‘ಚಲೋ ಉಡುಪಿ’: ಉದ್ಘಾಟನೆ ಮುನ್ನ...

ಬೆಂಗಳೂರು, ಅ.4: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ನೇತೃತ್ವದಲ್ಲಿ ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಘೋಷಣೆಯ ‘ಚಲೋ ಉಡುಪಿ’ ಜಾಥಾಕ್ಕೆ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಇಂದು ಮಧ್ಯಾಹ್ನ ಚಾಲನೆ ದೊರೆಯಲಿದೆ. ಅದಕ್ಕೂ ಮೊದಲು ಎಸ್.ಮಂಜುನಾಥ್ ರಚನೆಯ ಶಶಿಧರ್ ಬಾರಿಘಾಟ್ ನಿರ್ದೇಶಿಸಿರುವ ‘ಫ್ರಿಡ್ಜ್‌ನಲ್ಲಿ ಏನಿದೆ?’ ನಾಟಕವು ಸ್ವಾತಂತ್ರ ಉದ್ಯಾನವನದಲ್ಲಿ ಪ್ರದರ್ಶಿಸಲ್ಪಟ್ಟಿತು. ಬೆಂಗಳೂರು ಸಮುದಾಯ ತಂಡ ಅಮೋಘವಾಗಿ ಮನಮುಟ್ಟುವಂತೆ ಅಭಿನಯಿಸಿದರು. ‘‘ಸಹಸ್ರಾರು ಹೆಜ್ಜೆಗಳೆಲ್ಲಾ... ಚಲೋ... ಚಲೋ... ಚಲೋ... ಉಡುಪಿ ಕಡೆಗೆ ಚಲೋ ...’’ ಹಾಡು ಗಮನಸೆಳೆದವು.
ಮಂಡ್ಯದ ಮಹಿಳಾ ಮುನ್ನಡೆ ತಂಡದ ಯುವತಿಯರು ಅದ್ಭುತವಾಗಿ ದಲಿತ ದಮನಿತರ ವಾದ್ಯ ಎಂದೇ ಪ್ರಸಿದ್ದವಾದ ನಗಾರಿ ಬಾರಿಸುವ ಮೂಲಕ ಸ್ವಾಭಿಮಾನದ ಕಿಚ್ಚನ್ನು ಹೊತ್ತಿಸಿದರು.
Next Story





