ಕಾಸರಗೋಡು: ಅಭಿವೃದ್ಧಿಗೆ ತೊಡಕಾಗಿದೆ ಖಾಲಿ ಹುದ್ದೆ ಸಮಸ್ಯೆ

ಕಾಸರಗೋಡು, ಅ.6: ಕಾಸರಗೋಡು ಜಿಲ್ಲೆಯಲ್ಲಿ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ.ಜಿಲ್ಲಾ ಪಂಚಾಯತ್ ನ ಮುಖ್ಯ ಸಹಾಯಕ ಇಂಜಿನಿಯರ್ ರಿಂದ ಹಿಡಿದು ಗ್ರಾಮ ಪಂಚಾಯತ್ ಇಂಜಿನಿಯರ್ ತನಕದ 40ರಷ್ಟು ಹುದ್ದೆಗಳು ತೆರವಾಗಿದೆ.
ಮಂಜೇಶ್ವರ, ಕಾಸರಗೋಡು, ಕಾರಡ್ಕ ಬ್ಲಾಕ್ ಪಂಚಾಯತ್ ಗಳಲ್ಲಿ ಸಹಾಯಕ ಇಂಜಿನಿಯರ್ ಗಳಿಲ್ಲದೆ ಹಲವು ತಿಂಗಳುಗಳೇ ಕಳೆದಿವೆ. ಕುಂಬ್ಡಾಜೆ, ಉದುಮ, ತ್ರಿಕ್ಕರಿಪುರ, ವಳಿಯಪರಂಬ, ದೇಲಂಪಾಡಿ, ಈಸ್ಟ್ ಎಳೇರಿ, ಚೆಂಗಳ, ಎಣ್ಮಕಜೆ, ಚೆಮ್ನಾಡ್, ಅಜನೂರು, ಕಾರಡ್ಕ ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಗಳಿಲ್ಲ. ಚೆಮ್ನಾಡ್, ಪುತ್ತಿಗೆ, ಕುತ್ತಿಕೋಲ್, ಬದಿಯಡ್ಕ , ಕುಂಬಳೆ, ಪಳ್ಳಿಕೆರೆ, ಬಳಾಲ್ ಗ್ರಾಮ ಪಂಚಾಯತ್ ನಲ್ಲಿ ಸಹಾಯಕ ಕಾರ್ಯದರ್ಶಿಗಳಿಲ್ಲ.
ಚೆಮ್ನಾಡ್ , ಎಣ್ಮಕಜೆ ಯಲ್ಲಿ ಅಕೌ೦ಟೆಂಟ್ , ಎಣ್ಮಕಜೆ, ಪನತ್ತಡಿ, ಕೋಡೋ ಬೇಳೂರುನಲ್ಲಿ ಹೆಡ್ ಕ್ಲರ್ಕ್, ಬೆಳ್ಳೂರು, ಕಾರಡ್ಕ, ವರ್ಕಾಡಿ, ಪೈವಳಿಕೆ, ದೇಲಂಪಾಡಿ, ಕಿನಾನೂರು - ಕರಿಂದಲ, ವೆಸ್ಟ್ ಎಳೇರಿ ಗ್ರಾಮ ಪಂಚಾಯತ್ ನಲ್ಲಿ ಕ್ಲರ್ಕ್ ಗಳ ಹುದ್ದೆಗಳು ಖಾಲಿಯಾಗಿ ತಿಂಗಳುಗಳೇ ಕಳೆದಿವೆ.
ಬ್ಲಾಕ್ ಪಂಚಾಯತ್ ಗಳಲ್ಲಿ ಕಾಸರಗೋಡು -ಕಾರ್ಯದರ್ಶಿ , ವಿ ಇ ಒ (೨), ಕಾಞ೦ಗಾಡ್ - ಕಾರ್ಯದರ್ಶಿ , ವಿಇಒ, ಮಂಜೇಶ್ವರ - ವಿಇಒ (೩) , ಪರಪ್ಪ - ಕಾರ್ಯದರ್ಶಿ, ವಿ ಇ ಒ ( ೩), ಮಹಿಳಾ ಕಲ್ಯಾಣಕಾರಿ, ಕಾರಡ್ಕ - ವಿ ಇ ಒ ( ೨), ನೀಲೇಶ್ವರ - ಕಾರ್ಯದರ್ಶಿ,ವಿ ಇ ಒ, ಕಾಸರಗೋಡು ನಗರಸಭೆಯಲ್ಲಿ ಕಾರ್ಯದರ್ಶಿ , ಸಹಾಯಕ ಇಂಜಿನಿಯರ್ , ಮೇಲ್ವಿಚಾರಕರು ( ೨) ಯು ಡಿ ಕ್ಲರ್ಕ್ ೪, ಲಾಸ್ಟ್ ಗ್ರೇಡ್ , ಕಾಞ೦ಗಾಡ್ ನಗರಸಭೆಯಲ್ಲಿ ಫಸ್ಟ್ ಗ್ರೇಡ್ ಮೇಲ್ವಿಚಾರಕರು , ಸೆಕೆಂಡ್ ಗ್ರೇಡ್ ಮೇಲ್ವಿಚಾರಕರು , ಎಲ್ ಡಿಸಿ , ಚಾಲಕ ( ಒಂದು ) ಹುದ್ದೆ ಖಾಲಿ ಬಿದ್ದಿದೆ.
ಸರಕಾರಿ ಹುದ್ದೆ ಗಳು ಖಾಲಿ ಬಿದ್ದಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿದೆ. ಸರಕಾರಿ ಸೇವೆಗಳು ಸೂಕ್ತ ಸಮಯಕ್ಕೆ ಲಭಿಸದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಂಡು ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.







