ಮಾರಿಶಸ್‌ನಲ್ಲಿ ಪತ್ತೆಯಾದ ವಿಮಾನದ ರೆಕ್ಕೆ ಎಂಎಚ್370ರದ್ದು

ಕೌಲಾಲಂಪುರ, ಅ. 7: ಹಿಂದೂ ಮಹಾ ಸಾಗರದ ದ್ವೀಪ ಮಾರಿಶಸ್‌ನಲ್ಲಿ ಪತ್ತೆಯಾಗಿರುವ ವಿಮಾನವೊಂದರ ಭಾಗವು ನಾಪತ್ತೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನಕ್ಕೆ ಸೇರಿದ್ದೆಂದು ಗುರುತಿಸಲಾಗಿದೆ ಎಂದು ಮಲೇಶ್ಯ ಮತ್ತು ಆಸ್ಟ್ರೇಲಿಯದ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ವಿಮಾನದ ರೆಕ್ಕೆಯ ಭಾಗಕ್ಕೆ ಸೇರಿದ ತುಂಡನ್ನು ಮೇ ತಿಂಗಳಲ್ಲಿ ಪತ್ತೆಹಚ್ಚಲಾಗಿತ್ತು. ಬಳಿಕ ಅದನ್ನು ಆಸ್ಟ್ರೇಲಿಯನ್ ಟ್ರಾನ್ಸ್‌ಪೋರ್ಟ್ ಸೇಫ್ಟಿ ಬ್ಯೂರೋದ ಪರಿಣತರು ವಿಶ್ಲೇಷಣೆ ನಡೆಸಿದ್ದರು. ಅವಶೇಷದಲ್ಲಿ ಪತ್ತೆಯಾದ ಸಂಖ್ಯೆಯನ್ನು ಕಾಣೆಯಾದ ಬೋಯಿಂಗ್ 777 ವಿಮಾನದೊಂದಿಗೆ ತಾಳೆ ನೋಡಿದಾಗ ಅವುಗಳ ನಡುವಿನ ನಂಟು ಪತ್ತೆಯಾಯಿತು ಎಂದು ಹೇಳಿಕೆಯೊಂದರಲ್ಲಿ ಬ್ಯೂರೋ ತಿಳಿಸಿದೆ.
2014 ಮಾರ್ಚ್ 8ರಂದು 239 ಮಂದಿಯನ್ನು ಹೊತ್ತು ಕ್ವಾಲಲಂಪುರದಿಂದ ಬೀಜಿಂಗ್‌ಗೆ ಹಾರುತ್ತಿದ್ದ ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು.
Next Story





