ಜಮ್ಮು ಉಧಂಪುರದಲ್ಲಿ ಕಣಿವೆಗೆ ಬಿದ್ದ ಬಸ್ಸು: 4 ಶಾಲಾಮಕ್ಕಳು ಮೃತ್ಯು

ಜಮ್ಮು, ಅಕ್ಟೋಬರ್ 6: ಉಧಂಪುರ ಜಿಲ್ಲೆಯಲ್ಲಿ ಬಸ್ಸೊಂದು ಕಣಿವೆಗೆ ಉರುಳಿದ್ದು, ನಾಲ್ವರು ಶಾಲಾ ಮಕ್ಕಳುಮೃತರಾಗಿದ್ದಾರೆಂದು ವರದಿಯಾಗಿದೆ. ಬಸ್ ಪ್ರಪಾತಕ್ಕೆ ಉರುಳಿ ಬಿದ್ದ ಸಂಭವಿಸಿದ ಅವಘಡದಲ್ಲಿ ಇನ್ನೂ 24 ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಪೊಲೀಸರು ಮತ್ತು ಸ್ಥಳೀಯ ಜನರು ಗಾಯಾಳುಗಳನ್ನು ಬಸ್‌ನಿಂದ ಹೊರತರುವುದರಲ್ಲಿ ನಿರತರಾಗಿದ್ದಾರೆಂದು ವರದಿ ತಿಳಿಸಿದೆ.
Next Story





