Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇನ್ನಷ್ಟು ಜಟಿಲಗೊಂಡ ಕಾಶ್ಮೀರ...

ಇನ್ನಷ್ಟು ಜಟಿಲಗೊಂಡ ಕಾಶ್ಮೀರ ಬಿಕ್ಕಟ್ಟು

ರಾಮ್ ಪುಣಿಯಾಣಿರಾಮ್ ಪುಣಿಯಾಣಿ6 Oct 2016 11:56 PM IST
share
ಇನ್ನಷ್ಟು   ಜಟಿಲಗೊಂಡ ಕಾಶ್ಮೀರ ಬಿಕ್ಕಟ್ಟು

ಉರಿಯಲ್ಲಿ ತನ್ನ 18 ಮಂದಿ ಸೈನಿಕರ ಹತ್ಯೆಗೆ ಪ್ರತಿಕ್ರಿಯೆಯಾಗಿ ಭಾರತವು ಗಡಿ ನಿಯಂತ್ರಣ ರೇಖೆಯಲ್ಲಿ ನಡೆಸಿದ ಸೇನಾಕಾರ್ಯಾಚರಣೆಯ ಬಗ್ಗೆ ಸಮೂಹಸನ್ನಿ ಸೃಷ್ಟಿಯಾಗುತ್ತಿದ್ದಂತೆಯೇ, ಕಾಶ್ಮೀರ ಜನತೆಯ ದುಃಖ, ಯಾತನೆಗಳು ಮೂಲೆಗುಂಪಾದವು. ಭಾರತ-ಪಾಕಿಸ್ತಾನದ ನಡುವೆ ನಡೆಯುತ್ತಿರುವ ತಿಕ್ಕಾಟಗಳು ಬಹುತೇಕ ಕಾಶ್ಮೀರ ಸಮಸ್ಯೆಯ ಸುತ್ತ ಕೇಂದ್ರೀಕೃತವಾಗಿವೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಈ ಭೂಮಿಯಲ್ಲಿರುವ ಯಾವುದೇ ಶಕ್ತಿಗೂ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಸಾಧ್ಯವಿಲ್ಲವೆಂದು ವಾದಿಸುತ್ತದೆ. ಇನ್ನೊಂದೆಡೆ ಪಾಕಿಸ್ತಾನವು ಕಾಶ್ಮೀರದ ಮೇಲೆ ಭಾರತದ ಸ್ವಾಧೀನತೆಯನ್ನು ಪ್ರಶ್ನಿಸುತ್ತದೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಪ್ರದೇಶವಾಗಿರುವುದರಿಂದ ಅದು ತನ್ನ ಭಾಗವಾಗಿರಬೇಕೆಂದು ಪಾಕ್ ವಾದಿಸುತ್ತದೆ. ಉರಿ ಸೇನಾನೆಲೆಯ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯು, ಈ ವಿವಾದಕ್ಕೆ ಇನ್ನಷ್ಟು ಕಿಚ್ಚು ಹೊತ್ತಿಸಿದೆ. ವಾಸ್ತವವಾಗಿ ಇಡೀ ವಿದ್ಯಮಾನವು ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಭಾರತೀಯ ಸೇನಾಪಡೆಯ ಎನ್‌ಕೌಂಟರ್‌ಗೆ ಬಲಿಯಾಗುವುದರೊಂದಿಗೆ ಆರಂಭಗೊಂಡಿದೆ. ಆತನ ಹತ್ಯೆಯ ಬಳಿಕ ಮತ್ತೊಮ್ಮೆ ಎರಡು ವಿಧದ ಪ್ರತಿಕ್ರಿಯೆಗಳು ಉಂಟಾಗಿವೆ.

 ಭಾರತೀಯ ಮಾಧ್ಯಮಗಳು ಈ ಘಟನೆಯನ್ನು ಉಗ್ರಗಾಮಿ ಚಟುವಟಿಕೆಗಳನ್ನು ಸದೆಬಡಿಯುವಲ್ಲಿ ದೊರೆತ ಅತಿ ದೊಡ್ಡ ಗೆಲುವೆಂಬುದಾಗಿ ಬಿಂಬಿಸಿದ್ದವು. ಆದರೆ ಕಾಶ್ಮೀರಿ ಜನತೆಯ ಒಂದು ವರ್ಗವು ಇದರಿಂದ ಆಘಾತಗೊಂಡಿತು ಹಾಗೂ ಅವರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಪೊಲೀಸರು ಹಾಗೂ ಸೇನಾಪಡೆಗಳ ಮೇಲೆ ಕಲ್ಲೆಸೆಯುವುದೇ ಅವರ ಪ್ರತಿಭಟನೆಯ ಒಂದು ವಿಧಾನವಾಗಿತ್ತು. ಆ ತರುವಾಯ ನಡೆದ ಹಿಂಸಾತ್ಮಕ ಘಟನೆಗಳಲ್ಲಿ ಸುಮಾರು 80 ಮಂದಿ ಮೃತಪಟ್ಟು, 9 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ಎಸೆದ ಪೆಲೆಟ್ ಗುಂಡುಗಳಿಂದಾಗಿ ಹಲವರಿಗೆ ಗಾಯಗಳಾಗಿದ್ದು, ಇನ್ನೂ ಅನೇಕ ಮಂದಿ ಕಣ್ಣಿನದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ. ಸೇನೆ ಹಾಗೂ ಪೊಲೀಸ್‌ಪಡೆಗಳ ಕೆಲವು ಸಿಬ್ಬಂದಿಗೂ ಗಾಯಗಳಾಗಿವೆ.ಈ ಹಿಂಸಾಚಾರವು ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ಹೇರಿಕೆಗೆ ಕಾರಣವಾಯಿತು. ಮಾತ್ರವಲ್ಲದೆ ಇದು ಈ ವರೆಗೆ ರಾಜ್ಯ ಕಂಡ ಅತ್ಯಂತ ದೀರ್ಘ ಸಮಯದ ಕರ್ಫ್ಯೂ ಎನಿಸಿಕೊಂಡಿತು.

 ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಸರಕಾರ ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯದ ನಾಯಕರ ಜೊತೆ ಮಾತುಕತೆ ನಡೆಸಲು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದಾರೆ. ಪ್ರತ್ಯೇಕವಾದಿ ನಾಯಕರ ಜೊತೆ ಮಾತುಕತೆ ನಡೆಸುವುದಿಲ್ಲವೆಂಬುದೇ ರಾಜನಾಥ್ ಮತ್ತವರ ಸರಕಾರದ ನಿಲುವಾಗಿದೆ. ಸರ್ವಪಕ್ಷ ನಿಯೋಗವು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಂಡದಲ್ಲಿದ್ದ ಸೀತಾರಾಮ್‌ಯೆಚೂರಿ ಹಾಗೂ ಡಿ.ರಾಜಾ ಮತ್ತು ಇನ್ನು ಕೆಲವರು ಪ್ರತ್ಯೇಕವಾದಿ ನಾಯಕ ಎಸ್.ಎ.ಆರ್. ಗೀಲಾನಿ ಅವರನ್ನು ಭೇಟಿಯಾಗಲು ಯತ್ನಿಸಿದ್ದರು. ಆದರೆ ಗೀಲಾನಿ ಅವರನ್ನು ಭೇಟಿಯಾಗಲು ನಿರಾಕರಿಸಿದ್ದರು.

     ಸುಮಾರು ಎರಡು ತಿಂಗಳ ಬಳಿಕ ಕಾಶ್ಮೀರದಲ್ಲಿ ಕರ್ಫ್ಯೂ ಹಿಂದೆಗೆಯಲಾಗಿದೆ. ಆದರೆ ಪರಿಸ್ಥಿತಿ ಮಾತ್ರ ಇನ್ನೂ ಉದ್ವಿಗ್ನವಾಗಿಯೇ ಉಳಿದಿದೆ. ಉರಿಯಲ್ಲಿ ಭಯೋತ್ಪಾದಕರ ದಾಳಿಯ ಬಳಿಕ ಭಯೋತ್ಪಾದನೆ ವಿಷಯದೆಡೆಗೆ ಎಲ್ಲರ ಗಮನ ಹರಿದಿದೆ. ಕಾಶ್ಮೀರದಲ್ಲಿ ಭುಗಿಲೆದ್ದಿರುವ ಪ್ರಕ್ಷೋಭೆಯು ಕಳವಳಕಾರಿಯಾಗಿದ್ದರೂ, ಸರಕಾರ ಮಾತ್ರ ಪ್ರತಿಭಟನಾಕಾರರು, ರಾಜ್ಯದ ಒಟ್ಟು ಜನಸಂಖ್ಯೆಯ ಕೇವಲ ಶೇ.5ರಷ್ಟಿದ್ದು, ಅವರು ಪಾಕಿಸ್ತಾನದಿಂದ ಪ್ರಚೋದಿತರಾಗಿದ್ದಾರೆಂದು ಆಪಾದಿಸುತ್ತಾ ಬಂದಿದೆ. ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶಕ್ಕಾಗಿ ಕಾಶ್ಮೀರ ಸಮಸ್ಯೆಯನ್ನು ಜೀವಂತವಾಗಿಡುವಲ್ಲಿ ಖಂಡಿತವಾಗಿಯೂ ಪಾಕಿಸ್ತಾನದ ಪಾತ್ರವಿದೆ. ಆದರೆ ಕಾಶ್ಮೀರಿ ಜನತೆಯ ಒಂದು ವರ್ಗದ ಅಸಮಾಧಾನವು ಕುದಿಯುತ್ತಿದ್ದು, ಕಳೆದ ಕೆಲವು ವರ್ಷಗಳಲ್ಲಿ ಅದು ಪರಾಕಾಷ್ಠೆಯನ್ನು ತಲುಪಿದೆ. ನಿರ್ದಿಷ್ಟವಾಗಿ ಕಾಶ್ಮೀರದ ಯುವಜನತೆ ಪರಕೀಯತೆಯ ಭಾವನೆಯಿಂದ ರೊಚ್ಚಿಗೆದ್ದಿದ್ದಾರೆ. ಕಾಶ್ಮೀರಿಗಳು ಎರಡು ವಿಧದಲ್ಲಿ ಹಿಂಸಾಚಾರದ ಸಂತ್ರಸ್ತರಾಗಿದ್ದಾರೆ. ಒಂದೆಡೆ ಭಯೋತ್ಪಾದನಾ ಕೃತ್ಯಗಳು ಕಣಿವೆ ರಾಜ್ಯದಲ್ಲಿ ಆಗಾಗ್ಗೆ ಶಾಂತಿಭಂಗವನ್ನುಂಟು ಮಾಡುತ್ತಿವೆ. ಇದಕ್ಕೆ ಕಡಿಮೆಯಿಲ್ಲದಂತೆ ಇನ್ನೊಂದೆಡೆ ಸಶಸ್ತ್ರ ಪಡೆಗಳು ಕೂಡಾ ಜನತೆಯ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ. ಈ ಪ್ರದೇಶದಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯು ಭದ್ರತಾಪಡೆಗಳಿಗೆ, ಯಾವುದೇ ದಂಡನೆಯಿಂದ ವಿನಾಯಿತಿ ನೀಡುವುದರಿಂದ ಅಮಾಯಕ ನಾಗರಿಕರು ಅವರಿಂದ ಪದೇ ಪದೇ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ.

   ಕಾಶ್ಮೀರದಿಂದ ಹೊರಹೊಮ್ಮುತ್ತಿರುವ ಆ್ಯಮ್ನೆಸ್ಟಿ ವರದಿಗಳು ಇಂತಹ ಉಲ್ಲಂಘನೆಗಳ ತೀವ್ರತೆಯನ್ನು ನಮಗೆ ವಿವರಿಸಿ ಹೇಳುತ್ತವೆ. ಬೆಂಗಳೂರಿನಲ್ಲಿ ಬಿಡುಗಡೆಯಾದ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ವರದಿಯು, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ದಂಡನೆಯ ಭೀತಿಯಿಲ್ಲದೆ ಎಸಗಿದ ಮಾನವಹಕ್ಕು ಉಲ್ಲಂಘನೆಗಳ ತೀವ್ರತೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದೆ. 1990ರಿಂದ 2011ರವರೆಗೆ ರಾಜ್ಯದಲ್ಲಿ ಒಟ್ಟು 43 ಸಾವಿರ ಮಂದಿ ಹತ್ಯೆಯಾಗಿರುವುದನ್ನು ಜಮ್ಮು ಕಾಶ್ಮೀರ ಸರಕಾರ ದಾಖಲಿಸಿಕೊಂಡಿದೆ. ಹೀಗೆ ಸಶಸ್ತ್ರಪಡೆಗಳಿಂದ ಹತ್ಯೆಯಾದ 43 ಸಾವಿರ ಮಂದಿಯಲ್ಲಿ 21,323 ಮಂದಿ ಉಗ್ರಗಾಮಿಗಳೆನ್ನಲಾಗಿದ್ದು, ಉಳಿದ 13,228 ಮಂದಿ ಅಮಾಯಕ (ಇವರು ನೇರವಾಗಿ ಯಾವುದೇ ಹಿಂಸಾಚಾರದಲ್ಲಿ ತೊಡಗಿರಲಿಲ್ಲ) ನಾಗರಿಕರು. 5,369 ಮಂದಿ ಭದ್ರತಾಪಡೆ ಸಿಬ್ಬಂದಿ ಬಂಡುಕೋರರಿಂದ ಹತ್ಯೆಯಾಗಿದ್ದಾರೆ.

  ಸೇನೆಗೆ ಅಪರಿಮಿತ ಅಧಿಕಾರವನ್ನು ನೀಡುವ ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್‌ಸ್ಪಾ)ಯು, ಕಾಶ್ಮೀರದಲ್ಲಿನ್ಯಾಯಾಂಗೇತರ ಹತ್ಯೆಗಳಿಗೆ ಹಾಗೂ ಇತರ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದೆ. ನಾಗರಿಕ ನ್ಯಾಯಾಲಯಗಳಲ್ಲಿ ಭದ್ರತಾಪಡೆಗಳ ಯಾವುದೇ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಪೂರ್ವ ಅನುಮತಿಯನ್ನು ಪಡೆಯಬೇಕೆಂದು ಅಫ್‌ಸ್ಪಾದ ಏಳನೆ ಸೆಕ್ಷನ್ ತಿಳಿಸುತ್ತದೆ. ಹೀಗಾಗಿ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ನೆಪದಲ್ಲಿ ಭದ್ರತಾಪಡೆಗಳು ಎಸಗಿದ ಅತಿರೇಕದ ಕೃತ್ಯಗಳು ಪ್ರಶ್ನೆಗೊಳಗಾಗದೆ ಹೋಗುತ್ತಿವೆ. ಜಮ್ಮುಕಾಶ್ಮೀರದಲ್ಲಿ ಸೇನೆಯ ವಿರುದ್ಧ ಸಲ್ಲಿಸಲಾದ ಶೇ.96ರಷ್ಟು ದೂರುಗಳನ್ನೇ ಸುಳ್ಳು ಹಾಗೂ ಆಧಾರರಹಿತ ಅಥವಾ ಸಶಸ್ತ್ರ ಪಡೆಗಳಿಗೆ ಕಳಂಕಹಚ್ಚುವ ದುರುದ್ದೇಶದಿಂದ ಕೂಡಿವೆಯೆಂದು ಹೇಳಿ ತಳ್ಳಿಹಾಕಲಾಗಿದೆ.

  ಇಂತಹ ಸನ್ನಿವೇಶಗಳಲ್ಲಿ ಕಾಶ್ಮೀರದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಉದ್ವಿಗ್ನತೆಯ ಕಿಡಿಹೊತ್ತಿಕೊಳ್ಳಲು ಕಾರಣವಾಗುತ್ತವೆ ಹಾಗೂ ವಿಶೇಷವಾಗಿ ಯುವಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಚಲಿತ ವಿದ್ಯಮಾನಗಳ ಸ್ಥಿತಿಗತಿಯ ಬಗ್ಗೆ ಅವರು ಮನದಾಳದಲ್ಲಿ ಆಳವಾದ ಅಸಮಾಧಾನ ಬೇರೂರಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ನಾಗರಿಕ ಪ್ರದೇಶಗಳಲ್ಲಂತೂ ವಸ್ತುಶಃ ಸೇನಾಡಳಿತವಿದೆ. ಹಲವು ವರ್ಷಗಳಿಂದ ಕಾಶ್ಮೀರದ ಜನತೆ ಪ್ರಜಾಪ್ರಭುತ್ವದ ಭಾವನೆಯಿಂದ ವಂಚಿತರಾಗಿದ್ದಾರೆ. ಹಾಗೂ ಇದು ಅವರ ಅತೃಪ್ತಿಗೆ ಕಾರಣವಾಗಿದೆ. ಪ್ರತಿಭಟನೆಗೆ ಕುಮ್ಮಕ್ಕು ನೀಡುವಲ್ಲಿ ಪಾಕಿಸ್ತಾನದ ಪಾತ್ರವಿದೆಯಾದರೂ ಇದು ಕೇವಲ ಪಾಕ್ ಪ್ರೇರಿತ ಸಮಸ್ಯೆಯಲ್ಲವೆಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕಾಗಿದೆ.

 ಈ ಸಮಸ್ಯೆಯ ಪರಿಹಾರಕ್ಕೆ ದಾರಿಯೇನು?. ಯುಪಿಎ-2 ಆಡಳಿತವು ಕಾಶ್ಮೀರದ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮೂವರು ಸಂವಾದಕರ (interlocutors)   ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ತನ್ನ ವರದಿಯಲ್ಲಿ ಕಾಶ್ಮೀರ ವಿಧಾನಸಭೆಯ ಸ್ವಾಯತ್ತೆಗೆ ಸಂಬಂಧಿಸಿದ ನಿಬಂಧನೆಗಳನ್ನು ಮರುಸ್ಥಾಪಿಸಬೇಕು ಎಂದು ತಿಳಿಸಿತ್ತು. ತೀವ್ರವಾದಿಗಳು ಹಾಗೂ ಪಾಕಿಸ್ತಾನದ ಜೊತೆ ಸರಕಾರವು ಮಾತುಕತೆ ನಡೆಸಬೇಕೆಂದು ಸಮಿತಿಯು ವರದಿಯಲ್ಲಿ ಪ್ರತಿಪಾದಿಸಿತ್ತು. ಕಾಶ್ಮೀರದಲ್ಲಿ ಸಶಸ್ತ್ರ ಪಡೆೆಗಳ ವಿಶೇಷಾ ಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ)ಯನ್ನು ರದ್ದುಪಡಿಸಬೇಕು ಹಾಗೂ ಪ್ರದೇಶದಲ್ಲಿ ಸಶಸ್ತ್ರ ಸಿಬ್ಬಂದಿಯ ಸಂಖ್ಯೆಯನ್ನು ಕಡಿಮೆಗೊಳಿಸಬೇಕೆಂಬ ಬೇಡಿಕೆಯು ನಿರಂತರವಾಗಿ ಕೇಳಿಬರುತ್ತಿವೆ. ಪ್ರಸ್ತುತ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಪಿಡಿಪಿ ಹಾಗೂ ಬಿಜೆಪಿ ಮೈತ್ರಿಕೂಟವು ಭಿನ್ನಮತವನ್ನು ನಿಭಾಯಿಸುವ ವಿಷಯದಲ್ಲಿ ಅತ್ಯಂತ ನಿರ್ದಯತೆಯಿಂದ ವರ್ತಿಸುತ್ತಿದೆ. ತೀವ್ರವಾದಿಗಳೊಂದಿಗೆ ಮಾತುಕತೆಯಿಲ್ಲವೆಂಬ ಅದರ ನಿಲುವಿನಿಂದಾಗಿ ಕಾಶ್ಮೀರದಲ್ಲಿ ಅಶಾಂತಿಯು ಮುಂದುವರಿದಿದೆ. ಪಾಕಿಸ್ತಾನದ ಪಾತ್ರದಿಂದಾಗಿ ಉರಿ ಹಾಗೂ ಪಠಾಣ್‌ಕೋಟ್ ದಾಳಿ ಘಟನೆಗಳು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿಯು, ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಗದ್ದುಗೆಯಲ್ಲಿರುವ ತನಕ ಭಯೋತ್ಪಾದಕರು ದಾಳಿ ನಡೆಸುವ ಧೈರ್ಯ ಮಾಡಲಾರರು ಎಂದು ಸಾರಿದ್ದುದನ್ನು ಕೆಲವರಿಗೆ ಇನ್ನೂ ನೆನಪಿರಬಹುದು. ಆದರೆ ಈ ಘೋಷಣೆಗಳು ಕೇವಲ ಪೊಳ್ಳೆಂದು ಇದೀಗ ಬಟಾಬಯಲಾಗಿದೆ. ಕಾಶ್ಮೀರದಲ್ಲಿ ಶಾಂತಿಯ ಸ್ಥಾಪನೆಯ ಅಗತ್ಯವಿದೆ ಹಾಗೂ ಆ ಪ್ರದೇಶದ ಜನತೆಗೆ ಅತ್ಯಂತ ತುರ್ತಾಗಿ ನೆಮ್ಮದಿಯ ಯುಗವೊಂದನ್ನು ತಂದುಕೊಡಬೇಕಾಗಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪಾಕಿಸ್ತಾನವನ್ನೂ ತೊಡಗಿಸಿಕೊಳ್ಳಬೇಕಾಗಿದೆ. ಕಾಶ್ಮೀರಕ್ಕೆ ಸ್ವಾಯತ್ತೆಯನ್ನು ನೀಡುವ 1948ರ ಒಪ್ಪಂದವನ್ನು ಗೌರವಿಸುವ ಅಗತ್ಯವಿದೆ. ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಸಂವಾದಕರು ಸಲ್ಲಿಸಿದ್ದ ವರದಿ ಅತ್ಯಂತ ಮಹತ್ವದ್ದಾಗಿದೆ ಹಾಗೂ ಅದು ವಿವಾದದ ಬಗ್ಗೆ ಸಂತುಲಿತ ನಿಲುವನ್ನು ಹೊಂದಿದೆ. ಈ ವರದಿಯನ್ನು ಮುಂದಕ್ಕೊಯ್ಯಬೇಕಾಗಿದೆ ಹಾಗೂ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯ ಉದ್ದೇಶದಿಂದ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಕಾಶ್ಮೀರಿಗಳು ಎರಡು ವಿಧದಲ್ಲಿ ಹಿಂಸಾಚಾರದ ಸಂತ್ರಸ್ತರಾಗಿದ್ದಾರೆ. ಒಂದೆಡೆ ಭಯೋತ್ಪಾದನಾ ಕೃತ್ಯಗಳು ಕಣಿವೆ ರಾಜ್ಯದಲ್ಲಿ ಆಗಾಗ್ಗೆ ಶಾಂತಿಭಂಗವನ್ನುಂಟು ಮಾಡುತ್ತಿವೆ. ಇದಕ್ಕೆ ಕಡಿಮೆಯಿಲ್ಲದಂತೆ ಇನ್ನೊಂದೆಡೆ ಸಶಸ್ತ್ರ ಪಡೆಗಳು ಕೂಡಾ ಜನತೆಯ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ. ಈ ಪ್ರದೇಶದಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯು ಭದ್ರತಾಪಡೆಗಳಿಗೆ, ಯಾವುದೇ ದಂಡನೆಯಿಂದ ವಿನಾಯಿತಿ ನೀಡುವುದರಿಂದ ಅಮಾಯಕ ನಾಗರಿಕರು ಅವರಿಂದ ಪದೇ ಪದೇ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ.

share
ರಾಮ್ ಪುಣಿಯಾಣಿ
ರಾಮ್ ಪುಣಿಯಾಣಿ
Next Story
X