ಬಾಂಗ್ಲಾದೇಶ ದಾಳಿ: ವಿದ್ಯಾರ್ಥಿ ದೋಷಮುಕ್ತ

ಢಾಕಾ, ಅ. 5: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಮೂರು ತಿಂಗಳ ಹಿಂದೆ ನಡೆದ ಭಯೋತ್ಪಾದಕ ದಾಳಿಯ ಓರ್ವ ಆರೋಪಿ, ಕೆನಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ತಾಹ್ಮಿದ್ ಹಸೀಬ್ ಖಾನ್‌ನನ್ನು ಇಲ್ಲಿನ ನ್ಯಾಯಾಲಯವೊಂದು ಬುಧವಾರ ದೋಷಮುಕ್ತಗೊಳಿಸಿದೆ.
ಢಾಕಾದ ಕೆಫೆಯೊಂದರ ಮೇಲೆ ಜುಲೈ ತಿಂಗಳಲ್ಲಿ ದಾಳಿ ನಡೆಸಿದ ಭಯೋತ್ಪಾದಕರು 22 ಮಂದಿಯನ್ನು ಹತ್ಯೆ ಮಾಡಿದ್ದರು. ಅವರ ಪೈಕಿ ಹೆಚ್ಚಿನವರು ವಿದೇಶೀಯರು.
ದಾಳಿಯಾದ ವಾರಗಳ ಬಳಿಕ ತಾಹ್ಮಿದ್‌ನನ್ನು ಓರ್ವ ಆರೋಪಿ ಎಂಬುದಾಗಿ ಪೊಲೀಸರು ಹೆಸರಿಸಿದ್ದರು.
ಆದರೆ, ಆತ ಓರ್ವ ಗ್ರಾಹಕನಾಗಿ ಮಾತ್ರ ಕೆಫೆಯಲ್ಲಿದ್ದ ಹಾಗೂ ಐವರು ಭಯೋತ್ಪಾದಕರೊಂದಿಗೆ ಆತ ಯಾವ ಸಂಬಂಧವನ್ನೂ ಹೊಂದಿರಲಿಲ್ಲ ಎಂಬುದಾಗಿ ಆತನ ಹೆತ್ತವರು ವಾದಿಸಿದ್ದರು.
ಪೊಲೀಸರು ಬಳಿಕ ಆತನ ವಿರುದ್ಧದ ಆರೋಪಗಳನ್ನು ಕೈಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
Next Story





