ದುಬೈ: ಚೀಲದಲ್ಲಿದ್ದ ಮೃತದೇಹದ ಗುರುತು ಪತ್ತೆ
.jpg)
ದುಬೈ,ಅಕ್ಟೋಬರ್ 7: ಈ ಹಿಂದೆ ಉಮ್ಮುಲ್‌ಕುವೈನ್‌ನಲ್ಲಿ ಚೀಲದಲ್ಲಿ ಪತ್ತೆಯಾಗಿದ್ದ ಶವ ಚೀನದ ಯುವತಿಯದ್ದೆಂದು ಪೊಲೀಸರತಂಡ ಪತ್ತೆಮಾಡಿದೆ ಎಂದು ವರದಿಯಾಗಿದೆ. ಉಮ್ಮುಲ್‌ಕುವೈನ್, ದುಬೈಪೊಲೀಸರು ಜಂಟಿಯಾಗಿ ಮೂರು ತಿಂಗಳ ಸುದೀರ್ಘ ತನಿಖೆ ನಡೆಸಿದ್ದು ಕೊಲೆಕೃತ್ಯಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದಾರೆ.
ಉಮ್ಮುಲ್‌ಕುವೈನ್‌ನಲ್ಲಿ ಜೂನ್ 26ಕ್ಕೆ ರಸ್ತೆಯ ಬದಿಯಲ್ಲಿ ಮರದಕೆಳಗೆ ಶುಚೀಕರಣ ಕಾರ್ಮಿಕರಿಗೆ ಬ್ಯಾಗ್‌ನಲ್ಲಿ ಮೃತ ದೇಹವೊಂದು ಕಂಡು ಬಂದಿತ್ತು. ಮೃತದೇಹಕ್ಕೆ ಅಷ್ಟರಲ್ಲಿತಿಂಗಳುಗಳೇ ಕಳೆದಿರಬೇಕೆಂದು ಅಂದಾಜಿಸಲಾಗಿತ್ತು. ಮೃತರ ದ್ರವಿಸಿದ್ದರಿಂದ ಯಾರದ್ದೆಂದು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ನಂತರದುಬೈಪೊಲೀಸರ ನೆರವಿನೊಂದಿಗೆ ದೇಶದಲ್ಲಿ ಕಾಣೆಯಾದ ಮಹಿಳೆಯರ ಲೆಕ್ಕಗಳನ್ನು ಪರಿಶೀಲಿಸಿದಾಗ ಕೊಲೆಕೃತ್ಯದ ಜಾಡು ಪತ್ತೆಯಾಗಿದೆ. ಚೀನದಿಂದಸಂದರ್ಶನ ವೀಸಾದಲ್ಲಿ ಬಂದ ಇಪ್ಪತ್ತಾರುವರ್ಷದ ಯುವತಿ ಕೊಲ್ಲಲ್ಪಟ್ಟಿದ್ದಾಳೆ ಎಂದು ಡಿಎನ್‌ಎಪರೀಕ್ಷೆಯ ಮೂಲಕ ದೃಢೀಕರಣಗೊಂಡಿದೆ. 2015 ಆಗಸ್ಟ್‌ನಲ್ಲಿ ಯುವತಿ ಸಂದರ್ಶನ ವೀಸಾದಲ್ಲಿ ಯುಎಇಗೆ ಬಂದಿದ್ದಳು. ಈಕೆಯೊಂದಿಗೆ ವಾಗ್ವಾದ ನಡೆದದ್ದು ಕೊಲೆಗೆ ಹೇತುವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರು ಸೇರಿ ಈಕೆಯನ್ನು ಕೊಲೆಗೈದಿದ್ದರು. ನಂತರ ಕೈಕಾಲು ಕಟ್ಟಿಹಾಕಿ ಮೃತದೇಹವನ್ನು ಚೀಲಕ್ಕೆ ತುಂಬಿಸಿ ಎಸೆಯಲಾಗಿತ್ತು ಉಮ್ಮುಲ್ ಕುವೈನ್‌ನ ಪೊಲೀಸ್ ಸಿಐಡಿ ಡೈರೆಕ್ಟರ್ ಕರ್ನಲ್ ಹುಮೈದ್ ಮತ್ತಾರ್ ಅಲ್‌ಅಜೀಲ್ ಹೇಳಿದ್ದಾರೆಂದು ವರದಿ ತಿಳಿಸಿದೆ.





