ಪೂರ್ಣಪ್ರಜ್ಞ ಸಂಶೋಧನಾ-ಅಭಿವೃದ್ಧಿ ಕೇಂದ್ರ ಉದ್ಘಾಟನೆ

ಉಡುಪಿ, ಅ.7: ಪ್ರಾಧ್ಯಾಪಕ ಒಬ್ಬ ಉತ್ತಮ ಸಂಶೋಧಕನೂ ಆಗಿರುವುದು ಅಗತ್ಯ. ಸಂಶೋಧಿತ ಸತ್ಯಗಳ ಅರಿವುಳ್ಳ ಪ್ರಾಧ್ಯಾಪಕ, ಆ ಸತ್ಯಗಳನ್ನು ತನ್ನ ತಲೆಯಲ್ಲಿ ತುಂಬಿಕೊಂಡು ವಿದ್ಯಾರ್ಥಿಗಳಿಗೆ ಅವುಗಳನ್ನು ವರ್ಗಾಯಿಸಿದಾಗ ಆತನ ಕೆಲಸ ಸಾರ್ಥಕವಾಗುತ್ತದೆ. ಸಂಶೋಧನೆಯ ಅಪಾರ ಸಾಧ್ಯತೆಗಳನ್ನು ಎಲ್ಲರೂ ಮನಗಾಣಬೇಕು ಎಂದು ಉಡುಪಿ ಶ್ರೀಅದಮಾರು ಮಠಾಧೀಶ ಹಾಗೂ ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಅಂಗಸಂಸ್ಠೆಯಾಗಿ ಉಡುಪಿಯಲ್ಲಿ ರೂಪುಗೊಂಡ ‘ಪೂರ್ಣಪ್ರಜ್ಞ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರ’ವನ್ನ್ರು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರದ ಸಂಚಾಲಕ ಡಾ. ಕೃಷ್ಣ ಕೊತಾಯ ಮಾತನಾಡಿ, ದೇಶ-ವಿದೇಶ ಗಳಲ್ಲಿ ಸಂಶೋಧನೆಗಿರುವ ಮಹತ್ವ ಹಾಗೂ ಅಗತ್ಯಗಳನ್ನು ವಿವರಿಸಿದರು. ಭಾರತದಲ್ಲಿ ಸಂಶೋಧನೆಗೆ ಸಿಗಬೇಕಾದ ಮಹತ್ವ ಮುಂದೆ ಸಿಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪಿಐಎಂನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸಂಶೋಧನೆಗೆ ವಿಶೇಷ ಗಮನ ಹರಿಸಬೇಕು. ಮೌಲಿಕವಾದ ಸಂಶೋಧನೆಯ ಅಗತ್ಯವಿರುವುದರಿಂದ, ಹೊಸ ಕೇಂದ್ರ ಈ ನಿಟ್ಟಿನಲ್ಲಿ ಕಾರ್ಯಪ್ರವರ್ತವಾಗಬೇಕೆಂದು ಸಲಹೆ ನೀಡಿದರು.
ಪಿಐಎಂ ನಿರ್ದೇಶಕ ಡಾ.ಎಂ.ಆರ್. ಹೆಗಡೆ ಸ್ವಾಗತಿಸಿ, ಸಂಸ್ಥೆಯ ಈ ಹೊಸ ಸಂಶೋಧನಾ ಕೇಂದ್ರದ ಉದ್ದೇಶಗಳನ್ನು ವಿವರಿಸಿದರು. ವಿದ್ಯಾರ್ಥಿನಿ ಸಂಜನಾ ನಿಂಜೂರ್ ಕಾರ್ಯಕ್ರಮ ನಿರೂಪಿಸಿದರೆ ಮಾನಸ ಆರ್. ವಂದಿಸಿದರು.







