ಸುಳ್ಯ ಠಾಣೆಗೆ ಕಲ್ಲು ತೂರಾಟ ಪ್ರಕರಣ: ಬಿಜೆಪಿ ಮುಖಂಡರ ಸಹಿತ 26 ಆರೋಪಿಗಳ ಖುಲಾಸೆ

ಸುಳ್ಯ, ಅ.7: 2011ರ ಡಿಸೆಂಬರ್ 14ರಂದು ಸುಳ್ಯದ ಪೊಲೀಸ್ ಠಾಣೆಗೆ ಕಲ್ಲು ತೂರಾಟ ನಡೆಸಿದ ಆರೋಪಕ್ಕೆ ಒಳಗಾಗಿದ್ದ 26 ಮಂದಿಯನ್ನು ಸುಳ್ಯ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.
ಎಲಿಮಲೆಯಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಗುಂಪು ಹಲ್ಲೆ ಮತ್ತು ಜಾಲ್ಸೂರಿನಲ್ಲಿ ಭಿನ್ನ ಕೋಮಿನ ಜೋಡಿಗಳ ಪತ್ತೆ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆ ಎದುರು ಉದ್ವಿಗ್ನತೆ ತಲೆದೋರಿ ಠಾಣೆಗೆ ಕಲ್ಲು ತೂರಾಟ ನಡೆದಿತ್ತು. ಈ ಸಂಬಂಧ ಬಿಜೆಪಿ ಮುಖಂಡರಾದ ಪಿ.ಕೆ.ಉಮೇಶ್, ಪ್ರಕಾಶ್ ಹೆಗ್ಡೆ, ಕಿಶನ್ , ಯಂ.ಉಮೇಶ್, ಭಾನುಪ್ರಕಾಶ್, ದಿನೇಶ್ ಕುಮಾರ್, ಗುರುಪ್ರಕಾಶ್, ಕಿರಣ್‌ಕುಮಾರ್, ಸತೀಶ್, ಆನಂದ ಗೌಡ, ಶಶಿಧರ, ದೀಕ್ಷಿತ್ ಕುಮಾರ್, ಎನ್.ಲೋಕೇಶ್, ಉದಯಕುಮಾರ್, ವಿನಯಕುಮಾರ್ ಕಂದಡ್ಕ, ಸಂಪಾಜೆಯ ಬಾಲಚಂದ್ರ, ವಿಜಯ, ಗ್ರಾಮ ಕರಣಿಕ ಪೃಥ್ವಿರಾಜ್ ಸೇರಿದಂತೆ 26 ಮಂದಿಯ ಮೇಲೆ ಪ್ರಕರಣ ದಾಖಲಾಗಿತ್ತು.
ಇದೀಗ 26 ಮಂದಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
Next Story





