Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚೇತರಿಸಿಕೊಳ್ಳದ ರಿಯಲ್ ಎಸ್ಟೇಟ್ ಉದ್ಯ ...

ಚೇತರಿಸಿಕೊಳ್ಳದ ರಿಯಲ್ ಎಸ್ಟೇಟ್ ಉದ್ಯ ಮ!

ಶಿವಮೊಗ್ಗಕ್ಕೆ ಸ್ಮಾರ್ಟ್ ಸಿಟಿ ಭಾಗ್ಯ

ವಾರ್ತಾಭಾರತಿವಾರ್ತಾಭಾರತಿ7 Oct 2016 10:18 PM IST
share
ಚೇತರಿಸಿಕೊಳ್ಳದ ರಿಯಲ್ ಎಸ್ಟೇಟ್  ಉದ್ಯ  ಮ!

ಶಿವಮೊಗ್ಗ, ಅ. 7: ಕಳೆದೊಂದು ವರ್ಷದ ಹಿಂದೆ ಕೇಂದ್ರ ಸರಕಾರದ ಪ್ರತಿಷ್ಠಿ ‘ಸ್ಮಾರ್ಟ್ ಸಿಟಿ’ ಯೋಜನೆಯ ಪಟ್ಟಿಯಲ್ಲಿ ಶಿವಮೊಗ್ಗ ನಗರ ಸ್ಥಾನ ಪಡೆದುಕೊಳ್ಳುತ್ತಿದ್ದಂತೆ ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ‘ಸ್ಮಾರ್ಟ್ ಸಿಟಿ’ ಯೋಜನೆ ಹಿನ್ನೆಲೆಯಲ್ಲಿಯೇ ಹೊಸ ಹೊಸ ಬಡಾವಣೆಗಳ ರಚನೆ ಪ್ರಕ್ರಿಯೆಗಳು ನಗರದಲ್ಲಿ ಆರಂಭವಾಗಿತ್ತು. ನಾಗರಿಕ ವಲಯದಿಂದಲೂ ನಿವೇಶನ ಖರೀದಿ

ೆ ಬೇಡಿಕೆ ಕಂಡುಬಂದಿತ್ತು. ಆದರೆ ಪ್ರಸ್ತುತ ರಿಯಲ್ ಎಸ್ಟೇಟ್ ಉದ್ಯಮದ ಸ್ಥಿತಿಗತಿ ಗಮನಿಸಿದರೆ ಈ ಹಿಂದಿದ್ದ ಉತ್ಸಾಹ ಮಾಯವಾಗಿದೆ. ಮತ್ತೊಂದೆಡೆ ಏಕಾಏಕಿ ನಾಗರಿಕರಿಂದ ನಿವೇಶ ನಗಳ ಬೇಡಿಕೆ ಕಡಿಮೆಯಾಗ ತೊಡಗಿದೆ. ನಗರದ ಸುತ್ತಮುತ್ತಲು ಸ್ಥಿರಾಸ್ತಿ ಮೇಲೆ ಬಂಡವಾಳ ಹೂಡಲು ಪೈಪೋಟಿ ನಡೆಸುತ್ತಿದ್ದ ಹೊರ ಊರಿನ ಹೂಡಿಕೆದಾರರ ಸಂಖ್ಯೆ ಕೂಡ ಕಡಿಮೆಯಾಗಿದೆ. ಇದರಿಂದ ಶಿವ ಮೊಗ್ಗ ನಗರ ‘ಸ್ಮಾರ್ಟ್ ಸಿಟಿ’ಯಡಿ ಅಭಿವೃದ್ಧಿ ಪ್ರಕ್ರಿಯೆಗೆ ಆಯ್ಕೆ ಯಾದರೂ ರಿಯಲ್ ಎಸ್ಟೇಟ್ ವಲಯದಲ್ಲಿ ಈ ಹಿಂದೆ ಕಂಡು ಬಂದಿದ್ದ ಉತ್ಸಾಹದ ವಾತಾವರಣ ಕಂಡು ಬರುತ್ತಿಲ್ಲ. ತಣ್ಣನೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ‘ಸ್ಮಾರ್ಟ್ ಸಿಟಿ’ಗೆ ಆಯ್ಕೆಯಾದರೆ ನಿವೇಶನ-ಮನೆಗಳ ದರ ದಲ್ಲಿ ಏರಿಕೆಯಾಗಲಿದೆ ಎಂಬ ಮಧ್ಯಮ ವರ್ಗದವರಲ್ಲಿ ಮನೆ ಮಾಡಿದ್ದ ನಿರೀಕ್ಷೆ-ಆತಂಕಗಳೂ ತಲೆಕೆಳಗಾಗುವಂ ತೆ ಮಾಡಿದೆ. ಕಳೆದ ಏಳೆಂಟು ವರ್ಷಗಳ ಹಿಂದೆ ಶಿವಮೊಗ್ಗ ರಿಯಲ್ ಎಸ್ಟೇಟ್ ಉದ್ಯಮ ಹೇಳಿಕೊಳ್ಳುವಂತಹ ಮಟ್ಟದಲ್ಲಿರಲಿಲ್ಲ. ನಿವೇಶನ-ಮನೆಗಳಿಗೆ ಹೇಳಿಕೊಳ್ಳುವಂತಹ ವೌಲ್ಯವೂ ಇರಲಿಲ್ಲ. ಆದರೆ, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಚೇತರಿಕೆ ಕಾ

ಣಲಾರಂಭಿಸಿತು. ಬಿಜೆಪಿ ಸರಕಾರದ ಅವಧಿಯಲ್ಲಂತೂ ದಯನೀಯ ಸ್ಥಿತಿಗೆ ತಲುಪಿತ್ತು. ಬಳಿಕ ದಿಢೀರ್ ಆಗಿ ನಿವೇಶನ-ಮನೆಗಳ ಬೆಲೆ ನಾಗಾಲೋಟದಲ್ಲಿ ಏರಲಾರಂಭಿಸಿತು. ಹೊರ ಜಿಲ್ಲೆ, ರಾಜ್ಯ, ವಿದೇಶದವರೂ ನಗರದಲ್ಲಿ ನಿವೇಶನ-ಮನೆ-ಆಸ್ತಿಯ ಮೇಲೆ ಬಂಡವಾಳ ಹೂಡಿಕೆ ಮಾಡಲಾರಂಭಿಸಿದರು. ನಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಹೊಸ ಹೊಸ ಬಡಾವಣೆಗಳು ನಿರ್ಮಾಣವಾಗಲಾರಂಭಿಸಿದವು.

ಬಿ.ಎಸ್. ಯಡಿಯೂರಪ್ಪಸಿಎಂ ಸ್ಥಾನದಿಂದ ಇಳಿಯುತ್ತಿದ್ದಂತೆ ಶಿವಮೊಗ್ಗ ರಿಯಲ್ ಎಸ್ಟೇಟ್ ಉದ್ಯಮದ ಚಟುವಟಿಕೆ ಇಳಿಮುಖವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಚಟುವಟಿಕೆ ಮಾತ್ರ ಇಳಿಕೆಯಾಗಿರಲಿಲ್ಲ. ನಿವೇಶನಗಳ ಬೆಲೆಯೂ ತಗ್ಗಿರಲಿಲ್ಲ. ಹೊಸ ಹೊಸ ಬಡಾವಣೆ ರಚನೆ ಪ್ರಕ್ರಿಯೆಯ ವೇಗ ಈ ಹಿಂದಿನಂತೆಯೇ ಮುಂದುವರಿದಿತ್ತು. ಹುಸಿಯಾದ ನಿರೀಕ್ಷೆ: ಈ ನಡುವೆ ನಗರವೂ ‘ಸ್ಮಾರ್ಟ್ ಸಿಟಿ’ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತು. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮತ್ತಷ್ಟು ವೇಗ ದೊರಕುವ ಲಕ್ಷಣಗಳು ಗೋಚರವಾಗಿದ್ದವು. ಕೆಲ ಲೇಔಟ್ ಮಾಲಕರು ‘ಸ್ಮಾರ್ಟ್ ಸಿಟಿ’ಯಲ್ಲಿ ನಿವೇಶನ-ಮನೆ ನಿಮ್ಮದಾಗಿಸಿಕೊಳ್ಳಿ ಎಂದು ಪ್ರಚಾರ ಕೂಡ ನಡೆಸಿದರು. ಆದರೆ ಪ್ರಸ್ತುತ ನಗರ ವ್ಯಾಪ್ತಿ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಭಾರೀ ದೊಡ್ಡ ಸಂಖ್ಯೆಯಲ್ಲಿ ಲೇಔಟ್‌ಗಳ ನಿರ್ಮಾಣ ಮಾಡಲಾಗಿದೆ. ಸಾವಿರಾರು ನಿವೇಶನಗಳು ಮಾರಾಟಕ್ಕಿವೆ. ಆದರೆ, ಗ್ರಾಹಕರ ಉತ್ಸಾಹ ಕಡಿಮೆಯಾಗಿದ್ದು, ಕೊಳ್ಳುವವರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಹಲವು ಗೃಹ ನಿರ್ಮಾಣ ಸಹಕಾರ ಸಂಘಗಳು, ನೌಕರರ ಸಂಘಗಳು ಬಡಾವಣೆ ರಚನೆ ಮಾಡಿ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ಮುಂದಾಗಿವೆ. ಇದರಿಂದಲೂ ಖಾಸಗಿ ನಿವೇಶನಗಳ ಬೇಡಿಕೆ ಇಳಿಕೆಯಾಗಲು ಕಾರಣವಾಗಿರಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ. ಒಟ್ಟಾರೆ ಶಿವಮೊಗ್ಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸದ್ಯದ ಚಟುವಟಿಕೆ ತಣ್ಣಗಿದೆ. ಯಾವಾಗ ಮತ್ತೆ ಚುರುಕು ಪಡೆಯಲಿದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ. ಅನುಮತಿ ಕೋರುವವರು ಕಡಿಮೆ: ಆಯುಕ್ತ ಮೂಕಪ್ಪ

ಕಳೆದ ಕೆಲ ತಿಂಗಳಿಂದ ಹೊಸದಾಗಿ ಬಡಾವಣೆ ರಚನೆಗೆ ಅನುಮತಿ ಕೋರಿ ಹಾಗೂ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಕಾರಣವೆನೆಂಬುವುದು ತಮಗೆ ಗೊತ್ತಿಲ್ಲ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೂಕಪ್ಪಎಂ. ಕರಭೀಮಣ್ಣವರ್ ತಿಳಿಸಿದಾ

್ದರೆ. ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ವರ್ಷಗಳಲ್ಲಿ ನಗರ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಡಾವಣೆ ರಚನೆಗೆ ಅನುಮತಿ ಕೋರಿ ಆಗಮಿಸುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಜಮೀನುಗಳ ಭೂ ಪರಿವರ್ತನೆ ಮಾಡಿಸುವ ಪ್ರಕ್ರಿಯೆ ಕೂಡ ಏರುಗತಿಯಲ್ಲಿತ್ತು. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ ಹೊಸ ಬಡಾವಣೆ ರಚನೆ ಪ್ರಕ್ರಿಯೆಗಳು ಕಡಿಮೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಹೊಸದಾಗಿ ಬಡಾವಣೆ ರಚನೆ ಮಾಡುವವರಿಗೆ ಈ ಹಿಂದೆ ಹಂತಹಂತವಾಗಿ ನಿವೇಶನ ನೋಂದಣಿ ಮಾಡಿಕೊಡಲು ಅವಕಾಶ ಕಲ್ಪಿಸಲಾಗುತ್ತಿತ್ತು. ಪ್ರಸ್ತುತ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು, ಲೇಔಟ್‌ಗಳ ರಚನೆ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಂಡು, ನಿಯಮಾನುಸಾರ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿದ ನಂತರವಷ್ಟೆ ಏಕಕಾಲಕ್ಕೆ ನಿವೇಶನ ನೋಂದಣಿ-ಪರಭಾರೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಇದೇ ಸಂದರ್ಭ ಆಯುಕ್ತರು ಹೇಳಿದ್ದಾರೆ.

ಫಲವತ್ತಾದ ಬತ್ತದ ಗದ್ದೆ, ತೋಟ ಗಳು ಕೂಡ ಲೇಔಟ್‌ಗಳಾಗಿ ಪರಿ ವರ್ತಿತ ವಾಗಲಾರಂಭಿಸಿದವು. ಬೆಂಗ ಳೂರು, ಮೈಸೂರಿನ ರಿಯಲ್ ಎಸ್ಟೇಟ್ ಉ್ಯಮಿಗಳು ನಗರದಲ್ಲಿ ಲೇಔಟ್, ಫ್ಲ್ಯಾಟ್‌ಗಳ ನಿರ್ಮಾಣ ಮಾಡ ಲಾರಂಭಿಸಿದರು. ಮಧ್ಯಮ - ಬಡ ವರ್ಗದವರು ಸ್ವಂತ ನಿವೇಶನ-ಮನೆ ಖರೀದಿಸುವುದು ಕನಸಿನ ಮಾತಾಗಿ ಪರಿಣಮಿಸಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳ ಲೆಕ್ಕಾಚಾರವೆಲ್ಲ ತಲೆಕೆಳಗಾಗಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X