ಸುಳ್ಯ: ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕಿಗೆ ಅಭಿನಂದನೆ
.jpg)
ಸುಳ್ಯ, ಅ.7: ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕಿ ಎ.ಜಿ.ಭವಾನಿಯವರಿಗೆ ಅಭಿನಂದನಾ ಕಾರ್ಯಕ್ರಮ ಗಾಂಧಿನಗರ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ವೃತ್ತಿ ಪವಿತ್ರವಾದದ್ದು, ಗೌರವ ತರುವ ವೃತ್ತಿ. ಸುಭದ್ರ ಸಮಾಜವನ್ನು ರೂಪಿಸುವವರು ಶಿಕ್ಷಕರು ಎಂದವರು ಹೇಳಿದರು.
ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಮುಹಮ್ಮದ್ ಅಭಿನಂದನಾ ಭಾಷಣ ಮಾಡಿದರು. ಎ.ಜಿ.ಭವಾನಿಯವರು ಶಾಲೆಗೆ ಕೀರ್ತಿ ತಂದಿದ್ದಾರೆ. ಪರಿಸರಕ್ಕೆ ಗೌರವ ತಂದಿದ್ದಾರೆ ಎಂದವರು ಪ್ರಸಂಶಿಸಿದರು. ನಗರ ಪಂಚಾಯತ್ ಸದಸ್ಯೆ ಪ್ರೇಮಾ ಟೀಚರ್ ಎ.ಜಿ.ಭವಾನಿಯವರನ್ನು ಸನ್ಮಾನಿಸಿದರು. ಜೈಭಾರತ್ ಯುವಕ ಮಂಡಲ, ಮುಂಗಾರು ಸ್ಪೋರ್ಟ್ಸ್ ಕ್ಲಬ್, ನಝರ್ ಗೇಮ್ಸ್ಸ್ ಕ್ಲಬ್, ಪ್ರಗತಿ ಸ್ಪೋರ್ಟ್ಸ್ ಕ್ಲಬ್, ಸಹರಾ ಗೇಮ್ಸ್ ಕ್ಲಬ್, ಯುನೈಟೆಡ್ ಫುಟ್ಬಾಲ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅದ್ಯಕ್ಷ ಸಿ.ಎ.ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭವಾನಿ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯತ್ ಸದಸ್ಯರಾದ ಎನ್.ಎ.ರಾಮಚಂದ್ರ, ಕೆ.ಎಂ.ಮುಸ್ತಫಾ, ಕೆ.ಎಸ್.ಉಮರ್, ಬಿಇಒ ಬಿ.ಎಸ್.ಕೆಂಪಲಿಂಗಪ್ಪ, ಸಿಆರ್‌ಪಿಗಳಾದ ಗೋಪಾಲಕೃಷ್ಣ ಬನ, ಪದ್ಮನಾಭ ಅತ್ಯಾಡಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಳಿನಿ ವೇದಿಕೆಯಲ್ಲಿದ್ದರು.
ಶಾಲಾ ಮುಖ್ಯ ಶಿಕ್ಷಕ ಕೋಟ್ಯಪ್ಪ ಪೂಜಾರಿ ಸ್ವಾಗತಿಸಿದರು. ಮಜೀದ್ ಕಾರ್ಯಕ್ರಮ ನಿರೂಪಿಸಿದರು.







