ಗಾಂಧಿ ಹತ್ಯೆಗಾಗಿ ಗೋಡ್ಸೆಗೆ ಸೆಲ್ಯುಟ್: ಸಾಧ್ವಿ ಪ್ರಾಚಿ
ಹೊಸದಿಲ್ಲಿ, ಅ.4: ರಾಷ್ಟ್ರಪಿತನನ್ನು ತಿರಸ್ಕರಿಸಿರುವ ವಿಎಚ್‌ಪಿ ನಾಯಕಿ, ಸಂಸದೆ ಸಾಧ್ವಿ ಪ್ರಾಚಿ, ಮಹಾತ್ಮ ಗಾಂಧಿ ತನಗೆ ಆದರ್ಶವಲ್ಲ ಎಂದಿದ್ದಾರೆ. ಮಹಾತ್ಮರನ್ನು ಗುಂಡಿಟ್ಟು ಕೊಂದುದಕ್ಕಾಗಿ ನಾಥೂರಾಮ್ ಗೋಡ್ಸೆಯನ್ನು ತಾನು ಗೌರವಿಸುವೆನೆಂದು ಅವರು ಹೇಳಿದ್ದಾರೆ. ಭಾರತ ವಿಭಜನೆ ಹಾಗೂ ಕಾಶ್ಮೀರ ವಿವಾದಕ್ಕಾಗಿ ಗಾಂಧೀಜಿಯವರನ್ನು ದೂಷಿಸುವ ಪ್ರಾಚಿ, ಅದನ್ನು ಒಪ್ಪಿಕೊಂಡ ಮೇಲೆ ನೆರೆ ದೇಶದೊಂದಿಗೆ ಸೌಹಾರ್ದದಿಂದ ಇರಬೇಕು. ನೆರೆಹೊರೆ ಕಠಿಣವಾಗಿ ವರ್ತಿಸಿದರೆ ಅದಕ್ಕೆ ಪಾಠ ಕಲಿಸುವುದು ಅಗತ್ಯವೆಂದು ಹೇಳಿದ್ದಾರೆ.
ಸಾಧ್ವಿ ರವಿವಾರ, ತನ್ನ ಕುಖ್ಯಾತ ‘‘ಪಾಕಿಸ್ತಾನ್ ಚಲೋ’’ ನಿಂದನೆಯ ಮೂಲಕ, ಮುಂದುವರಿದಿರುವ ಬಾಲಿವುಡ್ ವಿವಾದದಲ್ಲಿ ಸೇರಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಕಲಾವಿದರ ಕುರಿತು ಮಾತನಾಡುತ್ತಾ ಸಾಧ್ವಿ ಪ್ರಾಚಿ, ಅವರು ತಮ್ಮ ನೈಪುಣ್ಯವನ್ನು ಅವರ ದೇಶದಲ್ಲೇ ತೋರಿಸಲಿ. ಪಾಕಿಸ್ತಾನಿ ಕಲಾವಿದರ ಬಗ್ಗೆ ಸಹಾನುಭೂತಿ ತೋರಿಸುತ್ತಿರುವ ಸಲ್ಮಾನ್ ಖಾನ್, ಶಾರುಕ್ ಖಾನ್ ಹಾಗೂ ಅಮಿರ್ ಖಾನ್ ಸಹಿತ ಕಲಾವಿದರು ಸಹ ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದಾರೆ.







