Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಏಕಲವ್ಯ ಪ್ರಶಸ್ತಿ ಪ್ರಕಟ

ಏಕಲವ್ಯ ಪ್ರಶಸ್ತಿ ಪ್ರಕಟ

ವಾರ್ತಾಭಾರತಿವಾರ್ತಾಭಾರತಿ6 Oct 2016 3:32 PM IST
share
ಏಕಲವ್ಯ ಪ್ರಶಸ್ತಿ ಪ್ರಕಟ

ಉಡುಪಿ, ಅ.6: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳ 2015ನೇ ಸಾಲಿನ ವಿಜೇತರನ್ನು ರಾಜ್ಯದ ಮೀನುಗಾರಿಕಾ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಇಂದಿಲ್ಲಿ ಪ್ರಕಟಿಸಿದ್ದು, ಒಟ್ಟು 16 ಮಂದಿ ಏಕಲವ್ಯ, ಇಬ್ಬರು ಕೋಚ್‌ಗಳನ್ನು ಜೀವಮಾನ ಸಾಧನೆ ಹಾಗೂ 10 ಮಂದಿ ಗ್ರಾಮೀಣ ಕ್ರೀಡೆಯ ಸಾಧಕರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ಅಜ್ಜರಕಾಡಿನಲ್ಲಿರುವ ವಾರ್ತಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರಮೋದ್, ಮೊದಲ ಬಾರಿ ಪ್ರಶಸ್ತಿಯನ್ನು ಬೆಂಗಳೂರಿನಿಂದ ಹೊರಗೆ ಉಡುಪಿಯಲ್ಲಿ ಪ್ರಕಟಿಸ ಲಾಗುತ್ತಿದೆಎಂದರು. ಏಕಲವ್ಯ ಪ್ರಶಸ್ತಿಯನ್ನು 1992ರಿಂದ ಹಾಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗಳನ್ನು 2014-15ನೇ ಸಾಲಿನಿಂದ ನೀಡಲಾಗುತ್ತಿದೆ ಎಂದವರು ನುಡಿದರು.

ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಕುಂದಾಪುರದ ಅನುಪ್ ಡಿಕೋಸ್ಟ, ರಾಷ್ಟ್ರೀಯ ಬಾಸ್ಕೆಟ್‌ಬಾಲ್ ತಂಡದ ಖಾಯಂ ಸದಸ್ಯರಾಗಿರುವ ಅರವಿಂದ ಎ., ಈಜು ಪಟು ದಾಮಿನಿ ಗೌಡ, ಹಾಕಿ ಆಟಗಾರ ನಿತಿನ್ ತಿಮ್ಮಯ್ಯ, ಅಥ್ಲೀಟ್ ಅರ್ಪಿತಾ ಎಂ ಅವರು ಏಕಲವ್ಯ ಪ್ರಶಸ್ತಿ ಪಡೆದವರಲ್ಲಿ ಪ್ರಮುಖರು.

ಕ್ರೀಡಾ ತರಬೇತುದಾರರಿಗೆ ಇರುವ ಜೀವಮಾನ ಸಾಧನೆ ಪ್ರಶಸ್ತಿಗೆ ಬೆಂಗಳೂರಿನ ಈಜು ತರಬೇತುದಾರ ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್ ಹಾಗೂ ದಾವಣಗೆರೆಯ ಕುಸ್ತಿ ತರಬೇತುದಾರ ಶಿವಾನಂದ ಆರ್. ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ರಾಜ್ಯದ ಗ್ರಾಮೀಣ ಕ್ರೀಡೆಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳ ಕ್ರೀಡಾಪಟುಗಳನ್ನು ಗುರುತಿಸಿ ಉತ್ತೇಜಿಸಲು ಕಳೆದ ವರ್ಷದಿಂದ ಆರಂಭಿಸಲಾದ ಕ್ರೀಡಾರತ್ನ ಪ್ರಶಸ್ತಿಗೆ ಕರಾವಳಿಯ ಕಂಬಳವಲ್ಲದೇ, ಆಟ್ಯಾ-ಪಾಟ್ಯಾ, ಮಟ್ಟಿ-ಜಂಗಿ ಕುಸ್ತಿ, ಗುಂಡು ಎತ್ತುವುದು, ಕಬಡ್ಡಿ, ಖೋ-ಖೋ, ಥ್ರೋಬಾಲ್, ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ಸಾಧಕ ಆಟಗಾರರನ್ನು ಗುರುತಿಸಲಾಗಿದೆ ಎಂದರು.

ಕಂಬಳದ ಕುರಿತು ವಿಶೇಷಜ್ಞರಾಗಿರುವ ಹಾಗೂ 30 ವರ್ಷಗಳಿಂದ ಪ್ರತಿಷ್ಠಿತ ಬಾರಾಡಿ ಸೂರ್ಯಚಂದ್ರ ಜೋಡುಕೆರೆ ಕಂಬಳ ಸಂಘಟಕ ಡಾ.ಜೀವಂಧರ್ ಬಲ್ಲಾಳ್ ಹಾಗೂ ಪ್ರಸಿದ್ಧ ಕಂಬಳಓಟಗಾರರಾಗಿರುವ ಆನಂದ್ ಇರ್ವತ್ತೂರು ಅವರನ್ನು ಈ ಬಾರಿ ಕಂಬಳ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
 ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮೂವರು ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪುತ್ತೂರಿನ ಥ್ರೋಬಾಲ್ ಆಟಗಾರ್ತಿ ಪೂರ್ಣಿಮಾ ಪಿ., ಹಾಸನ ಅರಸಿಕೆರೆಯ ಬಾಲ್‌ಬ್ಯಾಡ್ಮಿಂಟನ್ ಆಟಗಾರ್ತಿ ರಂಜಿತ ಕೆ.ಸಿ. ಹಾಗೂ ಶಿವಮೊಗ್ಗ ತೀರ್ಥಹಳ್ಳಿಯ ಖೋ-ಖೋ ಆಟಗಾರ ಪ್ರದೀಪ್ ಕೆ.ಸಿ. ಅವರೇ ಈ ಕ್ರೀಡಾಪಟುಗಳು.

ನಾಳೆ ಸಂಜೆ 4:30ಕ್ಕೆ ಮೈಸೂರು ವೈದ್ಯಕೀಯ ಕಾಲೇಜಿನ ಜೆ.ಕೆ.ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು. ಚಾಮರಾಜ ನಗರ ಶಾಸಕ ಪಿ.ವಾಸು ಅಧ್ಯಕ್ಷತೆ ವಹಿಸಲಿದ್ದು, ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸಾಧನಾ ಸಂಚಿಕೆ ಬಿಡುಗಡೆ ಮಾಡುವರು ಎಂದರು.

ಏಕಲವ್ಯ ಪ್ರಶಸ್ತಿ ವಿಜೇತರು ತಲಾ ಎರಡು ಲಕ್ಷ ರೂ.ನಗದು, ಏಕಲವ್ಯನ ಕಂಚಿನ ಪ್ರತಿಮೆ ಹಾಗೂ ಪ್ರಶಸ್ತಿ ಪತ್ರ ಪಡೆದರೆ, ಜೀವಮಾನ ಸಾಧನೆ ಪ್ರಶಸ್ತಿ ಪಡೆಯುವ ಇಬ್ಬರು ಕೋಚ್‌ಗಳಿಗೆ ತಲಾ 1.50 ಲಕ್ಷ ರೂ.ನಗದು, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರ ಮತ್ತು ಗ್ರಾಮೀಣ ಕ್ರೀಡೆಗಳ ಸಾಧನೆಗಾಗಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪಡೆಯುವ 10 ಮಂದಿ ತಲಾ ಒಂದು ಲಕ್ಷರೂ. ನಗದು, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರ ಪಡೆಯುವರು.

ಪ್ರಶಸ್ತಿ ವಿಜೇತರ ವಿವರ.

ಏಕಲವ್ಯ ಪ್ರಶಸ್ತಿ

ದಾಮಿನಿ ಗೌಡ, ಬೆಂಗಳೂರು (ಈಜು), ವಿದ್ಯಾ ಪಿಳ್ಳೆ, ಬೆಂಳೂರು (ಬಿಲಿಯರ್ಡ್ಸ್), ಪವನ್ ಶೆಟ್ಟಿ, ಬೆಂಗಳೂರು (ದೇಹಧಾರ್ಡ್ಯ), ನಿತಿನ್ ತಿಮ್ಮಯ್ಯ, ಬೆಂಗಳೂರು (ಹಾಕಿ), ರಾಜಗುರು ಎಸ್, ಬೆಂಗಳೂರು (ಕಬಡ್ಡಿ), ಕೃಷ್ಣ ಎ.ನಾಯ್ಕೋಡಿ, ವಿಜಯಪುರ (ಸೈಕ್ಲಿಂಗ್), ಅರವಿಂದ ಎ., ಬೆಂಗಳೂರು (ಬಾಸ್ಕೆಟ್‌ಬಾಲ್), ಅರ್ಪಿತಾ ಎಂ., ಶಿವಮೊಗ್ಗ (ಅಥ್ಲೆಟಿಕ್ಸ್), ಮೊಹಮ್ಮದ್ ರಫೀಕ್ ಹೋಳಿ, ಧಾರವಾಡ (ಕುಸ್ತಿ), ಮೇಘನ ಎಂ.ಸಜ್ಜನರ್,ಬೆಂಗಳೂರು (ರೈಫಲ್ ಶೂಟಿಂಗ್), ಧೃತಿ ತಾತಾಚರ್ ವೇಣುಗೋಪಾಲ್, ಮೈಸೂರು (ಟೆನಿಸ್), ಅನುಪ್ ಡಿ ಕೋಸ್ಟ, ಕುಂದಾಪುರ (ವಾಲಿಬಾಲ್), ಜಿ.ಎಂ.ನಿಶ್ಚಿತಾ, ಬೆಂಗಳೂರು (ಶಟ್ಲ್ ಬ್ಯಾಡ್ಮಿಂಟನ್), ಶಾವದ್ ಜೆ.ಎಂ., ಬೆಂಗಳೂರು (ಪ್ಯಾರಾ ಅಥ್ಲೆಟಿಕ್ಸ್), ಉಮೇಶ್ ಆರ್.ಖಾಡೆ, ಧಾರವಾಡ (ಪ್ಯಾರಾ ಈಜು), ಕಂಚನ್ ಮುನ್ನೋಳ್‌ಕರ್, ಬೆಳಗಾವಿ (ವೆಯ್ಟಲಿಫ್ಟಿಂಗ್).

ಜೀವನ ಪರ್ಯಂತ ಸಾಧನೆ:

ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್, ಬೆಂಗಳೂರು (ಈಜು), ಶಿವಾನಂದ್ ಆರ್., ದಾವಣಗೆರೆ (ಕುಸ್ತಿ).

ಕರ್ನಾಟಕ ಕ್ರೀಡಾರತ್ನ:

ಡಿ.ಎನ್.ರುದ್ರಸ್ವಾಮಿ, ಬೆಂಗಳೂರು (ಯೋಗ), ಪೂರ್ಣಿಮಾ ಪಿ.,ಪುತ್ತೂರು (ಥ್ರೋಬಾಲ್), ಅಮೋಘ್ ಯು.ಚಚಡಿ, ಸವದತ್ತಿ ಬೆಳಗಾವಿ (ಆಟ್ಯಾ-ಪಾಟ್ಯಾ), ರಂಜಿತ ಎಂ.ಪಿ., ಹಾಸನ (ಬಾಲ್ ಬ್ಯಾಡ್ಮಿಂಟನ್), ಪ್ರದೀಪ್ ಕೆ.ಸಿ, ಶಿವಮೊಗ್ಗ (ಖೋ-ಖೋ), ಸುಮಿತ ಯು.ಎಂ., ಮಡಿಕೇರಿ (ಕಬಡ್ಡಿ), ಡಾ.ಜೀವಂಧರ್ ಬಲ್ಲಾಳ್, ಕಾಂತಾವರ ಕಾರ್ಕಳ (ಕಂಬಳ), ಆನಂದ್ ಇರ್ವತ್ತೂರು, ಕಾರ್ಕಳ (ಕಂಬಳ), ಆನಂದ್ ಎಲ್, ದಾವಣಗೆರೆ (ಕುಸ್ತಿ), ಮೋಶಪ್ಪ ವಿಠಪ್ಪ ಗುಳಬಾಳ, ಬಾಗಲಕೋಟೆ (ಗುಂಡು ಎತ್ತುವುದು)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X