ಮನೆಗೆ ನುಗ್ಗಿ ನಗ ನಗದು ಕಳವು

ಮೂಡಿಗೆರೆ, ಅ.4: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ನಗದು, ಚಿನ್ನಾಭರಣಗಳನ್ನು ಕಳವುಗೈದಿರುವ ಘಟನೆ ಸಮೀಪದ ಗಂಗನಮಕ್ಕಿ ಎಂಬಲ್ಲಿ ನಡೆದಿದೆ.
ಗಂಗನಮಕ್ಕಿ ಬಡಾವಣೆಯ ಯಾದ್‌ಗಾರ್ ಹೊಟೇಲ್ ಮಾಲಕ ಹನೀಫ್ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ.
ಮನೆ ಮಂದಿ ಉಜಿರೆಯಲ್ಲಿ ನಡೆಯಲಿದ್ದ ಮದುವೆ ಸಮಾರಂಭವೊಂದಕ್ಕೆ ತೆರಳಿದ್ದರು. ಅ.2 ರಂದು ರಾತ್ರಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಮನೆಯ ಹಿಂಭಾಗದ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು ಕಪಾಟುಗಳನ್ನು ಮುರಿದು ಒಂದೂವರೆ ಲಕ್ಷ ರೂ. ನಗದು, 48 ಗ್ರಾಂ ಚಿನ್ನದ ಆಭರಣಗಳು ಹಾಗೂ 40 ಸಾವಿರ ರೂ. ವೌಲ್ಯದ ವಿದೇಶಿ ವಾಚು ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಜಗದೀಶ್, ಪಿಎಸ್ಸೈ ಗವಿರಾಜ್ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





