Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಉಡುಪಿ ಚಲೋ: ಪ್ರೊ. ರವಿವರ್ಮಕುಮಾರ್ ಅವರು...

ಉಡುಪಿ ಚಲೋ: ಪ್ರೊ. ರವಿವರ್ಮಕುಮಾರ್ ಅವರು ಉದ್ಘಾಟನಾ ಭಾಷಣದಲ್ಲಿ ಹೇಳಿದ್ದು..

ವಾರ್ತಾಭಾರತಿವಾರ್ತಾಭಾರತಿ4 Oct 2016 11:11 PM IST
share

2011ರ ಜನಗಣತಿ ನಮಗೆ ಮುಖ್ಯ ಮೂರು ಅಂಶಗಳನ್ನು ತಿಳಿಸುತ್ತದೆ. ಮೊದಲನೆಯದು ಉದ್ಯೋಗ ನಗಣ್ಯವಾಗಿದೆ, ವಿದ್ಯೆ ನಗಣ್ಯವಾಗಿದೆ, ಆರೋಗ್ಯ ನಗಣ್ಯವಾಗಿದೆ. ಎರಡನೇಯದಾಗಿ ಭಾರತದಲ್ಲಿ ಇದುವರೆಗೂ ಕಾರ್ಮಿಕರಲ್ಲಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಮೊದಲ ಬಾರಿಗೆ 2011 ರ ಜನಗಣತಿಯ ಪ್ರಕಾರ ರೈತರು ಎರಡನೇ ಸ್ಥಾನಕ್ಕೆ ಇಳಿದಿದ್ದು ಮೊದಲನೇಯ ಸ್ಥಾನವನ್ನು ಇಂದು ಜಮೀನು ಇಲ್ಲದ ಕೃಷಿ ಕಾರ್ಮಿಕರೇ ಪಡೆದಿದ್ದಾರೆ. ಇದು ಬಹಳ ಮುಖ್ಯವಾದ ವಿಷಯ. ಮೂರನೇಯದು ಅಂಶ ಸಂಘಟಿತ ಕಾರ್ಮಿಕರ ಸಂಖ್ಯೆ ಕೇವಲ ಶೇಕಡ 6 ಇದ್ದರೆ ಅಸಂಘಟಿತ ಕಾರ್ಮಿಕರ ಸಂಖ್ಯೆ ಶೇಕಡ 94 ಇದೆ. ಅಂದರೆ ಇವರಿಗೆ ಉದ್ಯೋಗದ ಖಾತ್ರಿ ಇಲ್ಲ. ಯಾವುದೇ ಪೆನ್ಷನ್ ಇಲ್ಲ, ಪಿಎಫ್ ಇಲ್ಲ, ಇಎಸ್‌ಐ ಇಲ್ಲದೇ ಬದುಕುತ್ತಿದ್ದಾರೆ. ಈ ಅಸಂಘಟಿತ ಕಾರ್ಮಿಕರಲ್ಲಿ ಅಥವಾ ಕೃಷಿ ಕಾರ್ಮಿಕರಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಇರುವವರು ದಲಿತರೆ ಹೆಚ್ಚಿದ್ದಾರೆ. ಅಂತಹ ದಲಿತರ ಮೇಲೆ ಕೇಸರಿ ಪಕ್ಷ ಕೇಂದ್ರದ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ದೌರ್ಜನ್ಯಗಳ ಸಂಖ್ಯೆ ದುಪ್ಪಟ್ಟು ಆಗುತ್ತಿದೆ. ದೌರ್ಜನ್ಯವೆಸಗುವವರ ಮೇಲಿನ ಪ್ರಕರಣಗಳು ಕಮ್ಮಿಯಾಗುತ್ತಿದೆ, ಅದರಲ್ಲಿ ಶಿಕ್ಷೆಯಾಗುವುದು ಇನ್ನೂ ಕಮ್ಮಿಯಾಗುತ್ತಿದೆ.

ಉದಾಹರಣೆಗೆ ರಾಜಸ್ಥಾನದಲ್ಲಿ ರಾಜ್ಯಸರ್ಕಾರದ ಕೈಯಲ್ಲಿ ಪೋಲೀಸ್ ಇಲಾಖೆಯಿರುವುದು. ಕೇಂದ್ರ ಸರ್ಕಾರದಲ್ಲಿಯೂ ಕೇಸರಿ, ರಾಜ್ಯ ಸರ್ಕಾರದಲ್ಲಿಯೂ ಕೇಸರಿ ಇರುವಂತಹ ರಾಜಸ್ಥಾನದಲ್ಲಿ ದಲಿತರ ಸಂಖ್ಯೆ ಕೇವಲ ಶೇ.6 ಮಾತ್ರ. ಆದರೆ ಈ ಶೇ.6 ಜನಸಂಖ್ಯೆಯ ಮೇಲೆ ನಡೆದಿರುವಂತಹ ದೌರ್ಜನ್ಯ ಎಷ್ಟಪ್ಪ ಇದೆ ಎಂದರೆ ಈ ದೇಶದ ಐದನೇಯ ಒಂದು ಭಾಗ ಅಂದರೆ ಸುಮಾರು ಶೇ. 17-18% ಇದೆ. ಅಂದ್ರೆ ಕೇಸರಿಯ ಕೈಗೆ ಚುಕ್ಕಾಣಿ ಕೊಟ್ರೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತದೆ. ಯಾವ ದಲಿತರನ್ನು ಕೊಂದಿದ್ದಾರೋ ಅಂತಹ ಆರೋಪಿಗಳ ಮೇಲೆ ಮೊಕದ್ದಮೆ ಹೂಡಿ ಶಿಕ್ಷಿಸಬೇಕಾದ ಸರ್ಕಾರಗಳು ತಾವೇ ಅವರ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆದುಕೊಂಡು ಅವರ ಜೊತೆ ಕೈಜೋಡಿಸಿ ಅವರಿಗೆ ಕುಮ್ಮಕ್ಕು ನೀಡಿ ಹೆಚ್ಚಿನ ದೌರ್ಜನ್ಯ ನಡೆಸುತ್ತಿವೆ.

ಈ ಹಿನ್ನೆಲೆಯಲ್ಲಿ ಇದುವರೆಗೆ ಬಂದ ಮಾಹಿತಿಯ ಪ್ರಕಾರ ಪ್ರತಿ 18 ನಿಮಿಷಕ್ಕೆ ಒಂದು ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆ. ಪ್ರತಿ ಒಂದು ಗಂಟೆಗೆ ಒಂದು ಅತ್ಯಾಚಾರ ನಡೆಯುತ್ತಿದೆ. ಅದರಲ್ಲೂ ಆದಿವಾಸಿಗಳ ಮೇಲೆ ನಡೆಯುತ್ತಿರುವಂತಹ ದೌರ್ಜನ್ಯಗಳಂತೂ ಇದರ ಮೂರು ಪಟ್ಟು ಜಾಸ್ತಿಯಾಗಿವೆ. ಇದೆಲ್ಲಾ ಏನನ್ನ ತೋರಿಸುತ್ತದೆ ಎಂದರೆ ಭಾರತದ ಸಂವಿಧಾನದಲ್ಲಿ ಕೊಟ್ಟಿರುವ ರಕ್ಷಣೆ ದಲಿತರ ಪರವಾಗಿ ಆದಿವಾಸಿಗಳ ಪರವಾಗಿ ಕ್ಷೀಣಿಸುತ್ತಾ ಹೋಗುತ್ತಿದೆ. ಅದಕ್ಕೆ ಇಷ್ಟೇ ಸಾಲದೆಂಬಂತೆ ಇತ್ತೀಚೆಗೆ ಆಹಾರದ ವಿಚಾರದಲ್ಲಿ ಅಲ್ಪಸಂಖ್ಯಾತರ ಮೇಲೆ ಕೂಡ ದೌರ್ಜನ್ಯ ನಡೆಯುತ್ತಿದ್ದು ಬಹಳ ದೊಡ್ಡ ಸಂಖ್ಯೆಯಲ್ಲಿ ಹತ್ಯಾಕಾಂಡಗಳು ಗುಜರಾತ್‌ನಂತೆ ಕರ್ನಾಟಕದಲ್ಲಿಯೂ ಅಂತಹ ಘಟನೆಗಳು ನಡೆಯುತ್ತಿವೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ಜಾತಿಯ ಚೌಕಟ್ಟಿನಲ್ಲಿ ಬದುಕುವ ಹಕ್ಕಿನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ. ಅಂತರ್ಜಾತಿ ಮದುವೆಯಾದ ಗಂಡು ಹೆಣ್ಣುಗಳಿಗೆ ಇನ್ನಿಲ್ಲದ ಹಿಂಸೆಯನ್ನು ಕೊಡುತ್ತಿದ್ದಾರೆ. ಮಾರ್ಯಾದೆಹೀನ ಹತ್ಯೆ ಹೆಸರಿನಲ್ಲಿ ತಂದೆ ತಾಯಿಗಳೆ ಮಕ್ಕಳನ್ನು ಕೊಲೆ ಮಾಡುವಂತಹ ದುರಂತವನ್ನು ನಾವು ನೋಡ್ತಾ ಇದ್ದೇವೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಾನು ಈ ವೇದಿಕೆಯಿಂದ ಈ ಒಂದು ಪ್ರಕಟ ಮಾಡಲಿಕ್ಕೆ ಇಷ್ಟಪಡುವುದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡ ಒಂದು ಕಾನೂನು ಸಮಿತಿಯನ್ನು ರಚಿಸಿ ರಾಜ್ಯಮಟ್ಟದಲ್ಲಿ ಒಂದು ಕಾನೂನು ಸಮಿತಿಯನ್ನು ರಚಿಸಿ ಶ್ರೀಮಾನ್ ಎ.ಕೆ ಸುಬ್ಬಯ್ಯನವರು ಅದರ ನೇತೃತ್ವವನ್ನು ವಹಿಸಲಿಕ್ಕೆ ಮುಂದೆ ಬಂದಿದ್ದಾರೆ ಇನ್ನೂ ಕೆಲವರು ಇದರ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ನೇತೃತ್ವದಲ್ಲಿ ಉಚಿತ ಕಾನೂನು ಸಮಿತಿಯನ್ನು ನಾವು ಮಾಡಿ ಉಚಿತ ಕಾನೂನು ಸೇವೆಯನ್ನು ಈ ಸಮಿತಿಯ ಮೂಲಕ ಕೊಡಲಾಗುತ್ತದೆ. ಎಲ್ಲಾ ದೌರ್ಜನ್ಯಕ್ಕೆ ಒಳಗಾಂದಂತಹ ಅಲ್ಪಸಂಖ್ಯಾತರಿಗೆ ಮತ್ತು ದೌರ್ಜನ್ಯಕ್ಕೆ ಒಳಗಾಂದಂತಹ ಅಂತರ್ಜಾತಿ ಅಥವಾ ಅಂತರ್‌ಧರ್ಮೀಯ ಮದುವೆಗಳನ್ನು ಮಾಡಿಕೊಡುವಂತಹ ಕೆಲಸ ಆಗಬೇಕಿದೆ. ಬರಿ ಕಾನೂನು ಸೇವೆ ಕೊಡುವುದಷ್ಟೆ ಅಲ್ಲ ಅವರಿಗೆ ಯಾವ ರೀತಿಯ ದೌರ್ಜನ್ಯವು ಆಗದೇ ಇರವು ಹಾಗೆ ಏಕೆಂದರೆ ವಿವಾಹ ಆಗುವ ಹಕ್ಕು, ಬದುಕುವ ಹಕ್ಕು ಈಗಾಗಲೇ ಸಂವಿಧಾನದಲ್ಲಿ ಸಿಕ್ಕಿದೆ. ಇದೇ ರೀತಿ ಕುಡಿಯುವ ನೀರು ಮತ್ತು ಆಹಾರ ಮೂಲಭೂತ ಸ್ವಾತಂತ್ರ್ಯಗಳಾಗಿವೆ.

ಈ ಹಿನ್ನೆಲೆಯಲ್ಲಿ ನಾವು ಇವತ್ತು ಈ ಒಂದು ಉಡುಪಿ ಚಲೋ ಘೋಷಿಸಿರು ಸನ್ನಿವೇಶದಲ್ಲಿ ಪ್ರಮುಖವಾಗಿ ಆಹಾರದ ಸ್ವಾತಂತ್ರ್ಯ, ವಿವಾಹದ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ ಇವುಗಳ ಭೂಮಿಕೆಯ ಮೇಲೆ ಹೆಚ್ಚು ಹಕ್ಕೊತ್ತಾಯಗಳನ್ನಿಟ್ಟುಕೊಂಡು ಕೃಷಿ ಇಲ್ಲದ ಕಾರ್ಮಿಕರಿಗೆ, ದಲಿತ ಕಾರ್ಮಿಕರಿಗೆ ಜಮೀನು ಕೊಡಬೇಕು ಎನ್ನುವ ಪ್ರಮುಖವಾದ ಒತ್ತಾಯದ ಮೇಲೆ ಈ ಒಂದು ಉಡುಪಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಒಂದು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿಕ್ಕೆ ಕೊಟ್ಟಿರುವಂತಹ ಈ ಗೌರವಕ್ಕೆ ನಾನು ಅಭಾರಿಯಾಗಿದ್ದೇನೆ. ಈ ಒಂದು ಉಡುಪಿ ಚಲೋ ಅದ್ಭುತ ಯಶಸ್ಸನ್ನು ಕಾಣಲಿ, ದಾರಿಯುದ್ದಕ್ಕೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಇದಕ್ಕೆ ಬೆಂಬಲ ಸಿಗಲಿ ಎಲ್ಲಕಿಂತಲೂ ಮುಖ್ಯವಾಗಿ ಇಂತಹ ದೌರ್ಜನ್ಯಗಳು ನಡೆದಂತಹ ಜಾಗಗಳಿಗೆ ಹೋದಾಗ ಅಲ್ಲಿ ನೊಂದವರಿಗೆ ನಮ್ಮ ಸಾಂತ್ವಾನ ಮತ್ತು ನಮ್ಮ ಸಾಲಿಡಾರಿಟಿ ಸಿಗಲಿ ಅಂತ ಆಶಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ ಧನ್ಯವಾದಗಳು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X