ಬೆಳ್ತಂಗಡಿ: ಬಾಲಕಿಯ ಅತ್ಯಾಚಾರಗೈದ ಆರೋಪಿ ಸೆರೆ

ಬೆಳ್ತಂಗಡಿ, ಅ.6: ತಾಲೂಕಿನ ಮಿತ್ತಬಾಗಿಲು ಗ್ರಾಮ ಕೂಡಬೆಟ್ಟು ಆಲಂಗಾವು ಎಂಬಲ್ಲಿ 16ರ ಹರೆಯದ ಪರಿಶಿಷ್ಟ ಜಾತಿಯ ಬಾಲಕಿಯ ಮೇಲೆ ಅತ್ಯಾಚಾರ ಗೈದ ನಡೆಸಿದ ಆರೋಪಿ ಶೀನ ಮೊಗೇರ (33) ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆತ ತನ್ನ ಮನೆ ಸಮೀಪದ 16ರ ಹರೆಯದ ಬಾಲಕಿಯನ್ನು ಆತ್ಯಾಚಾರಗೈದಿದ್ದು, ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯನ್ನು ಗುರುವಾರ ಬೆಳ್ತಂಗಡಿ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದಾಗ ಅತ್ಯಾಚಾರ ಎಸಗಿರುವುದನ್ನು ತಿಳಿಸಿದ್ದಳು. ಅದರಂತೆ ದೂರು ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಪೊಕ್ಸೊ ಕಾಯ್ದೆಯನ್ವಯ ಬಂಧಿಸಿದ್ದಾರೆ.
Next Story





