್ಧಿ ಬಗ್ಗೆ ನಮ್ಮನ್ನೇ ಟೀಕಿಸುತ್ತಿದ್ದಾರೆ
-ಕೃಷ್ಣ ಭೈರೇಗೌಡ, ಸಚಿವ
  
ನೀವೇನೂ ಹಗರಣ ಮಾಡುತ್ತಿಲ್ಲವಲ್ಲ ಎಂಬ ಬೇಜಾರಿನಲ್ಲಿ ಟೀಕಿಸುತ್ತಿದ್ದಾರೆ. 

---------------------
  ಕಷ್ಟಪಟ್ಟು ಅಣೆಕಟ್ಟು ಕಟ್ಟಿದ್ದು ನಾವು. ಅದರ ಕೀಯನ್ನು ಬೇರೆಯವರಿಗೆ ಕೊಡಲ್ಲ
-ಡಿ.ಕೆ ಶಿವಕುಮಾರ್, ಸಚಿವ
  
ಅವರಿಗೆ ಕೀ ಬೇಡವಂತೆ, ನೀರು ಸಾಕಂತೆ. 

---------------------
   ಈ ರಾಜ್ಯದ ಜನರ ಹಿತಕ್ಕಾಗಿ (ಕಾವೇರಿ ನೀರಿಗಾಗಿ) ಜೈಲಿಗೆ ಹೋಗಲೂ ಸಿದ್ಧ
-ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
  
ಆದರೆ ಕಾಂಗ್ರೆಸ್ ನಿಮಗಾಗಿ ವೃದ್ಧಾಶ್ರಮದಲ್ಲಿ ಜಾಗ ಸಿದ್ಧಪಡಿಸುತ್ತಿದೆ.

 ---------------------
  ಪಾಕ್ ನಟರು ಉಗ್ರರಲ್ಲ
-ಸಲ್ಮಾನ್ ಖಾನ್, ನಟ
  
ಹೌದು, ಕಂಠಪೂರ್ತಿ ಕುಡಿದು ಯಾರನ್ನೂ ಅವರು ಕಾರು ಹರಿಸಿ ಕೊಂದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X