ಉಳ್ಳಾಲ: ವಿದ್ಯಾರ್ಥಿ ಸಮ್ಮಿಲನ
ಉಳ್ಳಾಲ, ಅ.3: ಇಲ್ಲ್ಲಿನ ಸೈಯದ್ ಮದನಿ ದಅ್ವಾ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ಅಧ್ಯಕ್ಷ ರಶೀದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಮರ್ಕಝ್‌ನ ಉಪಕುಲಪತಿ ಡಾ.ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಉಸ್ತಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ, ಅರೇಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಸೈಯದ್ ಮದನಿ ಹಿಫ್ಲುಲ್ ಕುರ್‌ಆನ್ ಕಾಲೇಜಿನ ಪ್ರಾಂಶುಪಾಲ ಅಲ್ ಹಾಫಿಲ್ ಅಬ್ದುರ್ರಹ್ಮಾನ್ ಸಖಾಫಿ, ಮುಕ್ಕಚ್ಚೇರಿ ಮುದರ್ರಿಸ್ ಸ್ವಾದಿಕ್ ಸಖಾಫಿ, ಸೈಯದ್ ಮದನಿ ದಅ್ವಾ ಕಾಲೇಜಿನ ಉಪನ್ಯಾಸಕರಾದ ಅಬ್ದುರ್ರಹ್ಮಾನ್ ಕಾಮಿಲ್ ಸಖಾಫಿ ಹಾಗೂ ಮುಸ್ತಫ ಕಾಮಿಲ್ ಸಖಾಫಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಇಬ್ರಾಹೀಂ ಅಹ್ಸನಿ ಮಂಜನಾಡಿ ಸ್ವಾಗತಿಸಿದರು.
Next Story





