ತನ್ನನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಸಿ ಎನ್ ಎನ್, ಬಿಬಿಸಿ ಬಗ್ಗೆ ಅರ್ನಬ್ ಹೇಳಿದ್ದೇನು ?

ಹೊಸದಿಲ್ಲಿ,ಅ.5 :ಭಾರತೀಯ ಸೇನೆಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆದಿದೆಯೇ ಎಂಬುದನ್ನು ಸಿಎನ್‌ಎನ್ ಹಾಗೂ ಬಿಬಿಸಿ ನ್ಯೂಸ್ ಚಾನಲ್ಲುಗಳು ಪ್ರಶ್ನಿಸುತ್ತಿವೆಯೆಂದು ಟೈಮ್ಸ್ ನೌ ಚಾನಲ್ ನ ನ್ಯೂಸ್ ಅವರ್ಚರ್ಚಾ ಕಾರ್ಯಕ್ರಮದಲ್ಲಿ ಜೆಡಿ(ಯು) ವಕ್ತಾರ ಅಜಯ್ ಅಲೋಕ್ಉಲ್ಲೇಖಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆ್ಯಂಕರ್ ಅರ್ನಬ್ ಗೋಸ್ವಾಮಿ ಸಿಟ್ಟುಗೊಂಡು ‘‘ಹೂ ದಿ ಹೆಲ್ಲ್ ಈಸ್ ಸಿಎನ್‌ಎನ್ ಎಂಡ್ ಬಿಬಿಸಿ ? ಭಾರತೀಯ ಸೇನೆ ಅವರಿಗೆ ಬಾಧ್ಯಸ್ಥವೇನು ? ಇದಕ್ಕಿಂತ ಹೆಚ್ಚು ಮಾಷೆಯ ಸಂಗತಿ ನಾನು ತಿಳಿದಿಲ್ಲ,’’ ಎಂದು ಪ್ರತಿಕ್ರಿಯಿಸಿದ ಘಟನೆ ನಡೆದಿದೆ.
ಬಿಬಿಸಿ ಮತ್ತು ವಾಷಿಂಗ್ಟನ್ ಪೋಸ್ಟ್ ನಂತಹ ಸುದ್ದಿ ಸಂಸ್ಥೆಗಳನ್ನು ಪಾಕ್ ಪ್ರಚಾರಕರ್ತರೆಂದು ಪರಿಗಣಿಸಬಹುದೇ ಎಂದು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ಹಾಗೂ ಲೇಖಕ ಸಬಾ ನಖ್ವಿ ಪ್ರಶ್ನಿಸಿದಾಗ ಅರ್ನಬ್ ಮತ್ತೊಮ್ಮೆ ಸಿಟ್ಟುಗೊಂಡಿದ್ದರಲ್ಲದೆ, ಸಿಎನ್ ಎನ್ಹಾಗೂ ಬಿಬಿಸಿ ಎದುರು ಸಬಾ ರಂಥವರಿಗೆ ಕೀಳರಿಮೆಯ ಭಾವನೆಯಿದ್ದರೂ ತನಗಿಲ್ಲ ಎಂದಿದ್ದರು.
ಸೀಮಿತ ದಾಳಿಯ ಪ್ರದೇಶದಿಂದ ಸಿಎನ್‌ಎನ್ ಮಾಡಿದ ವರದಿಯೊಂದನ್ನು ‘ಬಾಲಿಶ’ ಎಂದು ಬಣ್ಣಿಸಿದಅರ್ನಬ್‌ಆ ವರದಿಯಲ್ಲಿ ಒಂದೇ ಒಂದು ವಾಸ್ತವಾಂಶವಿರಲಿಲ್ಲವೆಂದೂ ಹೇಳಿದ್ದರು.
ಭಾರತವು ಗಡಿಯಾಚೆ ಸೀಮಿತ ದಾಳಿ ನಡೆಸಿದಂದಿನಿಂದ ಅದನ್ನು ಹೊಗಳುವುದರಲ್ಲಿ ಎಳ್ಳಷ್ಟೂ ಹಿಂದೆ ಬಿದ್ದಿಲ್ಲದ ಅರ್ನಬ್ ದಾಳಿಯ ವೀಡಿಯೋ ದಾಖಲೆ ಬಹಿರಂಗ ಪಡಿಸಬೇಕೆಂದು ಹೇಳಿದ ಅರವಿಂದ್ ಕೇಜ್ರಿವಾಲ್ ಸಂಜಯ್ ನಿರುಪಮ್ ಮುಂತಾದವರನ್ನು ಈಗಾಗಲೇ ತರಾಟೆಗೆ ತೆಗೆದುಕೊಂಡಿದ್ದಾರೆ.







