ರೈತರ ಬೆಳೆಗಳ ರಕ್ಷಣೆಗೆ ಹೆಚ್ಚುವರಿ ನೀರು ಬಳಕೆ: ಮುಖ್ಯಮಂತ್ರಿ

ಬೆಂಗಳೂರು, ಅ.3: ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆಗಳ ರಕ್ಷಣೆಗೆ ಹಾಗೂ ಬೆಂಗಳೂರು ಮಹಾನಗರ ಸೇರಿದಂತೆ ಇನ್ನಿತರ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯ ತುರ್ತು ಅಧಿವೇಶನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಂಡಿಸಿದ ನಿರ್ಣಯದ ಮೇಲಿನ ಚರ್ಚೆಗೆ ಸರಕಾರದ ಪರವಾಗಿ ಅವರು ಉತ್ತರಿಸಿದರು.ಾವೇರಿ ಕೊಳ್ಳದ ಹಾರಂಗಿ, ಹೇಮಾವತಿ, ಕೃಷ್ಣರಾಜಸಾಗರ ಹಾಗೂ ಕಬಿನಿಯಲ್ಲಿ ಇರುವ 27.60 ಟಿಎಂಸಿ ನೀರನ್ನು ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಈ ಭಾಗದ ಪಟ್ಟಣಗಳು ಹಾಗೂ 600ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಆವಶ್ಯಕತೆಗಾಗಿ ಮಾತ್ರ ಬಳಸಿಕೊಳ್ಳಲು ಸೆ.23ರಂದು ಸದನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದರು.ನಾಲ್ಕು ಜಲಾಶಯಗಳಲ್ಲಿ ಸೆ.23ರಂದು ಇದ್ದಂತಹ 27.60 ಟಿಎಂಸಿ ನೀರಿನ ಸಂಗ್ರಹವು 34.13 ಟಿಎಂಸಿಗೆ ಏರಿಕೆಯಾಗಿದೆ. ಆದುದರಿಂದ, ಹೆಚ್ಚುವರಿಯಾಗಿ ಸಂಗ್ರಹವಾಗಿರುವ 6.50 ಟಿಎಂಸಿ ನೀರನ್ನು ರೈತರ ಬೆಳೆಗಳಿಗೆ ಹರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
&06ನ್ಯಾಯಾಲಯದ ಜೊತೆ ಸಂಘರ್ಷ ಮಾಡುವ ಉದ್ದೇಶ ನಮಗಿಲ್ಲ. ಆ ರೀತಿಯಲ್ಲಿ ನಮ್ಮ ರಾಜ್ಯ ಯಾವತ್ತೂ ಮಾಡಿಲ್ಲ. 2007ರ ಫೆ.5ರಂದು ಕಾವೇರಿ ನ್ಯಾಯಾಧೀಕರಣ ನೀಡಿರುವ ಐತೀರ್ಪಿನಲ್ಲಿ ಸಾಮಾನ್ಯ ವರ್ಷದಲ್ಲಿ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡುವಂತೆ ಆದೇಶಿಸಲಾಗಿದೆ. ಆದರೆ, ಸಂಕಷ್ಟದ ವರ್ಷದ ಕುರಿತು ಸ್ಪಷ್ಟಣೆಯಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.ರಲ್ಲಿ 383 ಟಿಎಂಸಿ, 2006-07ರಲ್ಲಿ 258 ಟಿಎಂಸಿ, 2007-08ರಲ್ಲಿ 253 ಟಿಎಂಸಿ, 2008-09ರಲ್ಲಿ 210 ಟಿಎಂಸಿ, 2009-10ರಲ್ಲಿ 222 ಟಿಎಂಸಿ, 2010-11ರಲ್ಲಿ 211 ಟಿಎಂಸಿ, 2011-12ರಲ್ಲಿ 240 ಟಿಎಂಸಿ, 2012-13ರಲ್ಲಿ 100 ಟಿಎಂಸಿ(ಸಂಕಷ್ಟದ ವರ್ಷ), 2013-14ರಲ್ಲಿ 259 ಟಿಎಂಸಿ, 2014-15ರಲ್ಲಿ 229 ಟಿಎಂಸಿ, 2015-16ರಲ್ಲಿ 152 ಟಿಎಂಸಿ ಹಾಗೂ ಪ್ರಸಕ್ತ ಸಾಲಿನಲ್ಲಿ ಈವರೆಗೆ 53.2 ಟಿಎಂಸಿ(ಸಂಕಷ್ಟದ ವರ್ಷ) ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ ಎಂದು ಮುಖ್ಯಮಂತ್ರಿ ವಿವರಣೆ ನೀಡಿದರು.ಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹವು ಕೇವಲ ಕುಡಿಯಲು ಮಾತ್ರ ಬಳಕೆ ಮಾಡಬಹುದಾಗಿದ್ದ ಕಾರಣ, ನಾವು ಅಸಹಾಯಕರಾಗಿದ್ದೇವೆ. ನ್ಯಾಯಾಧೀಕರಣ ನಮಗೆ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡುವಂತೆ ಆದೇಶಿಸಿದ್ದರೂ, ಹೆಚ್ಚುವರಿಯಾಗಿ 1400 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ ಎಂದು ಅವರು ಹೇಳಿದರು.ಾವೇರಿ ನ್ಯಾಯಾಧೀಕರಣದ ಐತೀರ್ಪಿನಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಕುಡಿಯುವ ನೀರು ಮೂಲಭೂತ ಹಕ್ಕು. ರಾಷ್ಟ್ರೀಯ ಜಲನೀತಿಯಲ್ಲೂ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ಆದರೆ, ಆ.19ರಂದು ತಮಿಳುನಾಡು 50 ಟಿಎಂಸಿ ನೀರು ಬಿಡುಗಡೆ ಮಾಡಿಸುವಂತೆ ಕೋರಿ ಸಲ್ಲಿಸಿದ್ದ ಮಧ್ಯಾಂತರ ಅರ್ಜಿಯಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.ಾವೇರಿ ನ್ಯಾಯಾಧೀಕರಣವು ನಮಗೆ 18.085 ಲಕ್ಷ ಎಕರೆ ಬೆಳೆಯಲು ಅವಕಾಶ ನೀಡಿದೆ. ಆದರೆ, ಈ ವರ್ಷ 6.15 ಲಕ್ಷ ಎಕರೆಯಲ್ಲಿ ಮಾತ್ರ ಬಿತ್ತನೆಯಾಗಿದೆ. ಹೇಮಾವತಿ ಅಣೆಕಟ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದ 1.85 ಲಕ್ಷ ಎಕರೆ ಬೆಳೆಗೆ ನೀರು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಈಗ ಉಳಿದಿರುವುದು ಕೇವಲ 4.26 ಲಕ್ಷ ಎಕರೆ ಬೆಳೆ ಮಾತ್ರ. ಆ ಬೆಳೆಗಳ ರಕ್ಷಣೆಗೆ ನೀರು ಕೊಡಬೇಕಿದೆ ಎಂದು ಅವರು ಹೇಳಿದರು.
ಬಿಳಿಗೊಂಡ್ಲು ಜಲಮಾಪನ ಕೇಂದ್ರದಲ್ಲಿ ಪ್ರತಿದಿನ 1200-1300 ಕ್ಯೂಸೆಕ್ ನೀರು ದಾಖಲಾಗುತ್ತಿದೆ. ನಾಲೆಗಳಿಗೆ ನೀರು ಬಿಟ್ಟರೆ 3 ಸಾವಿರ ಕ್ಯೂಸೆಕ್ ತಾನಾಗಿಯೆ ಹರಿದು ಹೋಗಲಿದೆ. ಜೊತೆಗೆ ಹೆಚ್ಚುವರಿಯಾಗಿ ಸೋರಿಕೆಯಾಗುವ ನೀರು 3 ಸಾವಿರ ಕ್ಯೂಸೆಕ್‌ನಷ್ಟಿದೆ. ಎಂತಹ ಕಷ್ಟಬಂದರೂ ಜನತೆಗೆ 23.30 ಟಿಎಂಸಿ ನೀರು ಬೇಕು. ಅದರಲ್ಲಿ ರಾಜಿಮಾಡಿಕೊಳ್ಳುವ ಪ್ರಶ್ನೆಯೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ರೈತರ ಬೆಳೆಗಳಿಗೆ 43 ಟಿಎಂಸಿ ನೀರು ಬೇಕು. ಮುಂದಿನ ಡಿಸೆಂಬರ್‌ವರೆಗೆ 29.29 ಟಿಎಂಸಿ ಹರಿದು ಬರುವನಿರೀಕ್ಷೆಯಿದೆ(ಅಕ್ಟೋಬರ್-16.40, ನವೆಂಬರ್-7.68 ಹಾಗೂ ಡಿಸೆಂಬರ್‌ನಲ್ಲಿ 5.21 ಟಿಎಂಸಿ). ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಪಾಲನೆಯೊಂದಿಗೆ, ಜನತೆಗೆ ಕುಡಿಯಲು ಹಾಗೂ ರೈತರ ಬೆಳೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಾವೇರಿ ನ್ಯಾಯಾಧೀಕರಣದ ಆದೇಶವನ್ನು ಪ್ರಶ್ನಿಸಿ ನಾವು ಸಲ್ಲಿಸಿರುವ ಎಸ್‌ಎಲ್‌ಪಿ ಅ.18ರಂದು ವಿಚಾರಣೆಗೆ ಬರಲಿದೆ. ಅದರ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರದಂತೆ, ರಾಜ್ಯದ ಹಿತಕ್ಕೆ ಪೂರಕವಾಗಿ ಈ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.ಾವೇರಿ ನಿರ್ವಹಣಾ ಮಂಡಳಿ ರಚನೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರದ ಅಟಾರ್ನಿ ಜನರಲ್ ಸುಪ್ರೀಂಕೋರ್ಟ್‌ಗೆ ಪರಿಷ್ಕೃತ ಪ್ರಮಾಣ ಪತ್ರ ಸಲ್ಲಿಸಿರುವುದು ಅಭಿನಂದನಾರ್ಹ. ಈ ವಿಚಾರಕ್ಕಾಗಿ ಪ್ರಧಾನಿ ನರೇಂದ್ರಮೋದಿ, ಕೇಂದ್ರದ ಸಚಿವರು, ಸಂಸದರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಸದನದ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ನೀರಿಲ್ಲದೆ ಬೆಳೆಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ ಒದಗಿಸಲು ಸರಕಾರ ಬದ್ಧವಾಗಿದೆ. ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತವಾದ ಪರಿಹಾರ ಒದಗಿಸಲಾಗುವುದು. ಅಲ್ಲದೆ, ಕಾವೇರಿ ಗಲಾಟೆ ಸಂದರ್ಭದಲ್ಲಿ ಬಂಧನಕ್ಕೊಳಗಾಗಿರುವ ಅಮಾಯಕರ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ರಾಜ್ಯದ ಪರ ವಕೀಲ ನಾರಿಮನ್‌ಗೆ ನಾನು ಬರೆದಿದ್ದ ಪತ್ರವನ್ನೆ ಸೆ.30ರಂದು ಸುಪ್ರೀಂಕೋರ್ಟ್‌ನಲ್ಲಿ ವಾದವನ್ನಾಗಿ ಪ್ರಕಟಿಸಿದ್ದಾರೆ. ಕಳೆದ 32 ವರ್ಷಗಳಿಂದ ನಾರಿಮನ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯದ ಕಾನೂನು ತಂಡವನ್ನು ಬಲವರ್ಧಿಸಲು ಹೆಚ್ಚುವರಿ ವಕೀಲರನ್ನು ನೀಡಬಹುದು. ಆದರೆ, ಅ.18ರಂದು ವಿಚಾರಣೆಗೆ ಬರಲಿರುವ ಎಸ್‌ಎಲ್‌ಪಿ ಕುರಿತು ವಾದ ಮಂಡಿಸಲು ನಾರಿಮನ್ ಅನುಭವ ಅಗತ್ಯ.
-ಸಿದ್ದರಾಮಯ್ಯ, ಮುಖ್ಯಮಂತ್ರಿ







