ಆಳ್ವಾಸ್‌ನ ನಾಲ್ವರು ಕ್ರೀಡಾಪಟುಗಳಿಗೆ ‘ಕ್ರೀಡಾರತ್ನ’ ಪ್ರಶಸ್ತಿ

ಮೂಡುಬಿದಿರೆ, ಅ.6: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಾಲ್ವರು ಕ್ರೀಡಾಪಟುಗಳು ರಾಜ್ಯ ಸರಕಾರ ಕೊಡಮಾಡುವ 2015ನೆ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದ್ವಿತೀಯ ಎಂಎಚ್‌ಆರ್‌ಡಿ ವಿದ್ಯಾರ್ಥಿನಿ ರಂಜಿತಾ ಎಂ.ಪಿ.(ಬಾಲ್ ಬ್ಯಾಡ್ಮಿಂಟನ್), ಪ್ರಥಮ ಬಿಪಿಎಡ್ ವಿದ್ಯಾರ್ಥಿನಿ ಪೂರ್ಣಿಮಾ (ತ್ರೋಬಾಲ್), ಪ್ರದೀಪ್ ಕೆ.ಸಿ. (ಖೋ ಖೋ), ಸುಮಿತಾ(ಕಬಡ್ಡಿ) ಪ್ರಶಸ್ತಿ ಪಡೆದ ಆಳ್ವಾಸ್‌ನ ಕ್ರೀಡಾಪಟುಗಳು.
ಬಾಲ್ ಬ್ಯಡ್ಮಾಂಟನ್ ವಿಭಾಗದಲ್ಲಿ ಸತತ ಮೂರನೆ ಬಾರಿ ಆಳ್ವಾಸ್ ಕ್ರೀಡಾಪಟುಗಳು ಆಯ್ಕೆಯಾಗಿರುವುದು ವಿಶೇಷ. ಪ್ರಶಸ್ತಿ ಪುರಸ್ಕೃತರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
Next Story





