ಗಮನ ಸೆಳೆದ ಮಹಿಳಾ ದಸರಾ ‘ಮಹಿಳೆಯರು ರಾಜಕೀಯವಾಗಿ ಸಬಲರಾಗಬೇಕು’

ಮಡಿಕೇರಿ, ಅ. 7 : ಮಹಿಳೆಯರು ರಾಜಕೀಯವಾಗಿ ಸಬಲರಾಗಬೇಕು. ಗ್ರಾಪಂ ನಿಂದ ಆರಂಭಗೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರು ಗಮನ ಸೆಳೆಯುತ್ತಿರುವುದು ಉತ್ತಮ ಬೆಳವ ಣಿಗೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.
ನಗರ ದಸರಾ ಸಮಿತಿು ಸಾಂಸ್ಕೃತಿಕ ಸಮಿತಿಯ ವತಿಯಿಂದ ಶುಕ್ರವಾರ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ವೈವಿಧ್ಯಮಯ ಕಾರ್ಯಕ್ರವನ್ನು ಮೆಹಂದಿ ಹಾಕಿಸಿಕೊಳ್ಳುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಲ್ಲಾ ಕಾರ್ಯಕ್ರಮಗಳಲ್ಲಿ ನಗರ ಭಾಗದ ಮಹಿಳೆಯರು ಮಾತ್ರವಲ್ಲದೆ, ಗ್ರಾಮೀಣ ಮಹಿಳೆಯರೂ ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತ ನಾಡಿ,
ುಹಿಳೆಯರಿಂದ ಮಹಿಳೆಯರಿಗಾಗಿ ಆಯೋಜಿಸುವ ಮಹಿಳಾ ದಸರಾದಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮಹಿಳೆಯರು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕೆಂದು ಕರೆ ನೀಡಿದರು. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂಬುದನ್ನು ಸಾಬೀತು ಪಡಿಸಬೇಕು ಎಂದರು.
ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಸಮಾಜದಲ್ಲಿ ಶೋಷಿತ ಮಹಿಳೆಯರನ್ನು ನಮ್ಮವರೆಂದು ಪರಿಗಣಿಸಿ ಅವರನ್ನು ತಮ್ಮಂದಿಗೆ ಬೆರೆಯುವಂತೆ ಸ್ಪಂದಿಸಬೇಕು. ಸಮಾಜದ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕು ಎಂದರು.
ನಗರಸಬಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗರಸಭಾ ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ, ನಗರಸಭೆಯ ಮಾಜಿ ಅಧ್ಯಕ್ಷೆ ಝುಲೇಕಾಬಿ ದಸರಾ ಸಮಿತಿಯ ಖಜಾಂಚಿ ಅನಿತಾ ಪೂವಯ್ಯ, ನಗರಸಭೆಯ ಮಹಿಳಾ ಸದಸ್ಯರು ಮತ್ತು ದಸರಾ ಸಮಿತಿಯ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗಮನ ಸೆಳೆದ ಸ್ಪರ್ಧೆಗಳು
ಮಹಿಳಾ ದಸರಾ ಅಂಗವಾಗಿ ಸಿರಿಧಾನ್ಯ ಮೇಳ, ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆ, ಮೆಹಂದಿ ಹಾಕುವುದು, ಏಕಪಾತ್ರಾಭಿನಯ ಸ್ಪರ್ಧೆ, ಮಹಿಳಾ ಸಂಘಗಳಿಗೆ ಉತ್ಪನ್ನಗಳ ಪ್ರದರ್ಶನ ಸ್ಪರ್ಧೆ, ಸೀರೆಯ ನಿಖರ ಬೆಲೆ ಹೇಳುವುದು. ವಾಲಗ ನೃತ್ಯ ಸ್ಪರ್ಧೆ ಸೇರಿದಂತೆ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮಗಳು ಗಮನ ಸೆಳೆದವು.







