ಮಂಜನಾಡಿ: ಎಸ್ಸೆಸೆಫ್ ವತಿಯಿಂದ ರಕ್ತದಾನ ಶಿಬಿರ

ಕೊಣಾಜೆ, ಅ.4: ಎಸ್ಸೆಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಎಸ್ಸೆಸೆಫ್ ಮಂಜನಾಡಿ ಹಾಗೂ ಮುಡಿಪು ಸೆಕ್ಟರ್ ಹಾಗೂ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಮಂಜನಾಡಿಯ ಅಲ್‌ಮದೀನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮವನ್ನು ಎಸ್ಸೆಸೆಫ್ ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಫಾರೂಕ್ ಸಖಾಫಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಕ್ತದಾನದಂತಹ ಶಿಬಿರಗಳು ಸಮಾಜದಲ್ಲಿ ಹೆಚ್ಚೆಚ್ಚು ನಡೆಯಬೇಕು. ಇದರಿಂದ ರಕ್ತದಾನದ ಮಹತ್ವವನ್ನು ಪ್ರತಿಯೊಬ್ಬರಿಗೂ ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಇಫ್ತಿಕಾರ್, ಕಲ್ಲರ್ಬೆ ಪಟ್ಟೋರಿಯ ಎಸ್‌ವೈಎಸ್ ಬ್ರಾಂಚ್‌ನ ಅಧ್ಯಕ್ಷ ಅಬ್ಬು ಕಲ್ಲರ್ಬೆ, ಸದಸ್ಯರಾದ ಅಬ್ಬು ಹಾಜಿ, ಪುತ್ತು ಉಸ್ತಾದ್, ಮೋನು ಹಾಜಿ, ಇಸ್ಮಾಯೀಲ್ ಕೆ.ಎಸ್., ಇಸ್ಮಾಯೀಲ್ ಮರೆಕಟ್ಟ, ಬಾವು ಕಾಟೋಡಿ, ಸೆಕ್ಟರ್ ಉಪಾಧ್ಯಕ್ಷ ಹಮೀದ್ ಬಂಡಸಾಲೆ, ಸದಸ್ಯರಾದ ತೌಫೀಕ್ ತೌಡುಗೋಳಿ, ಮುಹಮ್ಮದ್ ಕಲ್ಲರ್ಬೆ, ಬಾವು, ಅಬ್ದುಲ್ ರಹಿಮಾನ್, ಸಿರಾಜ್ ಕೆ.ಎಸ್., ಮುಸ್ತಫಾ ಮುಂತಾದವರು ಉಪಸ್ಥಿತರಿದ್ದರು.
ಜಲೀಲ್ ಮೋಂಟುಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸೆಸೆಫ್ ಮಂಜನಾಡಿ ಸೆಕ್ಟರ್‌ನ ಕಾರ್ಯದರ್ಶಿ ಇಬ್ರಾಹೀಂ ಪೋಡಾಲ್ ಸ್ವಾಗತಿಸಿದರು. ಸೆಕ್ಟರ್ ಸದಸ್ಯ ಇಲ್ಯಾಸ್ ಪೊಟ್ಟೊಳಿಕೆ ವಂದಿಸಿದರು.





