ಪುತ್ತೂರಿನಲ್ಲಿ ಹಾಡಹಗಲೇ ಪ್ರತ್ಯಕ್ಷವಾದ ‘ಪ್ರೇತ’!

ಪುತ್ತೂರು, ಅ.6: ಪುತ್ತೂರು ಪೇಟೆಯಲ್ಲಿ ಹಾಡಹಗಲೇ ‘ಪ್ರೇತ’ವೊಂದು ಪ್ರತ್ಯಕ್ಷವಾಗಿ ಜನರ ಕುತೂಹಲ ಕೆರಳಿಸಿತು. ಬೈಕ್‌ನಲ್ಲಿ ಆಗಮಿಸಿದ ಪ್ರೇತ ನಗರವಾಸಿಗಳಿಗೆ ಮನರಂಜನೆ ನೀಡುವುದರೊಂದಿಗೆ ಎಲ್ಲರನ್ನೂ ತನ್ನೆಡೆಗೆ ಸೆಳೆಯಿತು.
ಪುತ್ತೂರಿನ ರಿಕ್ಷಾ ಚಾಲಕರೊಬ್ಬರು ದಸರಾ ಹಬ್ಬದ ಪ್ರಯತ್ನ 'ಪ್ರೇತ'ವೇಷ ಧರಿಸಿ ಪುತ್ತೂರು ನಗರದಲ್ಲಿ ಗುರುವಾರ ತಿರುಗಾಟ ನಡೆಸಿದ್ದು, ಹಲವು ಮಂದಿಯನ್ನು ಬೆರಗಾಗುವಂತೆ ವಾಡಿತು.
ಪುತ್ತೂರು ನಗರದಲ್ಲಿ ಬೈಕಿನಲ್ಲಿ ಸಂಚಾರ ಆರಂಭಿಸಿದ ಈ 'ಪ್ರೇತ'ವನ್ನು ಕಂಡು ಹಲವಾರು ಮಂದಿ ಗಾಬರಿಗೊಂಡರು. ಬೈಕಿನಲ್ಲಿ ಸಂಚರಿಸುತ್ತಾ, ನಗರದ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲಿ ಸುತ್ತಾಡತೊಡಗಿದ ಪ್ರೇತವನ್ನು ವೀಕ್ಷಿಸಿ ಜನರು ಕುತೂಹಲಗೊಂಡರು. ಒಟ್ಟಿನಲ್ಲಿ ಜನರನ್ನು ಮೋಡಿ ಮಾಡಿದ 'ಪ್ರೇತ' ಒಂದಿಷ್ಟು ಹಣವನ್ನೂ ಸಂಪಾದಿಸುವಲ್ಲಿ ಯಶಸ್ವಿಯಾಯಿತು.
ಜನತೆ ಕುತೂಹಲಭರಿತರಾಗಿ ವೀಕ್ಷಿಸುವಂತೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದ್ದು ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ನಿವಾಸಿ ದಿವಾಕರ್ ಎಂಬವರು. ರಿಕ್ಷಾ ಚಾಲಕರಾಗಿರುವ ದಿವಾಕರ್ ಅವರು 'ಪ್ರೇತ' ವೇಷ ಮೂಲಕ ಜನತೆಯ ಪ್ರಶಂಸೆ ಗಿಟ್ಟಿಸಿಕೊಂಡರು.





