ಬಿಸಿಸಿಐ ಆರ್ಥಿಕ ವ್ಯವಹಾರಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ
ಲೋಧಾ ಸಮಿತಿ ಶಿಫಾರಸು ಒಪ್ಪಿಕೊಂಡ ಬಿಸಿಸಿಐ

ಹೊಸದಿಲ್ಲಿ, ಅ.7: ಲೋಧಾ ಸಮಿತಿಯ ಶಿಫಾರಸು ಅಂಗೀಕರಿಸಿ ನಿರ್ಣಯ ಕೈಗೊಳ್ಳುವ ತನಕ ಬಿಸಿಸಿಐ ಯಾವುದೇ ಆರ್ಥಿಕ ವ್ಯವಹಾರ ನಡೆಸುವಂತಿಲ್ಲ. ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುವಂತಿಲ್ಲ ಎಂದು ತನ್ನ ಮಧ್ಯಂತರ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದೆ.
ಶುಕ್ರವಾರ ಇಲ್ಲಿ ನಡೆದ ವಿಚಾರಣೆಯಲ್ಲಿ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡುತ್ತೇವೆ ಎಂದು ಬಿಸಿಸಿಐ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, ಈ ಬಗ್ಗೆ ಅಫಿಡವಿಟ್ ಸಲ್ಲಿಸುವುದಾಗಿ ತಿಳಿಸಿತು. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಅ.17ಕ್ಕೆ ಮುಂದೂಡಿತು.
ದೇಶದ ಕ್ರಿಕೆಟ್ ಆಡಳಿತ ಪಾರದರ್ಶಕ ಹಾಗೂ ಸ್ವಚ್ಛವಾಗಿರಲು ನಿವೃತ್ತ ನ್ಯಾ. ಆರ್.ಎಂ. ಲೋಧಾ ಸಮಿತಿ ಮಾಡಿರುವ ಶಿಫಾರಸುಗಳನ್ನೆಲ್ಲಾ ಬೇಷರತ್ತಾಗಿ ಇನ್ನೊಂದು ದಿನದಲ್ಲಿ ಅನುಷ್ಠಾನಕ್ಕೆ ತನ್ನಿ. ಇಲ್ಲದೆ ಇದ್ದರೆ ಬಿಸಿಸಿಐ ಗದ್ದುಗೆ ತೊರೆಯಲು ತಯಾರಾಗಿ ಎಂದು ಗುರುವಾರ ಕಟ್ಟಕಡೆಯ ಅವಕಾಶ ನೀಡಿದ್ದ ಸುಪ್ರೀಂಕೋರ್ಟ್ ಬಿಸಿಸಿಐನಲ್ಲಿನ ಸರ್ವಾಧಿಕಾರಿ ಧೋರಣೆಗೆ ಆಸ್ಪದವೇ ಇಲ್ಲ ಎಂದು ಪುನರುಚ್ಚರಿಸಿತ್ತು.
Next Story





