ಸರ್ಜಿಕಲ್ ದಾಳಿ:ಮೋದಿಯಿಂದ ಸಚಿವರಿಗೆ ಎಚ್ಚರಿಕೆ

ಹೊಸದಿಲ್ಲಿ, ಅ.5: ಸರ್ಜಿಕಲ್ ದಾಳಿಯ ಕುರಿತು ಚರ್ಚೆ ವೇಗ ಪಡೆದಿರುವಂತೆಯೇ, ನಿಯಂತ್ರಣ ರೇಖೆಯಿಂದಾಚೆಗಿನ ಭಯೋತ್ಪಾದಕರ ನೆಲೆಗಳ ಮೇಲಿನ ಸೇನಾ ಕಾರ್ಯಾಚರಣೆಯ ಕುರಿತು ಉನ್ಮಾದವನ್ನು ಸೃಷ್ಟಿಸುವ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತನ್ನ ಸಂಪುಟ ಸಹೋದ್ಯೋಗಿಗಳಿಗೆ ಬುಧವಾರ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.
ಸರ್ಜಿಕಲ್ ದಾಳಿಯ ವಿಚಾರವಾಗಿ ಅಧಿಕೃತ ವ್ಯಕ್ತಿಗಳು ಮಾತ್ರ ಮಾತನಾಡಬೇಕು. ಮನಬಂದಂತೆ ಮಾತನಾಡಬಾರದೆಂದು ಅವರು ಸಂಪುಟ ಸಭೆಯಲ್ಲಿ ಸಚಿವರಿಗೆ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಸುಳ್ಳು ಅಭಿಯಾನವನ್ನು ತಡೆಯಲು ಸರಕಾರವು ಸರ್ಜಿಕಲ್ ದಾಳಿಯ ಸಾಕ್ಷವನ್ನು ಬಹಿರಂಗಪಡಿಸಬೇಕೆಂಬ ವಿಪಕ್ಷಗಳ ಆಗ್ರಹದ ಹಿನ್ನೆಲೆಯಲ್ಲಿ ಪ್ರಧಾನಿಯ ಎಚ್ಚರಿಕೆ ಹೊರಟಿದೆ.
ಇದೇ ವೇಳೆ, ಸರ್ಜಿಕಲ್ ದಾಳಿಯ ಬಗ್ಗೆ ರಕ್ಷಣಾ ಸಚಿವಾಲಯದ ಪ್ರತಿನಿಧಿಗಳಿಂದ ವಿವರ ಪಡೆಯಲು ಗುರುವಾರ ನಡೆಯಲಿದ್ದ ರಕ್ಷಣೆಯ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯ ಸಭೆಯನ್ನು ಅ.14ಕ್ಕೆ ಮುಂದೂಡಲಾಗಿದೆ.
Next Story





