ಶಿರ್ವ: ಕಾಪು ವೃತ್ತ ಮಟ್ಟದ ಕ್ರೀಡಾಕೂಟ

ಕಾಪು, ಅ.5: ಉಡುಪಿ ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ವಲಯ ಹಾಗೂ ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ಕಾಪು ವೃತ್ತ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾ ಕೂಟವು ಇತ್ತೀಚೆಗೆ ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಜರಗಿತು.
ಕ್ರೀಡಾಕೂಟವನ್ನು ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ಸುಬ್ಬಯ್ಯ ಹೆಗ್ಡೆ ಉದ್ಘಾಟಿಸಿದರು. ಸಂಘದ ಆಡಳಿತಾಧಿಕಾರಿ ಪ್ರೊ.ಭಾಸ್ಕರ ಶೆಟ್ಟಿ ಧ್ವಜ ವಂದನೆ ಸ್ವೀಕರಿಸಿದರು. ಉಡುಪಿ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿ ಕಾರಿ ಶೇಖರ ಗೌಡ ಸಿ.ಪಾಟೀಲ್ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಫೈಝುಲ್ ಇಸ್ಲಾಂ ಶಾಲೆಯ ಅಧ್ಯಕ್ಷ ಮುಮ್ತಾಝ್ ಅಲಿ, ಆಡಳಿತಾಧಿಕಾರಿ ಬಿ.ಎಂ.ಬೀರಾ ಮೊಯ್ದಿನ್, ಕಾರ್ಯದರ್ಶಿ ವಹೀದ್ ಅಹ್ಮದ್, ಉಪಾಧ್ಯಕ್ಷ ಶಬ್ಬೀ ಅಹ್ಮದ್ ಖಾಝಿ, ಹಿಂದೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಂದರ ಮೇರಾ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಸೀತಾರಾಮ ಶೆಟ್ಟಿ, ತಾಲೂಕು ಸಂಘದ ಸೋಮಪ್ಪ ತಿಂಗಳಾಯ ಉಪಸ್ಥಿತರಿದ್ದರು.
ಫೈಝುಲ್ ಇಸ್ಲಾಂ ಶಾಲೆಯ ಮುಖ್ಯ ಶಿಕ್ಷಕಿ ಫೆಲಿಸಿಟಾಸ್ ಪಿರೇರಾ ಸ್ವಾಗತಿಸಿದರು. ಮಾಜಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಗೀತಾ ಗಣೇಶ್ ವಂದಿಸಿದರು. ರೇವತಿ ಕಾರ್ಯಕ್ರಮ ನಿರೂಪಿಸಿದರು.







