ಉಳ್ಳಾಲ: ನದಿನೀರಿಗೆ ತ್ಯಾಜ್ಯ ಸೋರಿಕೆ: ಸಾರ್ವಜನಿಕರ ಆಕ್ರೋಶ
ಉಳಾಲ, ಅ.7: ಇಲ್ಲಿಯ ಕೋಟೆಪುರದಲ್ಲಿರುವ ಫಿಶ್‌ಮಿಲ್‌ನಿಂದ ಗುರುವಾರ ರಾತ್ರಿ ತಾಂತ್ರಿಕ ದೋಷದಿಂದ ಪೈಪ್‌ಲೈನ್ ಒಡೆದು ಹೋದ ಪರಿಣಾಮ ನದಿ ನೀರಿಗೆ ಹರಿಸಲಾಗಿದ್ದ ತ್ಯಾಜ್ಯದಿಂದ ಪರಿಸರವೆಲ್ಲ ದುರ್ವಾಸನೆ ಬೀರಿದ್ದು ಸಾರ್ವಜನಿಕರು ಫಿಶ್‌ಮಿಲ್‌ಗೆ ಸರಕು ಸಾಗಿಸುತ್ತಿದ್ದ ವಾಹನಗಳನ್ನು ತಡೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು.
ಬಳಿಕ ಫಿಶ್‌ಮಿಲ್ ಮಾಲಕರು ಸಮಸ್ಯೆ ಬಗೆಹರಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದಾಗ ಸಾರ್ವಜನಿಕರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತ್ಯಾಜ್ಯ ನೀರು ಹರಿದು ದುರ್ವಾಸನೆಯ ಬಗ್ಗೆ ಸ್ಥಳೀಯರು ಆಕ್ರೋಶಿತಗೊಂಡು ಫಿಶ್ ಮಿಲ್‌ಗೆ ತೆರಳುವ ಎಲ್ಲಾ ಸರಕು ವಾಹನಗಳನ್ನು ಶುಕ್ರವಾರ ಬೆಳಗ್ಗೆಯೇ ತಡೆಹಿಡಿದು ಪ್ರತಿರೋಧ ವ್ಯಕ್ತಪಡಿಸಿದರು.
ಪೊಲೀಸರು ಉದ್ರಿಕ್ತರನ್ನು ಸಮಾಧಾನಿಸಿ ಫಿಶ್‌ಮಿಲ್ ಮಾಲಕರಲ್ಲಿ ತ್ಯಾಜ್ಯ ಹರಿವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸೂಚಿಸಿದರು.
Next Story





.jpg.jpg)

