ಅಂತರ್ ಕಾಲೇಜು ಅಥ್ಲೆಟಿಕ್ ಕೂಟ: ಮೊದಲ ದಿನ ಆಳ್ವಾಸ್ ವಿದ್ಯಾರ್ಥಿಗಳಿಂದ 9 ನೂತನ ಕೂಟ ದಾಖಲೆ

ಉಡುಪಿ, ಅ.7: ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ಮಂಗಳೂರು ವಿವಿ ಅಂತರ ಕಾಲೇಜು 36ನೇ ಅಥ್ಲೆಟಿಕ್ ಕೂಟದ ಮೊದಲ ದಿನದ ಸ್ಪರ್ಧೆಗಳಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ಒಟ್ಟು 9 ಹೊಸ ಕೂಟ ದಾಖಲೆಗಳನ್ನು ಬರೆದು ಮಿಂಚಿದರು.
ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಮಂಗಳೂರು ವಿವಿ ಆಶ್ರಯದಲ್ಲಿ ಆಯೋಜಿಸಿರುವ ಕೂಟದಲ್ಲಿ ಇಂದು ಆಳ್ವಾಸ್‌ನ ವಿದ್ಯಾರ್ಥಿಗಳು ಪುರುಷರ ವಿಭಾಗದಲ್ಲಿ ಆರು ಹಾಗೂ ಮಹಿಳಾ ವಿಭಾಗದಲ್ಲಿ ಮೂರು ನೂತನ ದಾಖಲೆಗಳನ್ನು ಬರೆದರು.
ಪುರುಷರ ಶಾಟ್‌ಪುಟ್‌ನಲ್ಲಿ ಆಲ್ಪಿನ್ ವಿ.ಪಿ. ಅವರು ಗುಂಡನ್ನು 16.45ಮೀ. ದೂರ ಎಸೆದು ಅದೇ ಕಾಲೇಜಿನ ಶೀತಲ್ ಕುಮಾರ್ 2010-11ರಲ್ಲಿ ಮೂಡಬಿದರೆ ಕೂಟದಲ್ಲಿ ಸ್ಥಾಪಿಸಿದ 15.29ಮೀ. ದಾಖಲೆ ಮುರಿದರು. ಇನ್ನು ಸ್ಟೀಪಲ್ ಚೇಸ್‌ನಲ್ಲಿ ಹರಿಭಕ್ಷ್ ಸಿಂಗ್ ಅವರು 9ನಿ.25.40ಸೆ. ಕ್ರಮಿಸಿ, ಆಳ್ವಾಸ್‌ನ ಶಿಜೂ ರಾಜನ್ 2015-16ರಲ್ಲಿ ಇಲ್ಲೇ ಬರೆದ 10ನಿ.05.8ಸೆ. ದಾಖಲೆಯನ್ನು ಅಳಿಸಿದರು.
ಸ್ಟೀಫಲ್‌ಚೇಸ್‌ನ ಮಿಳಾ ವಿಭಾಗದಲ್ಲಿ ಸಫೀದ್ ಎಂ.ಪಿ. ಅವರು 11ನಿ.34.70ಸೆ.ಗಳ ಸಾಧನೆಯೊಂದಿಗೆ ಆಳ್ವಾಸ್‌ನ ಭಗತ್ ಶೀತಲ್ ಜಾಮ್ಜಿ ಅವರು ಕಳೆದ ವರ್ಷ ಸ್ಥಾಪಿಸಿದ 12ನಿ.03.6ಸೆ.ಗಳ ದಾಖಲೆ ಅಳಿಸಿದರು. ಟ್ರಿಪಲ್‌ಜಂಪ್‌ನಲ್ಲಿ ಶೀನಾ ಎಂ.ವಿ. ಅವರು 13.08ಮೀ. ದೂರ ನೆಗೆದು ಶಿಲ್ಪಾ ಚಾಕೋ ಕಳೆದ ವರ್ಷ ಬರೆದ 12.75ಮೀ. ದಾಖಲೆಯನ್ನು ಮುರಿದರು.
ಪುರುಷರ ಟ್ರಿಪಲ್‌ಜಂಪ್‌ನಲ್ಲಿ ಕಾರ್ತಿಕ್ ಬಸಗೊಂಡಪ್ಪ ಅವರು 15.67ಮೀ.ಗಳ ಹೊಸ ದಾಖಲೆಗೆ ಕಾರಣರಾಗಿ, ಕಾರ್ತಿಕ್ ಬಸನಗೊಂಡಪ್ಪ ಕಳೆದ ವರ್ಷ ಸ್ಥಾಪಿಸಿದ 15.02ಮೀ. ದಾಖಲೆ ಅಳಿಸಿದರು. ಇನ್ನು ಪೋಲ್‌ವಾಲ್ಡ್‌ನಲ್ಲಿ ಆಳ್ವಾಸ್‌ನ ಅನುಜ್ ಹಾಗೂ ಕೃಷ್ಣಪ್ರಶಾಂತ್ ವಿ. 4.50ಮೀ. ಎತ್ತರ ನೆಗೆದು ಕಳೆದ ವರ್ಷ ಅದೇ ಕಾಲೇಜಿನ ವಿದ್ಯಾರ್ಥಿಗಳ 4.46ಮೀ.ನ ಸಾಧನೆಯನ್ನು ಹಿಂದಿಕ್ಕಿದರು.
ಇನ್ನು ಪುರುಷರ 5000ಮೀ. ಸ್ಪರ್ಧೆಯಲ್ಲಿ ರಾಬಿನ್ ಸಿಂಗ್ ಅವರು 14ನಿ.55.50ಸೆ.ಗಳಲ್ಲಿ ಗುರಿಮುಟ್ಟಿ, ಕಳೆದವರ್ಷ ಅಭಿಷೇಕ್ ಪಾಲ್ ಬರೆದ 15ನಿ.07.2ಸೆ.ಗಳ ದಾಖಲೆಯನ್ನು ಮುರಿದರು. ಡಿಸ್ಕಸ್ ಎಸೆತದಲ್ಲಿ ಲಕ್ವಿಂದರ್ ಸಿಂಗ್ ಚಕ್ರವನ್ನು 53.16ಮೀ. ದೂರ ಎಸೆದು ಅದೇ ಕಾಲೇಜಿನ ವಿಷ್ಣುವರ್ದನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು.
ಕೂಟದ ಮೊದಲ ದಿನದ ಫಲಿತಾಂಶ ಹೀಗಿದೆ.
ಪುರುಷರ ವಿಭಾಗ
100ಮೀ.:
1.ಅನುರೂಪ್ ಜಾನ್, ಆಳ್ವಾಸ್ (ದಾಖಲೆ ಸಮ- 10.5ಸೆ.),
2. ಮನೀಶ್, ಎಂಜಿಎಂ ಉಡುಪಿ
3.ಜಿತೇಶ್ ಕುಮಾರ್, ಆಳ್ವಾಸ್.
400ಮೀ.:
1.ಧಾರುಣ್ ಎ., ಆಳ್ವಾಸ್ (ದಾಖಲೆ ಸಮ-48.5ಸೆ.),
2.ಸಚಿನ್, ನಿಟ್ಟೆ ಕಾಲೇಜು
3.ಚೇತನ್ ಪೂಜಾರಿ, ನಿಟ್ಟೆ ಕಾಲೇಜು.
800ಮೀ.:
1.ಭರತ್ ಕೆ.ಎ. ಆಳ್ವಾಸ್ (1ನಿ.55.02ಸೆ.),
2.ಹರ್ಕುಡ್ ಅಭಿಜಿತ್ ಭಗವಾನ್ ಆಳ್ವಾಸ್,
3.ಭರತ್ ಕೆ.ಎ.ಎಚ್.ವಿ. ನಿಟ್ಟೆ ಕಾಲೇಜು.
5000ಮೀ.:
1.ರಾಬಿನ್ ಸಿಂಗ್ ಆಳ್ವಾಸ್ (14ನಿ.55.50ಸೆ.),
2.ಅರ್ಜುನ್ ಕುಮಾರ್ ಆಳ್ವಾಸ್,
3.ಕೀರ್ತೇಶ್ ಬಿ., ಕೆಎಸ್‌ಎಸ್ ಕಾಲೇಜು ಸುಬ್ರಹ್ಮಣ್ಯ.
ಹಾಫ್‌ಮ್ಯಾರಥಾನ್:
1.ರಂಜಿತ್‌ಕುಮಾರ್ ಪಾಟೀಲ್, ಆಳ್ವಾಸ್ (1:02.50),
2.ಕುಂಬಾರ ಕಾಂತಿಲಾಲ್ ದೇವರಾಮ್, ಆಳ್ವಾಸ್
3.ಕೀರ್ತೆಶ್ ಬಿ., ಕೆಎಸ್‌ಎಸ್ ಕಾಲೇಜು ಸುಬ್ರಹ್ಮಣ್ಯ.
ಗುಂಡು ಎಸೆತ:
1. ಆಲ್ಪಿನ್ ವಿ.ಪಿ. ಆಳ್ವಾಸ್ (16.45ಮೀ.),
2.ಲಕ್ವಿಂದರ್ ಸಿಂಗ್, ಆಳ್ವಾಸ್
3.ರಾಹುಲ್ ಸುವರ್ಣ, ಮಿಲಾಗ್ರಿಸ್ ಕಲ್ಯಾಣಪುರ.
20ಕಿ.ಮೀ..ನಡಿಗೆ:
1. ಕುಲ್‌ದೀಪ್ ಆಳ್ವಾಸ್ (1ಗಂ.42.00ನಿ.),
2. ಗಿರೀಶ್ ಎ. ಎಂಯು ಕ್ಯಾಂಪಸ್ ಕೊಣಾಜೆ,
3.ಹನುಮಂತ ಜೆ.ಕೆ. ಸೈಂಟ್ ಮೇರೀಸ್ ಶಿರ್ವ.
ಸ್ಟೀಪಲ್ ಚೇಸ್:
1. ಹರಿಭಕ್ಷ್ ಸಿಂಗ್ ಆಳ್ವಾಸ್ (9ನಿ.25:40ಸೆ.),
2.ವಾಗ್ ಸುರೇಶ್ ಹಿರಾಮನ್, ಆಳ್ವಾಸ್
3.ಶ್ರೇಯಸ್ ಎಸ್.ಎಸ್., ಎಸ್‌ಡಿಎಂ ಉಜಿರೆ.
ಟ್ರಿಪಲ್‌ಜಂಪ್
1.ಕಾರ್ತಿಕ್ ಬಸಗೊಂಡಪ್ಪ, ಆಳ್ವಾಸ್ (15.67ಮೀ.),
2.ಶ್ರೀಜಿತ್ ಮೋನ್ ಕೆ., ಆಳ್ವಾಸ್,
3.ವಿನೋದ್ ವಿ.ನಾಯ್ಕ, ಎಸ್‌ಡಿಎಂ ಉಜಿರೆ.
ಡಿಸ್ಕಸ್ ತ್ರೋ:
1.ಲಕ್ವಿಂದರ್ ಸಿಂಗ್, ಆಳ್ವಾಸ್ (53.36ಮೀ.)
2.ಅಭಿಲಾಷ್ ಆಳ್ವಾಸ್,
3.ಸುದರ್ಶನ್ ನಿಟ್ಟೆ ಕಾಲೇಜು.
ಮಹಿಳೆಯರ ವಿಭಾಗ
100ಮೀ.:
1.ಅಕ್ಷತಾ ಪಿ.ಎಸ್., ಎಸ್‌ಡಿಎಂ ಉಜಿರೆ (ದಾಖಲೆ ಸಮ-11.8ಸೆ.),
2.ಸ್ನೇಹ ಎಸ್.ಎಸ್., ಎಸ್‌ಡಿಎಂ ಉಜಿರೆ,
3.ಪದ್ಮಿನಿ ಎಂ.ಜಿ. ಆಳ್ವಾಸ್.
400ಮೀ.:
1. ನಿತ್ಯಾಶ್ರೀ, ಆಳ್ವಾಸ್ (56.3ಸೆ.),
2.ಮಿಲನ್ ಡಿ.ಎನ್., ಎಸ್‌ಡಿಎಂ ಉಜಿರೆ,
3.ಪಲ್ಲವಿ ಡಿ.ಜೆ. ಎಸ್‌ಡಿಎಂ ಉಜಿರೆ.
800ಮೀ.:
1.ಗಾಲ್ವಿ ಯೋಗಿತಾ ಗುಲಾಬ್, ಆಳ್ವಾಸ್ (2:14.03ಸೆ.),
2.ಸಿಂಗ್ ರಿಶು ದಾಲ್‌ಸಿಂಗರ್, ಆಳ್ವಾಸ್
3.ಅಕ್ಷತಾ ಪಿ.ಎಲ್, ಆಳ್ವಾಸ್ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಮೂಡಬಿದೆ.
ಹಾಫ್ ಮ್ಯಾರಥಾನ್:
1. ಚೌಹಾನ್ ಜ್ಯೋತಿ ಜಗ್‌ಬಹಾದುರ್, ಆಳ್ವಾಸ್ (2:27.02),
2.ಸೌಮ್ಯ ಕೆ., ಆಳ್ವಾಸ್
3.ಮೇಘನಾ ಕೆ., ಎಸ್‌ಡಿಎಂ ಉಜಿರೆ.
ಚಕ್ರ ಎಸೆತ:
1.ಸೋನಲ್ ಗೋಯಲ್, ಆಳ್ವಾಸ್ (39.31ಮೀ.),
2.ಐಶ್ವರ್ಯ ಪಿ. ಆಳ್ವಾಸ್,
3.ವಾಣಿಶ್ರೀ, ಎಂ.ಯು.ಕ್ಯಾಂಪಸ್ ಕೊಣಾಜೆ,
5ಕಿ.ಮೀ. ನಡಿಗೆ:
1.ಅರ್ಪಿತಾ ಆಳ್ವಾಸ್ (28:36.20),
2.ಸ್ಮಿತಾ ಎಚ್.ಡಿ., ಆಳ್ವಾಸ್,
3.ವಿಲ್ಮಾ ಡಿಸೋಜ, ಎಸ್‌ಡಿಎಂ ಉಜಿರೆ.
ಸ್ಟೀಪಲ್ ಚೇಸ್:
1.ಸಫೀದ್ ಎಂ.ಇ., ಆಳ್ವಾಸ್ (11:34:70),
2.ಶಾರದಾ ಪಿ.ಶೆಟ್ಟಿ, ಆಳ್ವಾಸ್,
3.ಶಾಂತ, ಎಸ್‌ಡಿಎಂ ಉಜಿರೆ.
ಟ್ರಿಪಲ್ ಜಂಪ್:
1.ಶೀನ ಎನ್.ವಿ. ಆಳ್ವಾಸ್ (13.08ಸೆ.),
2.ಶಿಲ್ಪಾ ಚಾಕೋ, ಆಳ್ವಾಸ್
3.ಪ್ರಿಯಾ ಎ., ಎಸ್‌ಡಿಎಂ ಉಜಿರೆ.







