ಕೇರಳ: ಐಸಿಸ್ ಪರ ಫೇಸ್‌ಬುಕ್ ಖಾತೆಯಲ್ಲಿ ಮತ್ತೆ ಪೋಸ್ಟ್!

ತಿರುವನಂತಪುರಂ,ಅ.4: ಐಸಿಸ್ ಬೆಂಬಲಿಗರಿಂದ ನಿಯಂತ್ರಿಸಲ್ಪಡುತ್ತಿದೆ ಎಂದು ಎನ್‌ಐಎ ಹೇಳುತ್ತಿರುವ ಫೇಸ್‌ಬುಕ್‌ನಲ್ಲಿ ಮತ್ತೆ ಪೋಸ್ಟ್ ಗಳು ಕಂಡು ಬಂದಿವೆ. ಸಮೀರ್ ಅಲಿ ಎಂಬ ಹೆಸರಿನಲ್ಲಿರುವ ಅಕೌಂಟನ್ನು ಐಸಿಸ್‌ನೊಂದಿಗೆ ಸಂಬಧ ಇರಿಸಿಕೊಂಡಿದ್ದಾನೆಂದು ಬಂಧಿಸಲ್ಪಟ್ಟಿರುವ ಮನ್‌ಶಿದ್ ಈ ಅಕೌಂಟನ್ನು ನಿರ್ವಹಿಸುತ್ತಿದ್ದಾನೆ ಎಂದು ಎನ್‌ಐಎ ವಾದಿಸುತ್ತಿದೆ. ಆದರೆ ಈತನನ್ನು ರವಿವಾರ ಸಂಜೆ ಬಂಧಿಸಲಾಗಿದೆ. ಆನಂತರವೂ ಈ ಅಕೌಂಟಿನಲ್ಲಿ ಕಳೆದನಾಲ್ಕುಗಂಟೆಗಳಲ್ಲಿ ಮೂರು ಪೋಸ್ಟ್‌ಗಳು ಪ್ರತ್ಯಕ್ಷವಾಗಿವೆ ಎಂದು ವರದಿಯಾಗಿದೆ.
ಜಿಹಾದಿನಲ್ಲಿ ವ್ಯಕ್ತಿಗಳು ಕೊಲ್ಲಲ್ಪಟ್ಟರೂ ಜಿಹಾದ್ ಇಲ್ಲವಾಗುವುದಿಲ್ಲ. ಜನರು ಕೊಲ್ಲಲ್ಪಡಬಹುದು. ಗಾಯಗೊಳ್ಳಬಹುದು. ಜೈಲಿನೊಳಗಾಗಬಹುದು. ಆದರೂ ಕೂಡಾ ಜಿಹಾದ್ ಮುಂದುವರಿಯುತ್ತದೆ. ಜಿಹಾದ್ ಬದಲಾವಣೆಯಿಲ್ಲದೆ ಮುಂದುವರಿಯುತ್ತದೆ. ಈ ರೀತಿ ಪೋಸ್ಟ್‌ನಲ್ಲಿ ಬರೆಯಲಾಗಿದೆ ಎಂದು ವರದಿತಿಳಿಸಿದೆ.
Next Story





