ತೀವ್ರವಾದಿ ಶಿಬಿರಗಳ ವಿರುದ್ಧ ಪಿಒಕೆ ಯಲ್ಲಿ ಪ್ರತಿಭಟನೆ
.jpg)
ಶ್ರೀನಗರ, ಅಕ್ಟೋಬರ್ 6: ಪಾಕ್ ಅಧೀನ ಕಾಶ್ಮೀರದಲ್ಲಿರುವ ಭಯೋತ್ಪಾದಕರ ಶಿಬಿರಗಳ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆಗಿಳಿದಿದ್ದಾರೆಂದು ವರದಿಯಾಗಿದೆ. ಇಂತಹ ಶಿಬಿರಗಳ ವಿರುದ್ಧ ಪಾಕ್‌ಅಧೀನ ಕಾಶ್ಮೀರದಲ್ಲಿ ವಿವಿಧ ಪ್ರದೇಶಗಳಲ್ಲಿ ಜನರು ಪ್ರತಿಭಟನೆಯೊಂದಿಗೆ ರಂಗಪ್ರವೇಶಿಸಿದ್ದಾರೆ. ಮುಝಾಫರಾಬಾದ್, ಕೋಟ್ಲಿ, ಚಿನಾರಿ, ಮೀರ್‌ಪುರ, ಗಿಲ್‌ಜಿಟ್, ದಯಾಮೆರ್,ನೀಲಂ ಕಣಿವೆ ಮುಂತಾದೆಡೆ ಅಲ್ಲಿನ ನಿವಾಸಿಗಳಿಂದ ಭಾರೀ ಪ್ರತಿಭಟನೆ ಕಾರ್ಯಕ್ರಮಗಳು ಆರಂಭವಾಗಿದೆ.
ಭಾರತ ವಿರುದ್ಧ ನುಸುಳಿ ಯುದ್ಧಕ್ಕೆ ಪಾಕ್ ಗೂಢಚಾರ ಸಂಘಟನೆಯಾದ ಐಎಸ್‌ಐ ಪ್ರಯತ್ನಿಸುತ್ತಿದೆಯೆಂದು ಈ ಪ್ರದೇಶಗಳ ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ. ತಾಲಿಬಾನ್ ಭಯೋತ್ಪಾದಕ ಶಿಬಿರಗಳನ್ನು ನಿಲ್ಲಿಸಲು ಅಧಿಕಾರಿಗಳು ಮುಂದಾಗದಿದ್ದರೆ ನಾವೇ ಮುಂದೆ ನಿಂತು ಆಕೆಲಸವನ್ನು ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಘೋಷಿಸಿದ್ದಾರೆ.
ಪಾಕ್ ಅಧೀನ ಕಾಶ್ಮೀರದಲ್ಲಿ ಇಂತಹ ಭಯೋತ್ಪಾದಕ ಸಂಘಟನೆಗಳು ಹೆಚ್ಚುತ್ತಿವೆ ಎಂದು ಅವರ ಬೆಟ್ಟು ಮಾಡಿದ್ದಾರೆಂದು ವರದಿ ತಿಳಿಸಿದೆ.
Next Story





