Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಚಲೋ ಉಡುಪಿಯೂ ಆ ಗೆಳೆಯನ ಎರಡು ಸಾವಿರ...

ಚಲೋ ಉಡುಪಿಯೂ ಆ ಗೆಳೆಯನ ಎರಡು ಸಾವಿರ ರುಪಾಯಿಯೂ..

ಹರ್ಷಕುಮಾರ್ ಕುಗ್ವೆಹರ್ಷಕುಮಾರ್ ಕುಗ್ವೆ3 Oct 2016 2:26 PM IST
share
ಚಲೋ ಉಡುಪಿಯೂ ಆ ಗೆಳೆಯನ ಎರಡು ಸಾವಿರ ರುಪಾಯಿಯೂ..

ಈಗ್ಗೆ ಮೂರು ತಿಂಗಳ ಹಿಂದೆ ನಮ್ಮ ಒಂದು ‌ವಾಟ್ಸಾಪ್ ಗ್ರೂಪಿನಲ್ಲಿ ಒಬ್ಬ ಸದಸ್ಯ ದಿನಕ್ಕೆ ಏಳೆಂಟು ಅ ತ್ಯುತ್ತಮ ಮತ್ತು ಸಕಾಲಿಕ ಪೋಸ್ಟುಗಳನ್ನು ಅಲ್ಲಿ ಇಲ್ಲಿ ಹೆಕ್ಕಿ ಫಾರ್ವರ್ಡ್ ಮಾಡುತ್ತಿದ್ದ.‌ ನನಗೆ ಬಹಳ ವಿಶೇಷ ಅನಿಸಿ ಒಮ್ಮೆ ಕಾಲ್ ಮಾಡಿ ಮಾತಾಡಿಸಿದಾಗ ತನ್ನ ಹೆಸರು ರವಿ ಎಂದು ತಿಳಿಸಿ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವೆ ಎಂದು ತಿಳಿಸಿದ. ನಂತರ ಒಂದೆರಡು ಸಲ ಗಂಭೀರ ಚರ್ಚೆಗಳು ನಡೆಯುವ ಸಮಯದಲ್ಲಿ ಸಹ ಆತನ‌ ಫಾರ್ವರ್ಡ್ ಮೆಸೇಜುಗಳು ಬಂದಾಗ ನಾನು ಸ್ವಲ್ಪ ಕಿರಿಕಿರಿ ಮಾಡಿಕೊಂಡು ಆತನಿಗೆ ನೋಡಿ ಹಾಕಿ ಎಂದು ಹೇಳಿದ್ದೆ. 

ಇವತ್ತು ಬೆಳಿಗ್ಗೆ ರವಿ ಕಾಲ್ ಮಾಡಿ ಸರ್ ಸಿಗ್ತೀರಾ ಎಂದ. ಆಯ್ತು ಎಲ್ಲಿ ಸಿಗ್ತೀರಿ ಎಂದು ಕೇಳಿದೆ. 11 ಗಂಟೆಗೆ ಮಲ್ಲೇಶ್ವರಂ ಸರ್ಕಲ್ ಬಳಿ ಬರ್ತೀನಿ ಎಂದೆ.‌ ಓಕೆ ಸರ್ ಎಂದ. ಸರಿಯಾಗಿ 11 ಗಂಟೆಗೆ ಕಾಲ್ ಬಂತು. ಸರ್ ಎಲ್ಲಿದೀರಿ? ನಾನಿಲ್ಲಿಗೆ ಬಂದಿದೀನಿ ಎಂದ.‌ ನಾನು ಅಲ್ಲಿಗೆ ತಲುಪುವುದು 11.20 ಆಗಿತ್ತು. ಅವನು ಹೇಳಿದ್ದ ಜಾಗದಲ್ಲಿ ಸುಮಾರು ಜನರಿದ್ದರು.  ರವಿಯನ್ನು ಫೋಟೋದಲ್ಲಿ ಕೂಡಾ ಯಾರೆಂದು ತಿಳಿಯದೇ ಮತ್ತೆ ಕಾಲ್ ಮಾಡಿದೆ. ಆಗ ಎದುರಿಗೇ ನಿಂತಿದ್ದ ಆ ಅಂಧ ಯುವಕ ರವಿ ಕಾಣಿಸಿದ‌. 
ನನ್ನ ಮನಸು ಒಂದು ಕ್ಷಣ ವಿಚಲಿತವಾಗಿಬಿಟ್ಟಿತು. 


ರವಿಯ ಬಳಿ ಹೋಗಿ ಕರೆದುಕೊಂಡು ಸ್ಕೂಟರ್ ಮೇಲೆ ಸ್ವಲ್ಪ ದೂರದಲ್ಲಿ ಹೋಟೆಲಿಗೆ ಹೋಗಿ ಕುಳಿತು ಕಾಫಿ ಕುಡಿಯುತ್ತಾ ಪರಸ್ಪರ ಪರಿಚಯ ಮಾಡಿಕೊಂಡೆವು. ಅಲ್ಲಿಂದ ಸ್ಪೂರ್ತಿಧಾಮದಲ್ಲಿ ಗೆಳೆಯರಾದ ಹುಲಿಕುಂಟೆ ಮೂರ್ತಿ, ಡಿ.ಎಂ.ಸಿ. ಶಿವು, ಸಿದ್ದಪ್ಪ ಚಲೋ ಉಡುಪಿ ಜಾಥಾದ ಹಾಡುಗಳ ತಾಲೀಮು‌ ನಡೆಸುತ್ತಿದ್ದಲ್ಲಿಗೆ ಹೊರಟೆವು. ನನಗೆ ದಾರಿ ಗೊತ್ತಿರಲಿಲ್ಲ. ನಾ ಹೇಳ್ತೀನಿ ಸರ್ ಎಂದು‌ ರವಿ ಹೇಳಿದ. ನನಗೆ ಅತ್ಯಾಶ್ಚರ್ಯ.‌ ಕಡೆಗೆ ಕೊಟ್ಟಿಗೆಪಾಳ್ಯದ ವರೆಗೂ ಒಂದೊಂದೂ ಕ್ರಾಸ್ ಕೂಡಾ ಹೇಳುತ್ತಾಬಂದ ರವಿಗೆ ಇದು ಹೇಗೆ ಸಾಧ್ಯ ಎಂದು ಕೇಳಿದೆ.‌ ಈ ದಾರಿಯಲ್ಲಿ ಅಭ್ಯಾಸವಾಗಿದೆ ಸರ್... ಮಾತ್ರ ಅಲ್ಲ ಕಣ್ಣು ಕಾಣಿಸದಿದ್ದರೂ ಫೀಲ್ ಆಗುತ್ತದೆ ಎಂದ. ಈ ಮಾತು ಕೇಳಿ ನಾನು ಇಂಗ್ಲಿಷಿನ differently abled ಪದಕ್ಕೆ ಸೂಕ್ತ ಕನ್ನಡ ಪದಕ್ಕಾಗಿ ತಡಕಾಡಿದೆ.‌ ಭಿನ್ನ ಚೇತನರು, ವಿಶೇಷ ಚೇತನರು... ಯಾವೂ ಸರಿ ಎನಿಸಲಿಲ್ಲ. 
ರವೀ ನಿನಗೆ ಈ ಪ್ರಗತಿಪರ ಸರ್ಕಲ್ ಒಡನಾಟ ಹೇಗೆ ಎಂದು ಕೇಳಿದೆ.‌ ಆಗ ತನ್ನ ಕತೆ ಹೇಳಿದ.

ರವಿ, ಅಂಧ ಮಾತ್ರ ಅಲ್ಲ ಅನಾಥ ಕೂಡಾ.‌ ಹುಟ್ಟಿದ ಕೂಸನ್ನು ಬಿಟ್ಟು ನಡೆದಿದ್ದರು ಹೆತ್ತವರು.‌ ನಂತರ ರವಿ ಬೆಳೆದಿದ್ದು ಕ್ರೈಸ್ತ ಮಿಶನರಿಯೊಂದರ ಸಹಾಯದಿಂದ. ಆದರೆ ಇವನಿಗೆ ಕ್ರೈಸ್ತನೇ ಆಗಬೇಕೆಂಬ ಯಾವ ಒತ್ತಾಯವೂ ಇರಲಿಲ್ಲವಂತೆ. ನಂತರ ಪಿಯುಸಿ ಪರೀಕ್ಷೆ ಬರೆಯುವಾಗ ಪರಿಚಯವಾದ ಒಬ್ಬ ಮಹಿಳೆ ಇವನ ಬಗ್ಗೆ ಕೇಳಿ ರವಿಗೆ ಪದವಿ ಶಿಕ್ಷಣ ಕೊಡಿಸುವ ಭರವಸೆ ನೀಡಿ ಅದರಂತೆ ಈತನ ಓದಿಗೆ, ವಸತಿಗೆ ಸಹಾಯ ಮಾಡಿದರಂತೆ. ಡಿಗ್ರಿ ಓದಿ ಅಂಚೆ ಇಲಾಖೆಯಲ್ಲಿ ಕ್ಲರ್ಕ್ ಕೆಲಸ ಸಿಕ್ಕು ತನ್ನ ಕಾಲ ಮೇಲೆ ತಾನು ನಿಂತಿದ್ದಾನೆ.

ಅಂದಹಾಗೆ, ರವಿಗೆ ಸ್ಮಾರ್ಟ್ ಫೋನ್ ಮೂಲಕ ಫೇಸ್ಬುಕ್ ನಲ್ಲಿ ಮೊದಲಿಗೆ ಪಂಡಿತಾರಾಧ್ಯ ಮೈಸೂರು ಎಂಬುವವರ ಪೋಸ್ಟುಗಳನ್ನು ಫಾಲೋ ಮಾಡುತ್ತಾ ಮಾಡುತ್ತಾ ನಂತರ ಇತರರ ಸಹವಾಸವೂ ಆಗಿ ಕೆಲವು ವಾಟ್ಸಾಪ್ ಗ್ರೂಪುಗಳಿಗೂ ಸೇರಿಸಲಾಗಿದೆ. ಅಂದಹಾಗೆ, ರವಿಗೆ ಓದುವುದು ಕಷ್ಟ. ಸ್ಮಾರ್ಟ್ ಫೋನಿನ App ಒಂದರ ಸಹಾಯದಿಂದ ಬರಹಗಳನ್ನು ಕೇಳಿಸಿಕೊಂಡು ಅವನ್ನು ಅರ್ಥ ಮಾಡಿಕೊಂಡು ಕಾಪಿ ಮಾಡಿ ಗ್ರೂಪುಗಳಿಗೆ forward ಮಾಡುತ್ತಾನೆ. 


ಈ ವಾಸ್ತವ ತಿಳಿದ ಮೇಲೆ ನನಗೆ ರವಿಯ ಮೇಲೆ ಅಪಾರ ಅಭಿಮಾನವೂ, ಆತನ ಬಗ್ಗೆ ಹಿಂದೆ ಕಿರಿಕಿರಿ ಮಾಡಿಕೊಂಡಿದ್ದಕ್ಕೆ ನನ್ನ ಮೇಲೆಯೇ ಬೇಸರವೂ ಆಯಿತು. ನಾನು ಅಷ್ಟು ಅಸೂಕ್ಷ್ಮತೆ ತೋರಿದಾಗ ರವಿ ಎಷ್ಟು ನೊಂದುಕೊಂಡಿದ್ದಿರಬಹುದು ಎಂದು ಯೋಚಿಸಿ‌ ದುಃಖವೂ ಆಯಿತು.‌ 
"ಸರ್, ನಾನು ಬಲಪಂಥೀಯರ ನಡುವೆಯೂ ಬೆರೆಯಲು ಪ್ರಯತ್ನಿಸಿ ನೋಡಿದೆ. ಆದರೆ ಅವರ ನಡವಳಿಕೆ, ಸ್ಪಂದನೆಗಳು ನನಗೆ ಅವರೊಂದಿಗೆ ಇರಬೇಕು ಅನಿಸಲಿಲ್ಲ ಎಂದು ರವಿ ಹೇಳಿದ್ದು ಸಂತೋಷ ನೀಡಿತು.

ನಂತರ ಹಾಡಿನ ತಾಲೀಮಿನಲ್ಲಿ ತಾನು ಸಹ‌ ಕಂಜರ ಹಿಡಿದು ಬಡಿಯುತ್ತಾ, ಕೋರಸ್ ಕೊಡುತ್ತಿದ್ದ. ಅಲ್ಲಿಂದ ಹೊರಟು ಟೋಲ್ ಗೇಟ್‌ ಬಳಿ ಇಳಿಸಿ ಇನ್ನೇನು ಹೊರಡಲನುವಾಗುತ್ತಿದ್ದಂತೆ ಸರ್.... ಎಂದು‌ ತಡೆದ. ಏನು ಎಂದು ನೋಡಿದರೆ ಜೇಬಿನಿಂದ‌ ಹಣ ತೆಗೆದು ಚಲೋ ಉಡುಪಿ ಜಾಥಾ, ಸಮಾವೇಶಕ್ಕೆ ಸರ್ ತೊಗೊಳಿ ಎಂದ. ಜೊತೆಗಿದ್ದ ವಿಕಾಸ್ ಕೈಗೆ ರವಿ ಎರಡು ಸಾವಿರ ರೂಪಾಯಿ ದೇಣಿಗೆ ನೀಡುವಾಗ ಫೋಟೋ ತೆಗೆಯಬೇಕೆನಿಸಿ ತೆಗೆದೆ. ನಮ್ಮ ಮನಸ್ಸು ತುಂಬಿ ಬಂದಿತ್ತು. 
ಚಲೋ ಉಡುಪಿ ಆಂದೋಲನ ಚಾಲನೆಗೆ ಇನ್ನೆರಡು ದಿನ‌ ಮಾತ್ರ ಬಾಕಿ‌ ಇದೆ.‌ ಇಷ್ಟು ದೊಡ್ಡ ಸಮಾವೇಶ, ಜಾಥಾ, ಅವುಗಳಿಗೆ ಬೇಕಾದ ವ್ಯವಸ್ಥೆ ಮಾಡಲು ಪುರುಸೊತ್ತಿಲ್ಲದೇ ಓಡಾಡುತ್ತಿರುವ ನಾವು ಎಲ್ಲಿ‌ ಹಣ ಸಂಗ್ರಹ ಕಡಿಮೆಯಾಗುತ್ತದೆಯೋ ಏನೋ ಎಂಬ ಆತಂಕದಲ್ಲಿಯೂ ನನಗೆ ಇಂದು ರವಿ ನೀಡಿದ‌ 2000 ರೂಪಾಯಿ ಇನ್ನಿಲ್ಲದ ಧೈರ್ಯ ನೀಡಿದೆ.‌ ಚಲೋ‌ ಉಡುಪಿ ,ಒಬ್ಬ ಅನಾಥನಾಗಿದ್ದು, ಕಣ್ಣು ಕಾಣದ ರವಿಯ ಮನಸು, ಹೃದಯಕ್ಕೂ ಕಂಡಿರುವುದು ಈ ಚಳವಳಿಯಲ್ಲಿ ತೊಡಗಿರುವ ನನ್ನ ‌ಮನಸ್ಥೈರ್ಯವನ್ನು ದುಪ್ಪಟ್ಟು ಹೆಚ್ಚಿಸಿದೆ... ಚಲೋ ಉಡುಪಿ ಖಂಡಿತಾ ಯಶಸ್ವಿಯಾಗಿ ನಡೆಯಲಿದೆ. ಯಾಕೆಂದರೆ ಅದು ತಲುಪಬೇಕಾದವರನ್ನು ತಲುಪಿದೆ... 
ಸಹೋದರ ರವಿ ಜೈ ಭೀಮ್.

ಅಂದಹಾಗೆ, ರವಿ 09ರಂದು ಉಡುಪಿಗೆ ಬಂದು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾನೆ.

#ಚಲೋಉಡುಪಿ

ಹರ್ಷಕುಮಾರ್ ಕುಗ್ವೆ

share
ಹರ್ಷಕುಮಾರ್ ಕುಗ್ವೆ
ಹರ್ಷಕುಮಾರ್ ಕುಗ್ವೆ
Next Story
X