ಸಂಗೀತಕ್ಕೆ ಜನತೆಯನ್ನ್ನು ಒಟ್ಟುಗೂಡಿಸುವ ಶಕ್ತಿಯಿದೆ: ಟಿ.ಆರ್.ಶ್ರೀಧರ್
ಗೀತ-ಗಾಯನ ಸ್ಪರ್ಧಾ ಕಾರ್ಯಕ್ರಮ

ತರೀಕೆರೆ, ಅ.7: ದೇಶದ ಜನತೆಯನ್ನು ಒಟ್ಟುಗೂಡಿಸುವ ಶಕ್ತಿ ಸಂಗೀತಕ್ಕಿದ್ದು ಜಾತಿ ಮತ್ತು ಧರ್ಮಗಳ ಜೊತೆಗಿನ ಗಡಿಯನ್ನು ಮರೆಸುವ ಶಕ್ತಿ ಹೊಂದಿದೆ ಎಂದು ಮಾಜಿ ಪುರಸಭೆ ಸದಸ್ಯ ಹಾಗೂ ವಾಯ್ಸಿ ಆಫ್ ತರೀಕೆರೆ ಕಾರ್ಯಕ್ರಮದ ಸಂಚಾಲಕ ಟಿ.ಆರ್.ಶ್ರೀಧರ್ ಹೇಳಿದರು.
ಅವರು ಪಟ್ಟಣದ ಪ್ರಸನ್ನ ಗಣಪತಿ ಪೆಂಡಾಲ್‌ನಲ್ಲಿ 60ನೆ ಗಣೇಶೊತ್ಸವದ ಅಂಗವಾಗಿ ಪ್ರಸನ್ನ ಗಣಪತಿ ಸೇವಾ ಸಮಿತಿ, ಮಿತ್ರ ಬಳಗ, ರೋಟರಿ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಇನ್ನರ್‌ವೀಲ್ ಸಂಸ್ಥೆ ಆಯೋಜಿಸಿದ್ದ ವಾಯ್ಸೆ ಆಫ್ ತರೀಕೆರೆ-2016 ಗೀತ-ಗಾಯನ ಸ್ಪರ್ಧಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಸಮನ್ವಯ ಟ್ರಸ್ಟ್‌ನ ಅಧ್ಯಕ್ಷ ಕಾಶಿ ಮಾತನಾಡಿ, ಇಂದಿನ ಯುವ ಪೀಳಿಗೆ ಮೊಬೈಲ್ ಮತ್ತು ಟಿವಿಯತ್ತ ಆರ್ಕಷಿತರಾಗುತ್ತಿರುವುದರಿಂದ ಸಂಸ್ಕೃತಿ ಬೆಳೆಸುವಲ್ಲಿ ಹಿನ್ನಡೆಯಾಗುತ್ತಿದೆ. ಸೋಲು ಗೆಲುವೆಂಬುದು ಈ ಜಗತ್ತಿನಲ್ಲಿ ಎಂದಿಗೂ ಇಲ್ಲ, ಸ್ಪರ್ಧೆ ಕೇವಲ ಪ್ರಯತ್ನವಷ್ಟೇ ಎಂದರು.
ರೋಟರಿ ಅಧ್ಯಕ್ಷ ಗೋವರ್ಧನ್ ಮಾತನಾಡಿ, ಪ್ರತಿಭೆಗಳ ಅನಾವರಣಕ್ಕೆ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದೆ ಎಂದರು.
ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಜೂನಿಯರ್ ವಿಭಾಗದಿಂದ ವೈಷ್ಣವಿ, ವಿಜೇತಾ, ಸುಶಾಂತ್ ಹಾಗೂ ಸೀನಿಯರ್ ವಿಭಾಗದಿಂದ ಮಂಜುನಾಥ್.ಜಿ, ಸುಶ್ಮಿತಾ.ಜಿ.ಎಂ ಮತ್ತು ರಾಝಿಕ್ ಪಾಶಾ ಪ್ರಥಮ, ದ್ವಿತೀಯ, ಸ್ಥಾನಗಳನ್ನು ಪಡೆದು ವಿಜೇತರಾದರು
ಕಾರ್ಯಕ್ರಮದಲ್ಲಿ ವಾಣಿ ಶ್ರೀನಿವಾಸ್, ಇಂದ್ರಯ್ಯ, ಇನ್ನರ್‌ವೀಲ್ ಸಂಸ್ಥೆಯ ಅಧ್ಯಕ್ಷೆ ಮಂಜುಳಾ ಶರತ್, ತಾಲೂಕು ಕಸಾಪ ಅಧ್ಯಕ್ಷ ದಾದಾಪೀರ್, ರಾಜಶೇಖರ್, ಸದಾನಂದ್, ನವೀನ್ ಪೆನ್ನಯ್ಯ, ಉಮಾಪ್ರಕಾಶ್, ವಿಜಯಪ್ರಕಾಶ್ ಹಾಗೂ ಇತರರು ಭಾಗವಹಿಸಿದ್ದರು.ಮಹೇಂದ್ರ ಗೋರೆ, ಪ್ರಹ್ಲಾದ್ ದೀಕ್ಷಿತ್ ಮತ್ತು ಸುಮತಿ ನಟರಾಜ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.







