ಮೃತರ ಸಂಖ್ಯೆ6ಕ್ಕೆ; ಅಂತ್ಯಗೊಂಡ ಕಾರ್ಯಾಚರಣೆ
ಬೆಂಗಳೂರು, ಅ.7: ಬೆಳ್ಳಂದೂರು ಗೇಟ್ ಬಳಿ ಬುಧವಾರ ಕುಸಿದ ನಿರ್ಮಾಣ ಹಂತದ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಮತ್ತೊಬ್ಬ ಕಾರ್ಮಿಕನ ಶವ ಶುಕ್ರವಾರ ಹೊರ ತೆಗೆದಿದ್ದು, ಈ ಮೂಲಕ ಸಾವಿನ ಸಂಖ್ಯೆ 6ಕ್ಕೆ ಏರಿದ್ದು, ಸತತ ಎರುಡ ದಿನಗಳ ಕಾರ್ಯಾಚರಣೆ ಅಂತ್ಯಗೊಂಡಿದೆ.
ಮೃತ ಕಟ್ಟಡ ಕಾರ್ಮಿಕನನ್ನು ಪಶ್ಚಿಮಬಂಗಾಳ ರಾಜ್ಯದ ಕೊಲ್ಕತ್ತಾ ಮೂಲದ ಶ್ರೀಕೃಷ್ಣ (22) ಎಂದು ಪೊಲೀಸರು ಗುರುತಿಸಿದ್ದಾರೆ.ಘಟನೆಯ ಮುನ್ನ ಕಾರ್ಮಿಕ ಶ್ರೀಕೃಷ್ಣ, ನಿರ್ಮಾಣ ಹಂತದ ಕಟ್ಟಡದಲ್ಲಿನ 2ನೆ ಅಂತಸ್ತಿನ ಮೆಟ್ಟಿಲುಗಳಿಗೆ ಟೈಲ್ಸ್ ಅಳವಡಿಸುತ್ತಿದ್ದರು. ಈ ವೇಳೆ ಏಕಾಏಕಿ ಕಟ್ಟಡ ವಾಲಲು ಆರಂಭಿಸಿದಾಗ ಹೊರಗೆ ಓಡಿ ಬರಲು ಪ್ರಯತ್ನಿಸಿದ್ದಾರೆ. ನೆಲ ಅಂತಸ್ತಿಗೆ ಬಂದಾಗ ಕಟ್ಟಡ ಸಂಪೂರ್ಣ ಕುಸಿದ ಪರಿಣಾಮ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಟ್ಟಡ ಕುಸಿದ ಸಂದರ್ಭದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ ಕಾರ್ಮಿಕರೊಬ್ಬರು ನೀಡಿದ ಮಾಹಿತಿ ಮೇರೆಗೆ ಶ್ರೀಕೃಷ್ಣನ ಶವ ಪತ್ತೆಗೆ ಪೊಲೀಸರು ಮುಂದಾಗಿದ್ದರು. ೆಸಿಬಿ ಮೂಲಕ ಅವಶೇಷಗಳನ್ನು ಕೆದಕಿ ಹುಡುಕಾಟ ನಡೆಸಿದಾಗ ಶುಕ್ರವಾರ ಮಧ್ಯಾಹ್ನ 12.45ರ ಸುಮಾರಿಗೆ ನೆಲ ಅಂತಸ್ತಿನಲ್ಲಿ ಶ್ರೀಕೃಷ್ಣನ ಮೃತದೇಹ ಪತ್ತೆಯಾಯಿತು.ಸಾವು- 8 ಮಂದಿಗೆ ಗಾಯ: ಭದ್ರತಾ ಸಿಬ್ಬಂದಿ ಅಶೋಕ್ ಕುಮಾರ್ ಮೆಹ್ತಾ (45), ಟೈಲ್ಸ್ ಕಾರ್ಮಿಕರಾದ ಸಮೀರ್ (19), ಶ್ರೀಕೃಷ್ಣ (22), ರಾಧಾ ನಾಯಕ್ (30) ಹಾಗೂ ಶಮ್ ಶೋಲ್ ಅಲಿ (28), ಧೃವ (22) ಎಂಬವರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದಲ್ಲಿ ದೀಪಾಂಕರ್, ಹರಿಕೃಷ್ಣ, ರಾಮ್‌ಬಾಬು, ನಾಗರಾಜ್, ಮಲ್ಲಿಕ್, ಕಾರ್ತಿಕ್, ಆದಿತ್ಯ, ಬನ್ನಪ್ಪ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ುಂಪು ಚದುರಿಸಿದರು: ಶುಕ್ರವಾರ ಕಟ್ಟಡದ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದ ಕಾರ್ಮಿಕ ಶ್ರೀಕೃಷ್ಣನ ಮೃತದೇಹ ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತುವಾಗ ಕೆಲವರು ಮೊಬೈಲ್‌ಗಳಲ್ಲಿ ವೀಡಿಯೊ ಮಾಡಿದರು. ಇನ್ನು ಕೆಲವರು ಫೋಟೋ ತೆಗೆಯುವಲ್ಲಿ ನಿರತರಾಗಿದ್ದರು. ಈ ವೇಳೆ ಪೊಲೀಸರು ಗುಂಪು ಚದುರಿಸಿದರು.