ಪೊಲೀಸರ ವೇತನ ಹೆಚ್ಚಳ ಸಮರ್ಥನೀಯ
ಮಾನ್ಯರೆ,
ಅಗತ್ಯ ಬಿದ್ದರೆ ದಿನದ 24 ಗಂಟೆಯೂ ಜನ ಸಾಮಾನ್ಯರ ಕಾವಲುಗಾರರಾಗಿ ಸಮಾಜದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು, ಪುಂಡರ ಹಾವಳಿಗಳನ್ನು ತಡೆದು ಇಡೀ ಸಮಾಜದ ಶಾಂತಿ ಕಾಪಾಡುವುದರಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ವದ್ದು.ಆದರೆ ಕರ್ನಾಟಕ ರಾಜ್ಯದ ಪೊಲೀಸರಿಗೆ ನೀಡುತ್ತಿರುವ ವೇತನ ಇತರ ರಾಜ್ಯಗಳ ಪೊಲೀಸರಿಗೆ ಹೋಲಿಸಿದರೆ ಅತೀ ಕಡಿಮೆ. ಇದರ ಪರಿಣಾಮ ಇವರ ಜೀವನ ನಿರ್ವಹಣೆಯೂ ಕಷ್ಟವಾಗಿದೆ. ಜೊತೆಗೆ ಈ ವೃತ್ತಿಯನ್ನು ತ್ಯಜಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದ್ದರಿಂದ ಸರಕಾರ ತುರ್ತಾಗಿ ಪೊಲೀಸರ ವೇತನವನ್ನು ಹೆಚ್ಚಿಸಬೇಕೆಂದಿರುವುದು ಸಂತಸದ ವಿಚಾರ ಮತ್ತು ಅತೀ ಆವಶ್ಯಕವಾಗಿದೆ.
ರಿಯಾಝ್ ಪಾಷ, ಬೆಂಗಳೂರು
Next Story





