ಚೀನಾ ಓಪನ್: ನಡಾಲ್-ಮರ್ರೆ ದ್ವಿತೀಯ ಸುತ್ತಿಗೆ ಪ್ರವೇಶ
ಬೀಜಿಂಗ್, ಅಂ.4: ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿರುವ ರಫೆಲ್ ನಡಾಲ್ ಹಾಗೂ ಆ್ಯಂಡಿ ಮರ್ರೆ ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ದ್ವಿತೀಯ ಸುತ್ತಿಗೆ ತಲುಪಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದಯದಲ್ಲಿ ಪಾಯೊಲೊ ಲೊರೆಂಝಿ ವಿರುದ್ಧ 6-1, 6-1 ನೇರ ಸೆಟ್‌ಗಳಿಂದ ಜಯ ಸಾಧಿಸಿರುವ ನಡಾಲ್ ಎರಡನೆ ಸುತ್ತಿಗೆ ತಲುಪಿದರು.
2005ರ ಚೀನಾ ಓಪನ್ ಚಾಂಪಿಯನ್ ನಡಾಲ್ ಒಂದು ಗಂಟೆಯೊಳಗೆ ಎರಡೂ ಸೆಟ್‌ನ್ನು ವಶಪಡಿಸಿಕೊಂಡರು.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಆ್ಯಂಡ್ರಿಯಸ್ ಸೆಪ್ಪಿ ಅವರನ್ನು 6-2, 7-5 ಸೆಟ್‌ಗಳ ಅಂತರದಿಂದ ಮಣಿಸಿದರು.
ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಟೂರ್ನಿಯಿಂದ ಹಿಂದೆ ಸರಿದ ಕಾರಣ ಮರ್ರೆ ನಂ.1 ಶ್ರೇಯಾಂಕ ಪಡೆದಿದ್ದರು. ಮೂರನೆ ಬಾರಿ ಚೀನಾ ಓಪನ್‌ನಲ್ಲಿ ಆಡುತ್ತಿರುವ ಮರ್ರೆ ತನ್ನ ಚೊಚ್ಚಲ ಪ್ರವೇಶದಲ್ಲಿ ಕ್ವಾರ್ಟರ ಫೈನಲ್ ತಲುಪಿದ್ದರು. ಹಾಗೂ ಎರಡನೆ ಪ್ರಯತ್ನದಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಪೆಟ್ರಾ ಕ್ವಿಟೋವಾ ಚೀನಾದ ವಾಂಗ್ ಯಾಫನ್‌ರನ್ನು 6-4, 6-1 ಸೆಟ್‌ಗಳಿಂದ ಮಣಿಸಿ ಮೂರನೆ ಸುತ್ತು ಪ್ರವೇಶಿಸಿದ್ದಾರೆ. ಕಳೆದ ಾರ ವುಹಾನ್ ಓಪನ್ ಜಯಿಸಿದ್ದ ಝೆಕ್ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ಹಾಲಿ ಚೀನಾ ಓಪನ್ ಚಾಂಪಿಯನ್ ಗಾರ್ಬೈನ್ ಮುಗುರುಝರನ್ನು ಎದುರಿಸಲಿದ್ದಾರೆ.







