ಫ್ರಿಡ್ಜ್ ಸ್ಫೋಟಗೊಂಡು ಮಹಿಳೆ ಮೃತ್ಯು

ಕುಂದಾಪುರ, ಅ.3: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಫ್ರಿಡ್ಜ್ ಸ್ಫೋಟಗೊಂಡು ಮಹಿಳೆಯೋರ್ವರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಬಳಿ ಸಂಭವಿಸಿದೆ.
ಕುಂದಾಪುರ ಠಾಣಾ ವ್ಯಾಪ್ತಿಯ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಅಬ್ಬಿಗುಡ್ಡೆ ನಿವಾಸಿ ನೂರ್ ಜಹಾನ್ (40) ಮೃತ ಮಹಿಳೆ.
ಈಕೆ ಮನೆಯ ಫ್ರಿಡ್ಜ್‌ನ ಬಾಗಿಲು ತೆರೆಯುತ್ತಿದ್ದ ವೇಳೆ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಫ್ರಿಡ್ಜ್ ಸ್ಫೋಟಗೊಂಡಿದೆ. ಘಟನೆಯ ಪರಿಣಾಮ ನೂರ್ ಜಹಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೆಂಕಿಯಿಂದಾಗಿ ಮನೆಯ ಕೆಲ ಸೊತ್ತುಗಳು ಸುಟ್ಟು ಭಸ್ಮವಾಗಿವೆ.
ಘಟನೆಯ ವೇಳೆ ಮನೆಯಲ್ಲಿ ನೂರ್‌ಜಹಾನ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ. ಕುಂದಾಪುರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





