Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಡೋಂಗಿ ಪಂಚಾಂಗ ಬೇಡ: ಸಂವಿಧಾನ ನಮ್ಮ...

ಡೋಂಗಿ ಪಂಚಾಂಗ ಬೇಡ: ಸಂವಿಧಾನ ನಮ್ಮ ಧರ್ಮಗ್ರಂಥ : ಶ್ರೀ ಬಸವ ನಾಗಿದೇವ ಸ್ವಾಮೀಜಿ

ವಾರ್ತಾಭಾರತಿವಾರ್ತಾಭಾರತಿ6 Oct 2016 3:56 PM IST
share
ಡೋಂಗಿ ಪಂಚಾಂಗ ಬೇಡ: ಸಂವಿಧಾನ ನಮ್ಮ ಧರ್ಮಗ್ರಂಥ : ಶ್ರೀ ಬಸವ ನಾಗಿದೇವ ಸ್ವಾಮೀಜಿ

ಹಾಸನ ಅ‌.6:   ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಬಂದ ಚಲೋ ಉಡುಪಿ ಸ್ವಾಭಿಮಾನಿ ಸಂಘರ್ಷ ಜಾಥಾ ತಂಡವನ್ನು ನೂರಾರು ದಲಿತ- ದಮನಿತ ಸ್ವಾಭಿಮಾನಿ ಮನಸ್ಸುಗಳು ಬರಮಾಡಿಕೊಂಡವು. ಅಲ್ಲಿಂದ ಎನ್.ಆರ್ ಸರ್ಕಲ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಘೋಷಣೆಗಳನ್ನೂ ಕೂಗಿ ಹೇಮಾವತಿ ಪ್ರತಿಮೆಯ ಬಳಿ ಜಾಥಾ ಹೊರಟಿತು.

ಚಲೋಉಡುಪಿಯ,  ಕಲಾ ತಂಡದಿಂದ 'ಹೆಜ್ಜೆಗಳೆಲ್ಲ ಕಡಲಿನೂರಿಗೆ ಹೊರಡಲಿ' 'ಅರಿವೇ ಅಂಬೇಡ್ಕರ' ಇತ್ಯಾದಿ ಹೋರಾಟದ ಗೀತೆಗಳಿಂದ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು..

ಜಾಥಾದ ಉದ್ದೇಶವನ್ನು, ಪ್ರಾಸ್ತಾವಿಕ ಭಾಷಣವನ್ನು ಹುಲಿಕುಂಟೆ ಮೂರ್ತಿ ಅವರು ಮಾತನಾಡುತ್ತಾ, ಕರ್ನಾಟಕದಲ್ಲಿ ಇಂದಿನ ವರೆಗೂ ನಡೆದ ದಲಿತರ ಮೇಲಿನ ಹಲ್ಲೆಗಳನ್ನು ನಾವು ಕೇವಲ ಓದಿಕೊಂಡು, ಬರೆದುಕೊಂಡು ಬಂದಿದ್ವಿ.. ಅದನ್ನೆಲ್ಲ ತಿಳಿದು ನಮ್ಮೊಳೋಗಿನ ಪ್ರಜ್ಞೆ ಸತ್ತು ಹೋಗಿತ್ತು.. ಈಗ ನಮ್ಮಲ್ಲಿ ಈ ಜಾತದಿಂದ ಎಚ್ಚರ ಮೂಡಿದೆ.. ಇಷ್ಟು ದಿನ ಕೇವಲ ಕೇಸರಿ ಬಾವುಟ ಮಾತ್ರ ಇತ್ತು ಈಗ ಅದರ ಜೊತೆ ತ್ರಿಶೂಲ, ಕತ್ತಿಗಳು ಸೇರಿಕೊಂಡಿವೆ, ಅದೂ ನಮ್ಮಲ್ಲಿ ಮೂಡಿದ ಎಚ್ಚರ ಅವರ ನಿದ್ದೆಗೆಡಿಸಿದೆ.. ಉನಾದಲ್ಲಿ ನಡೆದ ದಲಿತರ ಸ್ವಾಭಿಮಾನದ ಹೋರಾಟ ನಮಗೆ ಸ್ಫೂರ್ತಿ.. ಈ ರೀತಿಯ ಹೋರಾಟ ನಮ್ಮ ರಾಜ್ಯದಲ್ಲೂ ನಡೆಯಬೇಕು ಎಂದು ಎಲ್ಲರ ಮನಸಲ್ಲು ಇತ್ತು ಹಾಗಾಗಿ ನಾವು ಒಂದು ಸಭೆ ಕರೆದಾಗ ನೂರಾರು ಜನರು ಬಂದು ಭಾಗವಹಿಸಿದರು.. ಅಲ್ಲಿ ನಾವು ಈ ಹೋರಾಟವನ್ನು ಸ್ವಾಭಿಮಾನಿ ಸಂಘರ್ಷ ಜಾಥಾ ಎಂದು ಕರೆದು ಅಂಬೇಡ್ಕರ್ ಮತ್ತು ನೀಲಿ ಬಾವುಟದ ಅಡಿಯಲ್ಲಿ ಹೋರಾಟ ರೂಪಿಸೊಣ ಎಂದು ತಿರ್ಮಾನಿಸಲಾಯಿತು. 70 80 ರ ದಶಕದಲ್ಲಿ ನಡೆದ ಹಿರಿಯರ ಹೋರಾಟದ ದೀಪ ಈಗಲೂ ಬೆಳಗಿತ್ತಿದೆ.  ಹಾಸನದಲ್ಲಿ ನೀವು ಬರಮಾಡಿಕೊಂದ ರೀತಿ ನಮ್ಮ ಮನ ತುಂಬಿ ಬಂದಿದೆ. ಈ ಹೋರಾಟದ ಹಿಂದೆ ಸಾವಿರಾರು ಯುವಕರ ಶ್ರಮವಿದೆ. ನೀವೆಲ್ಲ ಬಂದು ಈ ಹೋರಾಟ ಯಶಸ್ವಿ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದರು. 

ಶ್ರೀ  ಬಸವನಾಗಿದೇವ ಸ್ವಾಮೀಜಿಯವರು ಚಲೋ ಉಡುಪಿ ಜಾಥಾ ಸ್ವಾಗತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಚಲೋ ಉಡುಪಿ ಆಂದೋಲನದ ಈ ಹೋರಾಟವನ್ನು ಹಾಸನದಲ್ಲಿ ನಾನು ಉದ್ಘಾಟನೆ ಮಾಡೋಕೆ ತುಂಬಾ ಸಂತೋಷವಾಗುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅದು ಹೊಟ್ಟೆ ಒಳಗಿನ ಮಗುವಿನಿಂದ ಹಿಡಿದು ಎಲ್ಲಾ ಸಮುದಾಯಕ್ಕೆ ಸೇರುತ್ತದೆ. ಆದ್ರೆ ಇವತ್ತು ನಮ್ಮ ವೋಟು ದುಡ್ಡಿಗೆ ಮಾರಿಕೊಲ್ಲುವ ಸ್ಥಿತಿ ಬಂದಿದೆ ಇದು ದುಃಖಕರ, ಇವತ್ತು ನಮ್ಮ ಉಡುಪು, ಆಹಾರದ ಮೇಲೆ ನಿಯಂತ್ರಣ ಹೇರಲಾಗುತ್ತಿದೆ.  ಜನರನ್ನು ಪ್ರಾಣಿಗಳಿಗಿಂತ ಹೀನವಾಗಿ ನೋಡಲಾಗುತ್ತಿದೆ.. ಇದನ್ನು ವಿರೋಧಿಸಲು ನಾವು ಸಂವಿಧಾನವನ್ನು ತಿಳಿದುಕೊಳ್ಳಬೇಕು. ನಮಗೆ ಡೋಂಗಿ ಪಂಚಾಗ ಬೇಡ ನಮ್ಮ ವಿಮೋಚನೆಗೆ ಸಂವಿಧಾನ ಬೇಕಿದೆ, ಅದುವೇ ನಮ್ಮ ನಿಜವಾದ ಧರ್ಮಗ್ರಂಥ ಆಗಬೇಕು. ಇವತ್ತಿನ ದಿನದಲ್ಲಿ ಎಲ್ಲರ ತಲೆಯಲ್ಲಿ ಭ್ರಹ್ಮಣ್ಯ ತುಂಬಿ ಕೊಂಡು ಯೋಚನಾ ಶಕ್ತಿ ಕಳೆದುಹೋಗಿದೆ. ಅದಕ್ಕಾಗಿ ಬಾಬಾಸಾಹೇಬ್ ಅವರು ಶಿಕ್ಷಣ ಪಡೆಯಲು ಹೇಳಿದ್ದರು, ಆದ್ರೆ ಇವತ್ತು ಶಿಕ್ಷಣವೂ ಕೇವಲ ಹೊಟ್ಟೆ ಪಾಡಿನ ಶಿಕ್ಷಣವಾಗಿದೆ.  ನಮಗೆ ಹೊಟ್ಟೆ ಪಾಡಿನ ಶಿಕ್ಷಣ ಬೇಡ.. ನಮಗೆ ಎಲ್ಲರನ್ನು ಗೌರವಿಸುವ, ಎಲ್ಲರ ಆಹಾರ, ಉಡುಪು, ಆಯ್ಕೆ ಆನ್ನು ಗೌರವಿಸುವ ಶಿಕ್ಷಣ ಬೇಕು. ಆ ಶಿಕ್ಷಣ ಈ ಜಾಥದಿಂದ ಪಡೆದುಕೋಳ್ಳೋನ.. ಈ ಜಾಥಾದಿಂದ ನಾವು ನಮ್ಮ ವೋಟುಗಳನ್ನ ಸೀರೆ, ಪಂಚೆ, ಹಣಕ್ಕೆ ಮಾರಿಕೊಳಲ್ಲ ಎಂದು ಪ್ರತಿಜ್ಞೆ ಮಾಡೋಣ. ನಮಗೆಲ್ಲ ಸಾವಿತ್ರಿ ಬಾಯಿ ಫುಲೆ ನಿಜವಾದ ಸರಸ್ವತಿ ಆ ತಾಯಿಯ ಕೆಲಸಗಳು ನಗೆ ಸ್ಪೂರ್ತಿಯಾಗಲಿ.. ನಮಗೆ ಬುದ್ಧ, ಬಸವ, ನಾರಾಯಣಗುರು ಆದರ್ಶವಾಗಲಿ. ನಮ್ಮ ಮಕ್ಕಳಿಗೆ ಮೌಢ್ಯದಿಂದ ದೂರ ಇಟ್ಟು ವೈಚಾರಿಕ ಶಿಕ್ಷಣ ಕೊಡಿಸೋಣ. ನಾವು ಪ್ರಾಮಾಣಿಕರಾಗಬೆಕು, ಸಾತ್ವಿಕರಾಗಬೇಕು ಎಂದು ಹೇಳುತ್ತಾ.. ನಾವೆಲ್ಲರೂ ಈ ಜಾಥಾದಲ್ಲಿ ಇದ್ದೇವೆ ಎಂದು ಹೇಳಿದರು..

ಅವರ ನಂತರ ಹಿರಿಯ ಸಾಹಿತಿಗಳಾದ ಬಾನು ಮುಸ್ತಾಕ್ ಅವರು ಮಾತನಾಡಿ, ನನಗೆ ಇವತ್ತು ವಿಭಿನ್ನವಾದ ಅನುಭವವಾಗುತ್ತಿದೆ. ಸಾಮಾಜಿಕ ನ್ಯಾಯವನ್ನು ಕೇಳುತ್ತಿದ್ದ ನಮ್ಮ ಜಿಲ್ಲೆಯ ದಲಿತ ಹೋರಾಟದ ಕೇಂದ್ರವಾಗಿತ್ತು. ಆ ದಿನಗಳು ಮತ್ತೆ ಇಂದು ನನಗೆ ನೆನಪಾಗುತ್ತಿದೆ. ಹಲವು ಧಾರೆಗಳು ಇಂದು ಒಂದು ವೇದಿಕೆಯಲ್ಲಿ ಬಂದಿವೆ ಇದಕ್ಕೆ ಕಾರಣವೂ ಪ್ರಭುತ್ವವೆ ಆಗಿದೆ ಎಂದು ನನಗೆ ಅನಿಸುತ್ತೆ. ಇಂದು ದಲಿತರ ಮೇಲೆ ನಡಿಯುತ್ತಿರುವ ಶೋಷಣೆಗಳು ನೋವಾಗಿ ಒಳಗೆ ಇತ್ತು. ಆ ನೋವಿನ ಆಕ್ರೋಶವು ಇಂದು ಉಡುಪಿಚಲೋ ಜಾಥಾದಿಂದ ಹೊರಗೆ ಬಂದಿದೆ. ಇದು ಅಂಬೇಡ್ಕರ್ ಅವರ 125ನೇ ಜಯಂತಿಯ ಕೊಡುಗೆ. ಇದು ಎಲ್ಲ ದಮನಿತರ ದಿಟ್ಟ ಹೆಜ್ಜೆ. ಈ ಹೋರಾಟದ ಭಾಗವಾಗಿ ಆಕಾಶದ ತುಂಬಾ ನೀಲಿ ಭಾವುಟ ಹಾರಾಡುತ್ತಿದೆ.. ದೇಶದ ತುಂಬಾ ಇವತ್ತು ಆಹಾರ ಪದ್ದತಿಯನ್ನು ನೋಡಿ ಮನುಷ್ಯರನ್ನು ಕೀಳಾಗಿ ನೋಡುವ ಸ್ಥಿತಿ ಬಂದಿದೆ. ಇದರ ಹಿಂದೆ ಸರ್ಕಾರ ಮತ್ತು ಕಾರ್ಪೊರೇಟ್ ಶಕ್ತಿಗಳೂ ಸೇರಿಕೊಂಡಿವೆ.. ಇದರ ಜೊತೆ ಶಾಮೀಲಾಗಿರುವ ಪೋಲೀಸರ ಸ್ಥಿತಿಯು ಶೋಚನೀಯವಾಗಿದೆ. ಈ ಜಾಥವು ದಲಿತ, ದಮನಿತ, ಆದಿವಾಸಿ, ಮಹಿಳಾ ಪರವಾಗಿದೆ.. ಈ ಜಾಥಾದ ಶಕ್ತಿ ಹೆಚ್ಚಿದೆ.. ಇದು ಒಂದು ಚಾರಿತ್ರಿಕ ಹಾರಾಟವಾಗಲಿ, ರಾಜಕೀಯದಲ್ಲಿ  ನಿರ್ಣಾಯಕ ಶಕ್ತಿಯಾಗಲಿ ಎಂದು ನಾನು ಹಾರೈಸುತ್ತೆನಿ. ಎಂದರು

ಸಿಪಿಎಂ ನ ಧರ್ಮೆಶ ಮಾತನಾಡಿ, ಇಂದು ಈ ಹೋರಾಟಕ್ಕೆ ಕಾರಣ ಊನದಲ್ಲಿ ನಡೆದ ಒಂದು ಘಟನೆ.. ಅಲ್ಲಿ ನಡೆದ ಉನಾಮಾದರಿ ಹೋರಾಟ ನಮಗೆ ಸ್ಫೂರ್ತಿ.. ಇಂದು ಚಲೋಉಡುಪಿ ಹೋರಾಟದಿಂದ ಎಲ್ಲ ಸಂಘ, ಪಕ್ಷಗಳು ಒಂದೇ ಬಣ್ಣ ನೀಲಿ ಬಣ್ಣದ ಕೆಳಗೆ ಬಂದಿರೋದು ಒಂದು ಐತಿಹಾಸಿಕ ಹಾರಾಟವಾಗಿದೆ.. ಚಲೋಉಡುಪು ಇಡೀ ದೇಶದಲ್ಲಿ ಒಂದು ಸಂಚಲನ ಮೂಡಿಸಿದೆ.. ಇಂದು ನಮಗೆ ಯಾವುದರಲ್ಲೂ ಸ್ವತಂತ್ರ ಇಲ್ಲ.. ನಮ್ಮ ನಿಜವಾದ ಸ್ವಾತಂತ್ರಕ್ಕಾಗಿ ಹೋರಾಟ ನೂರಾರು ವರ್ಷದಿಂದ ನಡೀತಾ ಬಂದಿದೆ.. ಅದನ್ನು ನಾವು ಇಂದು ಚಲೋಉಡುಪಿ ಹೋರಾಟದಿಂದ ಪಡೆದುಕೊಳ್ಳೋಣ.. ಈ ಶೋಷಣೆಯ ವಿರುದ್ಧ ನಮ್ಮ ಆಸ್ತಿಯನ್ನು ಪಡೆಯಲು ನಮ್ಮ ಭೂಮಿ ನಮ್ಮ ಹಕ್ಕು, ನಮ್ಮ ಆಹಾರ ನಮ್ಮ ಆಯ್ಕೆ ಎಂದು ಕೇಳಲು, ಪಡೆಯಲು ಹೋರಾಡಬೇಕಿದೆ.. ಇದು ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಹೊಸ ಅಲೆ ಎಬ್ಬಿಸುತ್ತದೆ ಎಂದು ನಮಗೆ ನಂಬಿಕೆ ಇದೆ. ಸಾಮಾಜಿಕ ಜಲಾತಾಣದಲ್ಲಿ ಚಲೋಉಡುಪಿ ಇಂದ ಏನೂ ಆಗಲ್ಲ ಅನ್ನುವ ಸವಾಲು ಬಂದಿದೆ. ಈ ಸವಾಲನ್ನು ನಾವು ಎದುರಿಸಬೇಕಿದೆ. 9ರಂದು ಉಡುಪಿಯಲ್ಲಿ ಸಾವಿರಾರು ನೀಲಿ ಜನರು ಸೇರಿಕೊಂಡು ಸವಾಲನ್ನು ಎದುರಿಸೋಣ ಬನ್ನಿ ಎಂದರು.

ದಲಿತ ಮುಖಂಡರಾದ ಸಂದೇಶ್  ಮಾತನಾಡಿ, ಇಂದು ನನಗೆ 80 ರ ದಶಕದ ಹೋರಾಟ ನೆನಪಾಗುತ್ತಿದೆ.. ಇದಕ್ಕೆ ಕಾರಣರಾದ ಜಾಥಾದಲ್ಲಿ ಕಂಡು ಬಂದು ಮಹಿಳಾ ಸಂಗಾತಿಗಳಿಗೆ ಮತ್ತು ಎಲ್ಲ ಸ್ನೇಹಿತರಿಗೆ ವಂದಿಸುತ್ತೆನೆ. ಅಂಬೇಡ್ಕರ್ ಏನಾದರೂ ಈ ದೇಶದಲ್ಲಿ ಹುಟ್ಟದೆ ಇದಿದ್ದರೆ ಇಂದಿಗೂ ಕೂಡ ಕೆಳ ವರ್ಗದ ಜನರು ಜೀತ, ಶೋಷಣೆಯಲ್ಲೆ ಇರಬೆಕಾಗಿತಿತ್ತು ಅನಿಸುತ್ತದೆ. ನರೇಂದ್ರ ಮೋದಿ ಆಡಳಿತ ಮಾಡಿದ ಜಾಗದಲ್ಲೇ ಊನ ಘಟನೆ ನಡೆದಿದೆ ಇದನ್ನು ನಾವು ಟಿವಿಯಲ್ಲಿ ನೋಡಿದಾಗ ಕರಳು ಕಿತ್ತು ಬರುತ್ತದೆ. ಚಲೋಉಡುಪಿ ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಲಿ ಎಂದು ನಾನು ಬಯಸುತ್ತಿನಿ. ಎಂದರು..

ದಲಿತ ಮುಖಂಡರಾದ ರಾಜಶೇಖರ್ ಮಾತನಾಡಿ, ಕೋಮುವಾದಿಗಳೆ ನೀವು ಸಂವಿಧಾನ ಅಳಿಸಿಹಾಕುತ್ತಿದ್ದಿರಿ.. ಇದನ್ನು ನಿಲ್ಲಿಸಿ ಇಲ್ಲವಾದರೆ ಮುಂದಿನ ದಿನ ಆಶಾದಾಯಕವಾಗಿ ಇರಲ್ಲ.. ಎಚ್ಚರದಿಂದ ಇರಿ.. ಚಲೋಉಡುಪಿ ಯಶಸ್ವಿ ಆಗಲಿ.. ಎಂದರು..

ಚಲೋಉಡುಪಿ ತಂಡದ ಪರವಾಗಿ ಭಾಸ್ಕರ್ ಪ್ರಸಾದ್ ಮಾತನಾಡುತ್ತ, ಈ ಚಳವಳಿ ಗಾಗಿ 160 ಸಂಘಟನೆಗಳು ಎಲ್ಲಾ ತಮ್ಮ ಅಸ್ಮಿತೆ ಬಿಟ್ಟು ನೀಲಿ ಬಣ್ಣದ ಕೆಳಗೆ ಬಂದಿದ್ದಾರೆ. ಇದು ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿದೆ. ಸಂಘಪರಿವಾರದವರು ಇಂದು ನಮ್ಮ ಹಿಂದುಳಿದ ಯುವಕರನ್ನು ಹಿಡಿದು ಕೊಂದಿದ್ದಾರೆ. ನಮ್ಮ ಯುಕರು ಅಲ್ಲಿನ ಪಾಪ ಕೂಪದಲ್ಲಿ ಇದ್ದಾರೆ ಅವರನ್ನು ನಾವು, ಹೊರಗೆ ಕರೆದುಕೊಂಡು ಬರಬೇಕು. ಅಲ್ಲಿ ಅವರ ಕೈಯಲ್ಲಿ ಕೊಲೆ ಮಾಡಿಸುತ್ತಿದ್ದಾರೆ, ಮತ್ತು ಅವರೇ ಕೊಲೆ ಆಗುತ್ತಿದ್ದರೆ. ನಾನು ಮನವಿ ಮಾಡಿತ್ತಿನಿ ದಯಮಾಡಿ ಯುವಕರೇ ಆ ಪಾಪ ಕೋಪದಿಂದ ಹೊರ ಬನ್ನಿ. ಆಹಾರ ಎಲ್ಲರ ವಯಕ್ತಿಕ ವಿಚಾರ, ಯಾರು ಏನೂ ಬೇಕಾದರೂ ತಿನ್ನಬಹುದು, ಅದನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ. ಅದಕ್ಕೆ ನಾವು ಆಹಾರ ನಮ್ಮ ಆಯ್ಕೆ ಎಂದು ಘೋಷಣೆ ಇಟ್ಟುಕೊಂದಿದ್ದೆವಿ.. ಇಂದು ಭೂಮಿ ಪ್ರಶ್ನೆ ಇದೆ.. ನಾವು ಭೂಮಿಗೆ ಒಡೆಯರು. ಆದ್ರೆ ಅದು ಇವತ್ತು ಅದು ಬರಿ ಮಾತಾಗಿದೆ ಮತ್ತು ಘೋಷಣೆ ಆಗಿದೆ. ಇದನ್ನು ಸಾಕರಕ್ಕಾಗಿ 9ಕೆ ನಾವು ಉಡುಪಿಯಲ್ಲಿ ಸೆರಿಕೋಳ್ಳಬೆಕು.. ಅದಕ್ಕೆ ನಾವು ಭೂಮಿ ನಮ್ಮ ಹಕ್ಕು ಎಂದು ಹೇಳುತ್ತೇವೆ.. ಅದ್ರೆ ಕೇವಲ 2 ಘೋಷಣೆ ಅಷ್ಟೇ ಮುಖ್ಯ ಎಂದು ನಾವು ಅಂದುಕೊಂಡಿಲ್ಲ.. ಮಹಿಳಾ, ಆದಿವಾಸಿ ಅವರುಗಳ ಎಲ್ಲ ಶೋಷಣೆಗಳನ್ನೂ ನಮ್ಮ ಹಕ್ಕೊತ್ತಾಯದಲ್ಲಿ ತಗೊಂಡಿದಿವಿ.. ಎಲ್ಲರು ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮ್ಮ ಹೋರಾಟ ಯಶಸ್ವಿಗೊಳಿಸಿ ಎಂದರು. 

ರೈತ ಸಂಘದ ಕೊಟ್ಟೂರ್ ಶ್ರೀನಿವಾಸ್ ಮಾತನಾಡಿ, ಎಲ್ಲಾ ಸರ್ಕಾರಗಳೇ ಜಿಲ್ಲೆಗೊಂದು ಕಸಯೆಖಾನೆ ಗಳನ್ನೂ ನಡೆಸಬೇಕು, ಉತ್ತಮವಾದ ಮತ್ತು ರುಚಿಯಾದ ರಾಸುಗಳನ್ನು ಬೆಳೆಸಿ ಜನರಿಗೆ ಮಾಂಸ ಹಂಚಬೇಕು. ಹಾಗೆಯೇ ಎಲ್ಲಾ ದಮನಿತರಿಗೆ ಭೂಮಿ ಹಂಚುವುದು ಸರ್ಕಾರದ ಕರ್ತವ್ಯ.. ಚಲೋಉಡುಪಿ ಯಶಸ್ವಿಯಾಗಲಿ ಎಂದರು.

ಚಲೋ ಉಡುಪಿಯ ಸಂದೇಶವನ್ನು ಅಖಿಲ, ನಾವು ಸಾಮಾಜಿಕ ಜಾಲತಾಣದಲ್ಲಿ ಉನಾ ಮಾದರಿ ಚರ್ಚೆ ಬಂದಾಗ ಎಲ್ಲರೂ ಫ್ರೀಡಂ ಪಾರ್ಕ್ ನಲ್ಲಿ ಸೆರಿಕೊಂಡಾಗ ಒಂದು ಜಾಥಾ ಹೊರಡಬೇಕು ಎಂದು ಅಂದುಕೊಂಡೆವು.. ಆ ಜಾಥಾದಲ್ಲಿ ಏನೆಲ್ಲಾ ವಿಚಾರಗಳು ಬರಬೇಕು ಎಂದು ಚರ್ಚಿಸಿಕೊಂಡೆವು.. ಅದರಲ್ಲಿ ಕೃತಕವಾಗಿ ರೂಪುಗೊಂಡಿರುವ ಜಾತಿ, ಧರ್ಮ ಮತ್ತು ಜಂಡರ್ ವಿಷಯವನ್ನು ತಗೆದುಕೊಳ್ಳಬೆಕು ಅಂದುಕೊಂಡೆವು. ನಾವು ಬುದ್ಧ ಮಾರ್ಗದಲ್ಲಿ ಚಲಿಸುತ್ತಿದ್ದೆವೆ. ನೀವೆಲ್ಲಾ ಈ ಜಾಥಾದಲ್ಲಿ ತೊಡಗಿಸಿಕೊಳ್ಳಬೇಕು. ಶೋಷಣೆಗೆ ಒಳಗಾದ ಎಲ್ಲಾ ಸಮುದಾಯ ದಲಿತರು. ಅದಕ್ಕೆ ನಾವು ದಲಿತ ದಮನಿತ ಎಂದು ಬರೆದುಕೊಂಡಿದಿವಿ. ಇದರಲ್ಲಿ ಒಬ್ಬರು ನಾಯಕರು ಇಲ್ಲ. ಇದು ಸಾಮೂಹಿಕ ನಾಯತ್ವದಲ್ಲಿ ನಡಿಯುತ್ತಿದೆ.. ನೀವೆಲ್ಲಾ ಬೆಂಬಲಿಸಿ ಎಂದರು..

ಕಡೆಯದಾಗಿ ಉಡುಪಿಚಲೋ ತಂಡದಿಂದ ಬೀದಿನಾಟಕ ಪ್ರದರ್ಶನ ಮಾಡಿ,  ಹೋರಾಟದ ಸ್ಪೂರ್ತಿಯೊಂದಿಗೆ ಕಾರ್ಯಕ್ರಮ ಮುಗಿಸಿಕೊಂಡು ಜಾಥಾ ಬೆಲೂರಿಗೆ ಹೊರಟಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X