. ವಳಕಾಡು ಶಾಲೆಯಲ್ಲಿ ಕವಿತಾಗಾನ ‘ಭಾವಲೋಕ’

ಉಡುಪಿ, ಅ.3: ಬೆಂಗಳೂರಿನ ಸ್ವರಸುರಭಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಗಾಯಕ ಎಂ.ಎಸ್.ಗಿರಿಧರ್ ಸಾರಥ್ಯದಲ್ಲಿ ಕನ್ನಡನಾಡಿನ ಶ್ರೇಷ್ಠ ಕವಿಗಳ ಕವಿತಾಗಾನ ‘ಭಾವಲೋಕ’ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಿತ್ತು.
ಕಾರ್ಯಕ್ರಮವನ್ನು ಹಿರಿಯ ಸಂಗೀತ ನಿರ್ದೇಶಕ ಉಡುಪಿ ನಾದ ವೈಭವಂನ ಉಡುಪಿ ವಾಸುದೇವ ಭಟ್ ಉದ್ಘಾಟಿಸಿದರು. ಕವಿ, ಸಾಹಿತಿ ಆಚಾರ್ಯ ಜಯಾನಂದ ಉಪ್ಪೂರು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಶೇಖರ್ ಅಜೆಕಾರ್ ಭಾಗವಹಿಸಿದ್ದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಇಂದು ರಮಾನಂದ ಭಟ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ನಿರ್ಮಲಾ ಬಿ. ಉಪಸ್ಥಿತರಿದ್ದರು.
ಎಂ.ಎಸ್.ಗಿರಿಧರ್ ಸ್ವಾಗತಿಸಿದರು. ಶ್ರೀಧರ ಅಯ್ಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಕಾಶವಾಣಿ ಕಲಾವಿದೆ ವಸುಧಾ ಜಿ. ತಮ್ಮ ಮಧುರ ಕಂಠಸಿರಿಯಿಂದ ವಿದ್ಯಾರ್ಥಿಗಳನ್ನು ರಂಜಿಸಿದರು. ಎಂ.ಎಸ್.ಗಿರಿಧರ್ ಹಾಗೂ ಸ್ವರ ಸುರಭಿ ಟ್ರಸ್ಟ್‌ನ ಅಧ್ಯಕ್ಷ ಶ್ರೀಧರ ಅಯ್ಯರ್ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.





