ಕಾಸರಗೋಡು: ಕಟ್ಟಡವನ್ನು ಹತ್ತಿ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಕೇಂದ್ರ ವಿಶ್ವವಿದ್ಯಾನಿಲಯದ ಸಂತ್ರಸ್ತರು

ಕಾಸರಗೋಡು, ಅ.6: ಪೆರಿಯದಲ್ಲಿರುವ ಕೇಂದ್ರ ವಿಶ್ವವಿದ್ಯಾನಿಲಯ ನೂತನ ವಸತಿ ನಿಲಯದ ಕಟ್ಟಡಕ್ಕೆ ಹತ್ತಿದ ಸುಮಾರು 16 ಮಂದಿ ಸ್ಥಳೀಯ ನಿವಾಸಿಗಳು ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಘಟನೆ ಗುರುವಾರ ನಡೆದಿದೆ.
ವಿಶ್ವವಿದ್ಯಾನಿಲಯ ಕಟ್ಟಡಕ್ಕೆಈ ಪರಿಸರದ 16 ಕುಟುಂಬದವರು ಜಮೀನು ಬಿಟ್ಟು ಕೊಟ್ಟಿದ್ದರು. ಅವರಿಗೆ ಬದಲಿ ಸ್ಥಳ, ಸೂಕ್ತ ವ್ಯವಸ್ಥೆ ಹಾಗೂ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಭರವಸೆ ಈಡೇರಿಸಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾನಿರತರು ಜಗ್ಗಲಿಲ್ಲ. ಲಿಖಿತ ಭರವಸೆಯನ್ನು ನೀಡಿದರೆ ಮಾತ್ರ ಕಟ್ಟಡದಿಂದ ಕೆಳಗಿಳಿಯುವುದಾಗಿ ಪ್ರತಿಭಟನಾಕಾರರು ಪಟ್ಟುಹಿಡಿದರು. ಕೊನೆಗೆ ಜಿಲ್ಲಾಧಿಕಾರಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದು, ಕಟ್ಟಡದಿಂದ ಕೆಳಗಿಳಿದರು ಎಂದು ತಿಳಿದುಬಂದಿದೆ.
Next Story





