ಮೌಂಟೆನ್ ಡಿವ್ ಗೆ ಬಿದ್ದರೆ ಇಲಿಯ ಗತಿ ಏನಾಗುತ್ತದೆ ಗೊತ್ತೇ ?
ಸ್ವತಃ ಪೆಪ್ಸಿಕೋ ನ್ಯಾಯಾಲಯದಲ್ಲಿ ಹೇಳಿದ ಆಘಾತಕಾರಿ ಮಾಹಿತಿ

ಹೊಸದಿಲ್ಲಿ , ಅ. 6 : ಬಿಸಿಲಿನ ತಾಪ ಹಾಗು ದಾಹವನ್ನು ನೀಗಿಸಲು ನೀವು ಉತ್ಸಾಹದಿಂದ ತಂಪು ಪಾನೀಯಗಳಲ್ಲಿ ವಿಷವಿದೆ ! ಈ ಆಘಾತಕಾರಿ ಮಾಹಿತಿ ಕೇಂದ್ರ ಸರಕಾರ ನಡೆಸಿದ ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಪ್ರಮುಖ ತಂಪು ಪಾನೀಯ ಕಂಪೆನಿಗಳಾದ ಪೆಪ್ಸಿಕೊ ಹಾಗು ಕೋಕಾ ಕೋಲಾದ ಐದು ಪಾನೀಯಗಳನ್ನು ಪರೀಕ್ಷಿಸಲಾಗಿತ್ತು. ಈ ಪಾನೀಯಗಳಲ್ಲಿ ಆಂಟಿಮೊನಿ, ಸತು, ಕ್ರೋಮಿಯಂ ಹಾಗು ಕ್ಯಾಡ್ಮಿಯಂ ನಂತಹ ಅಪಾಯಕಾರಿ ಅಂಶಗಳು ಇರುವುದು ಬಹಿರಂಗವಾಗಿದೆ.
ಕೇಂದ್ರ ಅರೋಗ್ಯ ಸಚಿವಾಲಯದ ಡ್ರಗ್ಸ್ ಟೆಕ್ನಿಕಲ್ ಎಡ್ವಯ್ಸರೀ ಬೋರ್ಡ್ ಪೆಪ್ಸಿ, ಕೋಕಾ ಕೋಲಾ , ಮೌಂಟೆನ್ ಡಿವ್ , ಸ್ಪ್ರೈಟ್ ಹಾಗು 7ಅಪ್ ಗಳ ಸ್ಯಾಂಪಲ್ ಗಳನ್ನು ಪರೀಕ್ಷಿಸಿತ್ತು .
ಆದರೆ ಆಘಾತಕಾರಿ ವಿಷಯವೇನೆಂದರೆ, ತನ್ನ ಪಾನೀಯ ಮೌಂಟೆನ್ ಡಿವ್ ನಲ್ಲಿ ಇಲಿಯೊಂದು ಬಿದ್ದರೆ ಅದು 30 ದಿನಗಳಲ್ಲಿ ಸಂಪೂರ್ಣವಾಗಿ ಪಾನೀಯದಲ್ಲಿ ಕರಗಿ ಹೋಗುತ್ತದೆ ಎಂದು ಪೆಪ್ಸಿಕೊ ಸ್ವತಃ ನ್ಯಾಯಾಲಯವೊಂದರಲ್ಲಿ ಒಪ್ಪಿಕೊಂಡಿದೆ !
2009 ರಲ್ಲಿ ಅಮೇರಿಕಾದ ಮ್ಯಾಡಿಸನ್ ಕೌನ್ಟಿ ನಿವಾಸಿ ರೆನಾಲ್ಡ್ ಬಾಲ್ ಎಂಬವರು ತಮ್ಮ ಕಚೇರಿಯಲ್ಲಿ ಮೌಂಟೆನ್ ಡಿವ್ ಕುಡಿದು ತೀವ್ರ ಅಸ್ವಸ್ಥರಾದರು. ಬಳಿಕ ಅವರು ಆ ಪಾನೀಯವನ್ನು ಕ್ಯಾನ್ ನಿಂದ ತೆಗೆದು ನೋಡಿದಾಗ ಅದರಲ್ಲಿ ಒಂದು ಇಲಿ ಸತ್ತು ಬಿದ್ದಿರುವುದು ಅವರಿಗೆ ಕಂಡು ಬಂತು ! ಈ ಬಗ್ಗೆ ದೂರು ನೀಡಿದ ಅವರು ಪೆಪ್ಸಿಕೋಗೆ ಆ ಸತ್ತ ಇಲಿಯನ್ನೂ ಕಳಿಸಿದರು. ಪಾನೀಯದಲ್ಲಿ ಇಲಿಯ ದೇಹ ಕರಗಿಹೋಗಿತ್ತು ಎಂದು ರೆನಾಲ್ಡ್ ಆರೋಪಿಸಿದ್ದರು.
ಆದರೆ ರೆನಾಲ್ಡ್ ಅವರ ಆರೋಪವನ್ನು ನಿರಾಕರಿಸಿದ ಪೆಪ್ಸಿಕೊ ನ್ಯಾಯಾಲಯಕ್ಕೆ ಒಂದು ಅಫಿಡವಿಟ್ ಸಲ್ಲಿಸಿತು. ಅದರ ಪ್ರಕಾರ ಬಾಟಲಿಂಗ್ ಆಗಿ ಅದು ಗ್ರಾಹಕನ ಕೈಗೆ ಹೋಗುವ ಅವಧಿಯೊಳಗೆ ಇಲಿ ಬಿದ್ದಿದ್ದರೆ ಅದು ಸಂಪೂರ್ಣವಾಗಿ ಪಾನೀಯದಲ್ಲಿ ಕರಗಿ ಹೋಗುತ್ತದೆ. 30 ದಿನಗಳಲ್ಲಿ ಇಲಿ ಸಂಪೂರ್ಣ ಕರಗಿ ಹೋಗುತ್ತದೆ. ಹಾಗಾಗಲಿ ಗ್ರಾಹಕನಿಗೆ ಇಲಿಯ ಶವ ಸಿಗಲು ಅಸಾಧ್ಯ !
ಹಾಗಾದರೆ ಈ ಪಾನೀಯ ನಿಮ್ಮ ದೇಹದೊಳಗೆ ಹೋದರೆ ಅಲ್ಲಿ ಏನು ಮಾಡಬಹುದು ಎಂದು ನೀವೇ ಊಹಿಸಿ.







