Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 75% ಭಾರತೀಯ ಮುಸ್ಲಿಮರು ಬಡವರು, ಹಾಗಾದರೆ...

75% ಭಾರತೀಯ ಮುಸ್ಲಿಮರು ಬಡವರು, ಹಾಗಾದರೆ ‘ಓಲೈಕೆ’ ಯಾರನ್ನು ಮಾಡಿದ್ದು ?

ವಾರ್ತಾಭಾರತಿವಾರ್ತಾಭಾರತಿ4 Oct 2016 12:50 PM IST
share
75% ಭಾರತೀಯ ಮುಸ್ಲಿಮರು ಬಡವರು, ಹಾಗಾದರೆ ‘ಓಲೈಕೆ’ ಯಾರನ್ನು ಮಾಡಿದ್ದು ?

ಭಾರತೀಯ ಮುಸ್ಲಿಮರ ಸ್ಥಿತಿ ಹೇಗಿದೆ ?

ಆಘಾತಕಾರಿ ಅಂಕಿ ಅಂಶಗಳು

ಓಲೈಕೆ ಆದ ಸಮುದಾಯದ ಪರಿಸ್ಥಿತಿ ಹೀಗೆ ಇರುತ್ತದೆಯೇ ?

ಹೊಸದಿಲ್ಲಿ,ಅ.4 : ಮೋದಿ ಸರಕಾರ ಅಲ್ಪಸಂಖ್ಯಾತ ವಿರೋಧಿಯಲ್ಲವೆಂದು ಸಾಬೀತು ಪಡಿಸುವ ಪ್ರಯತ್ನದಂಗವಾಗಿ ಕೇಂದ್ರ ಅಲ್ಪಸಂಖ್ಯಾತವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹರ್ಯಾಣಾದ ಮುಸ್ಲಿಂ ಬಾಹುಳ್ಯ ಪ್ರದೇಶವಾದ ಹಾಗೂ ಇತ್ತೀಚೆಗೆ ಮತೀಯ ಹಿಂಸೆಗೆ ತುತ್ತಾಗಿದ್ದಮೇವತ್ ಗೆ ಕಳೆದ ವಾರ‘ಪ್ರಗತಿ ಪಂಚಾಯತ್’ ಭಾಗವಾಗಿ ಭೇಟಿ ನೀಡಿದ್ದರು.

ಈ ಸಂದರ್ಭ100 ಹಾಸಿಗೆಗಳ ಹುಡುಗಿಯರ ಹಾಸ್ಟೆಲ್ ಒಂದನ್ನು ಉದ್ಘಾಟಿಸಿ, ಹಿರಿಯ ಮಾಧ್ಯಮಿಕ ಶಾಲೆಯೊಂದಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ನಖ್ವಿ, ಅಲ್ಪಸಂಖ್ಯಾತರ ಅಭಿವೃದ್ಧಿ ತಮ್ಮ ಸರಕಾರದ ‘ರಾಜಧರ್ಮ’ ಎಂದು ಹೇಳಿದರು.

‘‘ಬಡತನ ಅಲ್ಪಸಂಖ್ಯಾತರಿಗೆದುರಾಗಿರುವ ಅತಿ ದೊಡ್ಡ ಸವಾಲಾಗಿದೆ ಎಂದು ಹೇಳಿದ ನಖ್ವಿಶೇ 75 ರಷ್ಟು ಮುಸ್ಲಿಮರು ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದಾರೆ ಹಾಗೂ ಜಾತಿ, ಧರ್ಮ ಹಾಗೂಪ್ರಾಂತ್ಯದ ಆಧಾರದಲ್ಲಿ ತಾರತಮ್ಯ ನೀತಿ ಭಾರತದಲ್ಲಿ ಇನ್ನೂ ಜೀವಂತವಾಗಿದೆ, ಎಂದೂ ಒಪ್ಪಿಕೊಂಡರು.

ಸಚಿವರೊಬ್ಬರು ಈ ವಾಸ್ತವವನ್ನು ಒಪ್ಪಿಕೊಂಡಿರುವಾಗ ಈ ಬಗ್ಗೆ ಸ್ವಲ್ಪ ಅವಲೋಕನ ಮಾಡುವುದು ಕೂಡ ಅವಶ್ಯವಾಗಿದೆ. ಇಲ್ಲಿವೆ ಕೆಲವು ಮಾಹಿತಿಗಳು :

►ಆಗಸ್ಟ್ 2015 ರಲ್ಲಿ ಜರುಗಿದ ದ್ವೈವಾರ್ಷಿಕಮೂಲ ಸಾಕ್ಷರತೆಪರಿಶೀಲನಾ ಪರೀಕ್ಷೆಗೆ ಹಾಜರಾದ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ - 52,93,339.

►ಈ ಒಟ್ಟು ವಿದ್ಯಾರ್ಥಿಗಳಲ್ಲಿಕೇವಲ 36,84,253 ಮಂದಿ ಯಾ ಶೇ 69 ಮಂದಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

►ಸದ್ಯದಲ್ಲಿಯೇ ಚುನಾವಣೆ ನಡೆಯಲಿರುವ ಪಂಜಾಬ್ ನಲ್ಲಿಕೇವಲ ಶೇ 49 ಮಂದಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

►ಭಾರತದ ಮುಸ್ಲಿಮರ ಸಾಕ್ಷರತಾ ಪ್ರಮಾಣ - 59.1 %

►ರಾಷ್ಟ್ರೀಯ ಸಾಕ್ಷರತಾ ಪ್ರಮಾಣ - 64.8 %

►6 ರಿಂದ 14 ಹರೆಯದಮಕ್ಕಳಲ್ಲಿ ಪ್ರತಿ ನಾಲ್ಕು ಮಂದಿ ಮುಸ್ಲಿಂ ವಿದ್ಯಾರ್ಥಿಗಳಲ್ಲಿಒಬ್ಬರು ಶಾಲೆಗೆ ಹೋಗಿಯೇ ಇಲ್ಲ ಯಾ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದಾರೆ.

►ತಮ್ಮ ಮಕ್ಕಳನ್ನುಆಧುನಿಕ ಯಾ ಮುಖ್ಯವಾಹಿನಿ ಶಿಕ್ಷಣಅಥವಾ ಅವರನ್ನು ಸರಕಾರಿಗೆ ಶಾಲೆಗೆ ಸೇರಿಸುವುದಕ್ಕೆ ಮುಸ್ಲಿಂ ಹೆತ್ತವರು ವಿರೋಧಿಯಲ್ಲ. ಅವರು ಮದರಸಾಗಳಿಗೇ ತಮ್ಮ ಮಕ್ಕಳನ್ನು ಕಳುಹಿಸಬೇಕೆಂಬ ಹಠ ಹೊಂದಿಲ್ಲ. ಆದರೆ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿಪ್ರಾಥಮಿಕ ಹಂತಕ್ಕಿಂತ ಮೇಲಿನ ಹಂತದಶಾಲೆಗಳು ಬಹಳಷ್ಟು ಕಡಿಮೆ. ಹೆಣ್ಣು ಮಕ್ಕಳ ಶಾಲೆಯಂತೂ ಇನ್ನೂ ಕಡಿಮೆ,’’ ಎಂದು ಸರಕಾರ ಲೋಕಸಭೆ ಮುಂದೆ 2016 ಮೇ ತಿಂಗಳಲ್ಲಿ ಮಾಹಿತಿ ನೀಡಿತ್ತು.

►ರಸ್ತೆ ಬದಿ ವ್ಯಾಪಾರ ಮಾಡಿ ತಮ್ಮ ಹೊಟ್ಟೆ ಹೊರೆಯುವವರಲ್ಲಿ12 % ಮಂದಿ ಮುಸ್ಲಿಂ ಪುರುಷರಾಗಿದ್ದಾರೆ.

►ಈ ನಿಟ್ಟಿನಲ್ಲಿ ರಾಷ್ಟ್ರೀಯ ಸರಾಸರಿ 8 %

►‘‘ಸ್ವ ಉದ್ಯೋಗ (ಅಸಂಘಟಿತವಲಯದಲ್ಲಿ) ಮುಸ್ಲಿಂಸಮುದಾಯದ ಆದಾಯದ ಮುಖ್ಯ ಮೂಲವಾಗಿದೆ,’’ಎಂದು ಸರಕಾರ ಹೇಳುತ್ತದೆ.

►ಮುಸ್ಲಿಮರು ಪ್ರಮುಖವಾಗಿ ಉತ್ಪಾದನಾ ರಂಗ ( ಟೆಕ್ಸ್ ಟೈಲ್, ತಂಬಾಕು) ದಲ್ಲಿ ಸಕ್ರಿಯವಾಗಿದ್ದು ಹಾಗೂ ಹೆಚ್ಚಾಗಿ ಮಾರಾಟ ಸಂಬಂಧಿತ ಕೆಲಸಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ. ಇದರಿಂದ ಅವರಿಗೆ ಉದ್ಯೋಗ ಭದ್ರತೆಯ ಕೊರತೆಯೂ ಇದೆ.

►ಇಂಡಿಯಾಸ್ಪೆಂಡ್ ಪ್ರಕಾರ ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರಕಾರ ಮದರಸಾಗಳ ಆಧುನೀಕರಣಕ್ಕೆ ರೂ 1,000 ಕೋಟಿ ವಿನಿಯೋಗಿಸಿದೆ.

►ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮುಸ್ಲಿಮರ ಸಬಲೀಕರಣಕ್ಕಾಗಿ ಸುಮಾರು 24 ಯೋಜನೆಗಳನ್ನು ಜಾರಿಗೊಳಿಸಿದೆ.

►ಆದರೆಉಪಯೋಗವಾಗದ ಸವಲತ್ತುಗಳುಹಾಗೂ ಯೋಜನೆಗಳಲ್ಲಿ ಭಾಗವಹಿಸಲು ಮನಸ್ಸಿಲ್ಲದೇ ಇರುವುದು ಅಲ್ಪಸಂಖ್ಯಾತರ ಹಾಗೂ ಆದಿವಾಸಿಗಳ ಅಭಿವೃದ್ಧಿಗೆ ತೊಡಕಾಗಿದೆ.

►ಇಂಡಿಯಾಸ್ಪೆಂಡ್ ಮಾಹಿತಿ ಹಕ್ಕು ಕಾಯಿದೆ ಮೂಲಕ ಪಡಕೊಂಡ ವಿವರಗಳ ಪ್ರಕಾರ ಕಳೆದ 35 ವರ್ಷಗಳಲ್ಲಿ ದಲಿತರು ಹಾಗೂ ಆದಿವಾಸಿಗಳ ಅಭಿವೃದ್ಧಿಗೆಂದು ಮೀಸಲಾಗಿದ್ದ 28 ಲಕ್ಷ ಕೋಟಿ ಹಣ ಉಪಯೋಗವಾಗಿಲ್ಲ.

ಪರಿಸ್ಥಿತಿಯನ್ನು ಬದಲಾಯಿಸಲು ನಖ್ವಿ ಅವರು ಸಾಕಷ್ಟು ಪ್ರಯತ್ನ ಪಡಬೇಕಿದೆಯೆಂಬುದು ಮೇಲಿನಂಶಗಳಿಂದ ಸ್ಪಷ್ಟವಾಗುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X